For Quick Alerts
  ALLOW NOTIFICATIONS  
  For Daily Alerts

  ದುಬಾರಿ ಸೀರೆ ಜತೆ ಪರಾರಿಯಾದರೇ ತೆಲುಗು ಸ್ಟಾರ್ ನಟಿ?

  |

  ಟಾಲಿವುಡ್‌ನಲ್ಲಿ ಕುತೂಹಲಕಾರಿ ಗಾಸಿಪ್ ಒಂದು ಹರಿದಾಡುತ್ತಿದೆ. ಅದೂ ತೆಲುಗಿನ ತಾರಾ ನಟಿಯೊಬ್ಬರ ಬಗ್ಗೆ. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಟಿಯರು ತೀರಾ ಕೀಳುಮಟ್ಟಕ್ಕೆ ಇಳಿದ ವರ್ತನೆಯ ಸುದ್ದಿ ಇದು. ಆಕೆ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆಯನ್ನು ತಿಳಿದವರಿಗೆ ಹೀಗೆ ಮಾಡಲು ಸಾಧ್ಯವೇ ಎಂಬ ಅಚ್ಚರಿಯಾಗುವುದು ಸತ್ಯ.

  ಸುಮಾರು 25 ಲಕ್ಷದವರೆಗೆ ಸಂಭಾವನೆ ಪಡೆದಿರುವ ಟಾಲಿವುಡ್‌ನ ಸ್ಟಾರ್ ನಟಿಯೊಬ್ಬರನ್ನು ಶಾಪಿಂಗ್ ಮಾಲ್ ಒಂದರ ಹೊಸ ಶಾಖೆಯ ಉದ್ಘಾಟನೆಗೆ ಇತ್ತೀಚೆಗೆ ಆಹ್ವಾನಿಸಲಾಗಿತ್ತು. ಸ್ಟಾರ್ ನಟಿ ಬರುತ್ತಿರುವ ಕಾರಣಕ್ಕೆ ಭಾರಿ ಅದ್ಧೂರಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಕಾರ್ಯಕ್ರಮಕ್ಕಾಗಿ ಒಂದು ದಿನ ಮುಂಚಿತವಾಗಿಯೇ ಅಲ್ಲಿಗೆ ತೆರಳಿದ್ದ ನಟಿ, ಸಮಾರಂಭಕ್ಕೆ ನೀಡುವ ಕ್ಯಾಸ್ಟ್ಯೂಮ್‌ಅನ್ನು ಮುಂಗಡವಾಗಿಯೇ ನೀಡುವಂತೆ ಶೋರೂಂನ ಸಿಬ್ಬಂದಿಗೆ ಹೇಳಿದ್ದರು.

  ಮುಂಚೆಯೇ ಸೀರೆ ರವಾನೆ

  ಮುಂಚೆಯೇ ಸೀರೆ ರವಾನೆ

  ಹೀಗಾಗಿ ನಟಿಗೆ ಅವರು ಕೆಲವು ಸೀರೆಗಳನ್ನು ಮುಂಚಿತವಾಗಿಯೇ ರವಾನಿಸಿದ್ದರು. ಅವುಗಳಲ್ಲಿ ಒಂದನ್ನು ಅವರು ಮೊದಲೇ ಆಯ್ದುಕೊಳ್ಳಲು ಅನುಕೂಲವಾಗುತ್ತದೆ ಹಾಗೂ ಅವರಿಗೆ ಸೂಕ್ತ ರವಿಕೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಉದ್ದೇಶಿಸಿದ್ದರು.

