ಮಹೇಶ್ ಬಾಬು ಪಾತ್ರಕ್ಕೆ ಹನುಮಂತನೇ ಸ್ಪೂರ್ತಿ? ರಾಜಮೌಳಿ ಸಿನಿಮಾದಲ್ಲಿ ಬೆರಗು ಮೂಡಿಸುತ್ತೆ VFX!

ರಾಜಮೌಳಿ ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತವೆ. ಸ್ಟೋರಿ, ಆಕ್ಷನ್, ಪಾತ್ರಗಳ ಆಯ್ಕೆ ಪ್ರತಿಯೊಂದು ಸದ್ದು ಮಾಡುತ್ತವೆ. ಈಗ 'RRR' ಬಳಿಕ ಕೈಗೆತ್ತಿಕೊಂಡಿರೋ ಸಿನಿಮಾ ಕೂಡ ಅಷ್ಟೇ ಸದ್ದು ಮಾಡುತ್ತಿದೆ.

ಸಿನಿಮಾದಿಂದ ಸಿನಿಮಾಗೆ ರಾಜಮೌಳಿ ಮೇಕಿಂಗ್ ಸ್ಟೈಲ್ ಬದಲಾಗುತ್ತಿದೆ. 'ಬಾಹುಬಲಿ', 'RRR' ಬಳಿಕ ಮುಂದೇನು? ಅನ್ನೋರಿಗೆ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ಜೊತೆಗೆ ಸಿನಿಮಾ ಹೇಗಿರುತ್ತೆ ಅನ್ನೋ ಸುಳಿವನ್ನೂ ಕೊಟ್ಟಿದ್ದಾರೆ.

Tollywood Super Star Mahesh Babus character in the Rajamouli movie is inspired by Lord Hanuman

'RRR' ಸಿನಿಮಾ ಬಳಿಕ ರಾಜಮೌಳಿ ವಿಶ್ವದಾದ್ಯಂತ ಸದ್ದು ಮಾಡಿದ್ದಾರೆ. ಹೀಗಾಗಿ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಇರಬಹುದಾ? ಅನ್ನೋ ಅನುಮಾನವೂ ಮೂಡಿದೆ. ಅದಕ್ಕೆ ಪೂರಕ ಎನ್ನುವಂತೆ ಮಹೇಶ್ ಬಾಬು ಪಾತ್ರದ ಬಗ್ಗೆ ಟಾಲಿವುಡ್‌ನಲ್ಲಿ ಬಿಸಿಬಿಸಿ ಸುದ್ದಿಯೊಂದು ಓಡಾಡುತ್ತಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ..

ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್

'RRR' ಸಿನಿಮಾ ಬಗ್ಗೆ ಹಾಲಿವುಡ್ ಮಂದಿ ಹೊಗಳಿಕೊಂಡಾಡಿದ್ದಾರೆ. ಹೀಗಾಗಿ ಮುಂದಿನ ಸಿನಿಮಾ ಮೇಲೆ ಜಕ್ಕಣ್ಣನ ಮೇಲೆ ಒತ್ತಡ ಹೆಚ್ಚಾಗಿದೆ. ಅಲ್ಲದೆ, ಈ ಹಿಂದೆ ಬಂದ ಸಿನಿಮಾಗಳಿಗಿಂತ ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಬಹುದು ಅನ್ನೋ ನಿರೀಕ್ಷೆಯಿದೆ. ಈಗ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ರಾಜಮೌಳಿ ಸಿದ್ದತೆ ಮಾಡಿಕೊಂಡಿದ್ದಾರೆ.

ಇನ್ನು ಮಹೇಶ್ ಬಾಬು ಈ ಸಿನಿಮಾದ ಹೀರೊ ಆಗಿರೋದ್ರಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಅದರಲ್ಲೂ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ ಅಂದ್ಮೇಲೆ ಮತ್ತಷ್ಟು ಸಂಚಲನ ಸೃಷ್ಟಿಸಿದೆ. ಇದೇ ವೇಳೆ ಟಾಲಿವುಡ್‌ನಲ್ಲಿ ಮಹೇಶ್ ಬಾಬು ಪಾತ್ರಕ್ಕೆ ರಾಜಮೌಳಿ ಎಲ್ಲಿಂದ ಸ್ಪೂರ್ತಿ ಸಿಕ್ಕಿದೆ ಅನ್ನೋದನ್ನು ಸುದ್ದಿ ಮಾಡುತ್ತಿವೆ.

