ಅಲಾ ವೈಕುಂಠಪುರಮುಲೋ ಬಳಿಕ ಮತ್ತೆ ಅಲ್ಲು ಅರ್ಜುನ್‌ಗೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ?

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತವೆ. ಅದರಲ್ಲೂ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಅಂದರೆ ಅದು ಹಿಟ್ ಆಗೋದು ಗ್ಯಾರಂಟಿ ಅಂತಲೇ. ಈಗ ತ್ರಿವಿಕ್ರಮ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಮತ್ತೊಮ್ಮೆ ನಟಿಸಲಿದ್ದಾರಂತೆ.

ಅಲ್ಲು ಅರ್ಜುನ್ ಇತ್ತೀಚೆಗಷ್ಟೇ 'ಪುಷ್ಪ 2' ಸಿನಿಮಾ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಈ ತಿಂಗಳಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. 'ಪುಷ್ಪ 2' ಸಿನಿಮಾದ ಬಳಿಕ ಟಾಲಿವುಡ್‌ನ ಸಾಕಷ್ಟು ನಿರ್ದೇಶಕರು ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಲು ಕಾದು ಕೂತಿದ್ದಾರೆ.

ಆದರೆ ಅಲ್ಲು ಅರ್ಜುನ್ ಮಾತ್ರ ತ್ರಿವಿಕ್ರಮ್ ಜೊತೆನೇ ಸಿನಿಮಾ ಮಾಡಬೇಕು ಅನ್ನುವ ಆಲೋಚನೆಯಲ್ಲಿದ್ದಾರೆ ಎಂಬ ವದಂತಿಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸ್ಟೈಲಿಶ್ ಸ್ಟಾರ್ ಈಗಾಗಲೇ ತ್ರಿವಿಕ್ರಮ್‌ಗೆ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

Trivikram Srinivas Again Directing Allu Arjun After Pushpa 2

ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಟಾಲಿವುಡ್‌ನ ಹಿಟ್ ಕಾಂಬಿನೇಷನ್. ಜೋಡಿ ಟಾಲಿವುಡ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 'ಜುಲೈ', 'ಸನ್ ಆಫ್ ಸತ್ಯಮೂರ್ತಿ' ಜೊತೆಗೆ 'ಅಲಾ ವೈಕುಂಠಪುರಮುಲೊ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸನ್ನೇ ದಾಖಲಿಸಿದೆ.

ಇನ್ನೊಂದು ಕಡೆ ತ್ರಿವಿಕ್ರಮ್ ಶ್ರೀನಿವಾಸ್ ಸದ್ಯ ಮಹೇಶ್ ಬಾಬು ಅವರ 28 ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಖಲೇಜಾ' ಸಿನಿಮಾ ಮಹೇಶ್ ಬಾಬು-ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿತ್ತು. ಈಗ ಬರೋಬ್ಬರಿ 13 ವರ್ಷಗಳ ಲಾಂಗ್‌ ಗ್ಯಾಪ್‌ನ ನಂತರ ಮತ್ತೆ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುತ್ತಿದೆ.

'ಪುಷ್ಪ 2' ಸಿನಿಮಾದ ನಂತರ ಬೋಯಾಪಟಿ ಶ್ರೀನು ಅಲ್ಲು ಅರ್ಜುನ್‌ಗಾಗಿ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನುವ ಟಾಕ್ ಕೂಡ ಇತ್ತು. ಆದರೆ, ತ್ರಿವಿಕ್ರಮ್ ನಿರ್ದೇಶನದಲ್ಲಿ ಮೊದಲು ನಟಿಸಿದ ಬಳಿಕ ಬೋಯಾಪಟಿ ಶ್ರೀನು ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Trivikram Srinivas Again Directing Allu Arjun After Pushpa 2

ತ್ರಿವಿಕ್ರಮ್ ಹಾಗೂ ಅಲ್ಲು ಅರ್ಜು ನ್ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗಿದೆ. ಅಲ್ಲು ಅರ್ಜುನ್ 'ಪುಷ್ಪ' ಹಾಗೂ 'ಪುಷ್ಪ-2' ಬಳಿಕ ಸಿನಿಮಾಗಳ ಬಳಿಕ ಬರುವ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಲಿದ್ದು, ಎಲ್ಲರೂ ಮೆಚ್ಚುವಂತಹ ಸಿನಿಮಾ ಮಾಡುವಂತೆ ಅಲ್ಲು ಅರ್ಜುನ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ತ್ರಿವಿಕ್ರಮ್ ಕ್ಲಾಸ್ ಸಬ್ಜೆಕ್ಟ್ ಹೇಳಿದ್ದು, ಮಾಸ್ ಸಿನಿಮಾದ ಬಳಿಕ ಕ್ಲಾಸ್ ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ. ಹೀಗಾಗಿ ತ್ರಿವಿಕ್ರಮ್‌ಗೆ ಡೇಟ್ ಕನ್ಫರ್ಮ್ ಆಗಲಿದೆ ಎನ್ನಲಾಗಿದೆ. ಸತತ ಎರಡು ಮಾಸ್ ಚಿತ್ರಗಳನ್ನು ಮಾಡಿ ಸ್ವಲ್ಪ ಜನರನ್ನು ಬೇರೆಡೆಗೆ ಕರೆದೊಯ್ಯಲು ಈ ನಿರ್ಧಾರಕ್ಕೆ ಬರಲಾಗಿದ್ಯಂತೆ.

More from Filmibeat

English summary
Trivikram Srinivas Again Directing Allu Arjun After Pushpa 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X