  ಸೀರೆಯ ಜತೆಗೆ ಆಭರಣವನ್ನೂ ತರಿಸಿಕೊಂಡಿದ್ದರು

  ಸೀರೆಯ ಜತೆಗೆ ಆಭರಣವನ್ನೂ ತರಿಸಿಕೊಂಡಿದ್ದರು

  ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಸೀರೆಯನ್ನು ಆ ಹೀರೋಯಿನ್ ಆಯ್ಕೆ ಮಾಡಿಕೊಂಡಿದ್ದರಂತೆ. ಅದಕ್ಕೆ ಹೊಂದಿಕೆಯಾಗುವ ಆಭರಣಗಳನ್ನೂ (ತೀರಾ ದುಬಾರಿಯಲ್ಲದ) ಶೋರಂ ಸಿಬ್ಬಂದಿಯಿಂದಲೇ ತರಿಸಿಕೊಂಡಿದ್ದರಂತೆ. ಕಾರ್ಯಕ್ರಮ ಮುಗಿದ ಬಳಿಕ ಆಕೆ ತನ್ನ ಕ್ಯಾಸ್ಟ್ಯೂಮ್‌ಅನ್ನು ಶೋರೂಂ ಸಿಬ್ಬಂದಿಗೆ ಮರಳಿ ನೀಡಬೇಕು ತಾನೆ?

  ಉಟ್ಟ ಸೀರೆಯಲ್ಲೇ ವಿಮಾನವೇರಿದರು

  ಉಟ್ಟ ಸೀರೆಯಲ್ಲೇ ವಿಮಾನವೇರಿದರು

  ಆದರೆ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ಗೆ ಮರಳಿ ಉಡುಪು ಬದಲಿಸಿ ವಾಪಸ್ ಕೊಡುವ ಬದಲು ಅದೇ ಸೀರೆಯಲ್ಲಿ ನೇರವಾಗಿ ಕಾರ್ಯಕ್ರಮದ ಸ್ಥಳದಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದಲೂ ಅವರು ಉಡುಪನ್ನು ಬದಲಿಸಿ ಮರಳಿ ಕೊಟ್ಟಿಲ್ಲ. ಹಾಗೆಯೇ ವಿಮಾನ ಹತ್ತಿದ್ದಾರಂತೆ.

  ಮ್ಯಾನೇಜರ್‌ಗೆ ತಿಳಿಸಿದರೂ ಪ್ರಯೋಜನವಿಲ್ಲ

  ಮ್ಯಾನೇಜರ್‌ಗೆ ತಿಳಿಸಿದರೂ ಪ್ರಯೋಜನವಿಲ್ಲ

  ಕಾರ್ಯಕ್ರಮ ಆಯೋಜಕರು ಇದರಿಂದ ಕಂಗೆಟ್ಟಿದ್ದಾರೆ. ಉದ್ಘಾಟನೆಗೆ ಆಗಮಿಸಿದ ನಟಿಗೆ ದುಬಾರಿ ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿ ಭಾರಿ ಮೊತ್ತದ ಸಂಭಾವನೆ ನೀಡಿದ್ದಲ್ಲದೆ, ಸೂಕ್ತ ಅತಿಥಿ ಸತ್ಕಾರವನ್ನೂ ಮಾಡಲಾಗಿತ್ತು. ಆದರೆ ಅವರು ಬೆಲೆ ಬಾಳುವ ಉಡುಪಿನ ಸಮೇತ ಪರಾರಿಯಾಗಿದ್ದರಿಂದ ದಿಕ್ಕೆಟ್ಟು ನಟಿಯ ಮ್ಯಾನೇಜರ್‌ಗೆ ಕರೆ ಮಾಡಿ ಅಹವಾಲು ತೋಡಿಕೊಂಡಿದ್ದಾರೆ. ನಟಿಯೊಂದಿಗೆ ಉತ್ತ,ಮ ಬಾಂಧವ್ಯ ಮುಂದುವರಿಸುವುದು ಅವರ ಉದ್ದೇಶ. ಆದರೆ ಅದರಿಂದ ಪ್ರಯೋಜನವಾಗಿಲ್ಲವಂತೆ. ಆ ಸ್ಟಾರ್ ನಟಿ ಯಾರು? ಅದಿನ್ನೂ ರಹಸ್ಯವಾಗಿ ಉಳಿದಿದೆ.

  English summary
  A Tollywood star actress didn't return the saree to the showroom after she inaugurated it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X