Tollywood Super Star Mahesh Babus character in the Rajamouli movie is inspired by Lord Hanuman

ಮಹೇಶ್ ಬಾಬು ಪಾತ್ರಕ್ಕೆ ಹನುಮಂತನೇ ಸ್ಪೂರ್ತಿ

ಇಲ್ಲಿವರೆಗೂ ಮಹೇಶ್ ಬಾಬು ಪಾತ್ರದ ಬಗ್ಗೆ ನೂರೆಂಟು ಸುದ್ದಿಗಳು ಓಡಾಡುತ್ತಿವೆ. ಮೊದಲಿಗೆ ಮಹೇಶ್ ಬಾಬು ಭಾರತದ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಅಮೆಜಾನ್ ಕಾಡುಗಳಲ್ಲಿ ಶೂಟಿಂಗ್ ಅಂತಾನೂ ಸುದ್ದಿಯಾಗಿತ್ತು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಪಾತ್ರದ ಬಗ್ಗೆ ಹೊಸ ಸುದ್ದಿಯೊಂದು ಓಡಾಡುತ್ತಿದೆ.

ರಾಜಮೌಳಿ ರಾಮಾಯಣ ಹಾಗೂ ಮಹಾಭಾರತದಿಂದ ಸ್ಪೂರ್ತಿ ಪಡೆದು ಸಿನಿಮಾ ಮಾಡುತ್ತಾರೆ ಅಂತ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಾರಿ ಕೂಡ ಈ ಮಹಾಗ್ರಂಥಗಳಿಂದಲೇ ಸ್ಪೂರ್ತಿ ಪಡೆದು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಮಹೇಶ್ ಬಾಬು ಪಾತ್ರ ಹನುಮಂತನಿಂದ ಪ್ರೇರಣೆ ಪಡೆಯಲಾಗಿದ್ದು, ಹನುಮಂತನಿಗಿರುವ ಶಕ್ತಿ ಈ ಸಿನಿಮಾದ ಹೀರೊಗೂ ಇರುತ್ತೆ ಅನ್ನೋದೇ ಚರ್ಚೆ. ಹೀಗಾಗಿ ಅಡ್ವೆಂಚರ್ ಆಕ್ಷನ್ ಸೀನ್‌ಗಳಿಗೆ ರಾಜಮೌಳಿ ಸ್ಕೆಚ್ ಹಾಕಿರೋದಂತೂ ಪಕ್ಕಾ.

ರಾಜಮೌಳಿ ಸಿನಿಮಾಗೆ ಭರ್ಜರಿ VFX

ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾದಲ್ಲಿ ಭರ್ಜರಿ VFX ಇರುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಜಕ್ಕಣ್ಣ ಕಥೆ ಹೆಣೆಯುತ್ತಿದ್ದು, ಇದೇ ವರ್ಷ ಸ್ಕ್ರಿಪ್ಟ್ ಮುಗಿಸಿ ಸಿನಿಮಾ ಸೆಟ್ಟೇರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಹುತೇಕ ಸಿನಿಮಾದ ದೃಶ್ಯಗಳು ಅಮೆಜಾನ್ ಕಾಡುಗಳಲ್ಲಿ ಶೂಟಿಂಗ್ ಆಗುತ್ತಿದೆ. ಹೀಗಾಗಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಅನ್ನು ನಿರೀಕ್ಷೆ ಮಾಡಬಹುದು. ಅಲ್ಲದೆ VFX ಅದ್ದೂರಿಯಾಗಿ ಇರುತ್ತೆ ಎನ್ನಲಾಗಿದ್ದು, ಅಂತರಾಷ್ಟ್ರೀಯ ಕಂಪನಿಗಳು ಮುಗಿಬಿದ್ದಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ, 2025ಕ್ಕೆ ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Tollywood Super Star Mahesh Babu's character in the Rajamouli movie is inspired by Lord Hanuman, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X