ಮಾಲಾಶ್ರೀ ಪುತ್ರಿ ಆಯ್ತು.. ಪ್ರೇಮ್ ಪುತ್ರಿ ಆಯ್ತು ಈಗ ಉಪ್ಪಿ ಪುತ್ರಿ ಎಂಟ್ರಿ: ಹೀರೊ ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೊಳ್ಳೆ ಬೆಳವಣಿಗೆಗಳಾಗುತ್ತಿವೆ. ಈ ವರ್ಷ ಕನ್ನಡ ಚಿತ್ರರಂಗ ವಿಶ್ವದಾದ್ಯಂತ ಹೆಸರು ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೊಸ ಹೊಸ ದಾಖಲೆಗಳನ್ನು ಬರೆದು ಬೀಗುತ್ತಿವೆ.

ಇನ್ನೊಂದು ಕಡೆ ಇದೇ ಜೋಷ್‌ನಲ್ಲಿ ಹೊಸ ಪರ್ವ ಶುರುವಾಗಿದೆ. ಸ್ಯಾಂಡಲ್‌ವುಡ್‌ ತಾರೆಯರ ಮಕ್ಕಳು ಒಬ್ಬೊಬ್ಬರಾಗಿಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಒಂದೊಂದೇ ಪ್ರಾಜೆಕ್ಟ್‌ಗಳು ಸೆಟ್ಟೇರುತ್ತಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ, ಕೆಲವೇ ಕೆಲವು ದಿನಗಳ ಹಿಂದಷ್ಟೇ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ ಕನ್ಫರ್ಮ್ ಆಗಿತ್ತು. ಈಗ ರಿಯಲ್‌ ಸ್ಟಾರ್ ಉಪೇಂದ್ರ ಅವರ ಪುತ್ರಿ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿವೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಹೀರೊ ಯಾರು? ಕನ್ನಡದ ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಉಪೇಂದ್ರ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ?

ಉಪೇಂದ್ರ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ?

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಪುತ್ರಿಯರು ಸಿನಿಮಾ ಎಂಟ್ರಿ ಕೊಡುವ ಪರ್ವ ಶುರುವಾಗಿದೆ. ಆ ಸಾಲಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಉಪೇಂದ್ರ ಹೆಸರು ಕೂಡ ಓಡಾಡುತ್ತಿದೆ. ಉಪ್ಪಿ ಪುತ್ರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಆಫರ್ ಒಂದು ಸಿಕ್ಕಿದೆಯಂತೆ. ಇಂತಹದ್ದೊಂದು ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಜೋರಾಗೇ ಓಡಾಡುತ್ತಿದೆ. ಒಂದ್ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಈ ವರ್ಷ ಚಿತ್ರರಂಗಕ್ಕೆ ಎಂಟ್ರಿಕೊಡುವ ಸ್ಟಾರ್ ಪುತ್ರಿಯರ ಪಟ್ಟಿಯಲ್ಲಿ ಐಶ್ವರ್ಯಾ ಉಪೇಂದ್ರ ಮೂರನೇ ಸ್ಥಾನದಲ್ಲಿರುತ್ತಾರೆ.

ರಿಯಲ್ ಪುತ್ರಿಯ ಹೀರೊ ಯಾರು?

ರಿಯಲ್ ಪುತ್ರಿಯ ಹೀರೊ ಯಾರು?

ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಯಾವ ಸಿನಿಮಾ ಮೂಲಕ ಎಂಟ್ರಿ ಕೊಡಬಹುದು ಅನ್ನೋದು ಕುತೂಹಲವಂತೂ ಇದ್ದೇ ಇದೆ. ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ಪ್ರಕಾರ, ಹೊಂಬಾಳೆ ಫಿಲ್ಮ್ಸ್ ಉಪ್ಪಿ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಸಂತೋಷ್ ಆನಂದ್‌ರಾಮ್ ನಿರ್ದೇಶಿಸುತ್ತಿರುವ ಯುವರಾಜ್‌ಕುಮಾರ್ ಮೊದಲ ಸಿನಿಮಾಗೆ ಐಶ್ವರ್ಯಾ ಉಪೇಂದ್ರ ಆಯ್ಕೆ ಆಗಿದ್ದಾರೆ ಅನ್ನೋ ಮಾತು ಓಡಾಡುತ್ತಿದೆ. ಆದರೆ, ಈ ಸುದ್ದಿಯನ್ನು ಉಪೇಂದ್ರ, ಹೊಂಬಾಳೆ, ಸಂತೋಷ್ ಆನಂದ್‌ರಾಮ್ ಸೇರಿದಂತೆ ಯಾರೂ ಖಚಿತ ಪಡಿಸಿಲ್ಲ. ಹೀಗಾಗಿ ಸುದ್ದಿ ಕನ್ಫರ್ಮ್ ಆಗೋವರೆಗೂ ಕಾಯಬೇಕಿದೆ.

ಪ್ರೇಮ್ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ

ಪ್ರೇಮ್ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ

ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ 'ಟಗರು ಪಲ್ಯ'. ಈ ಸಿನಿಮಾ ಮೂಲಕ ಕನ್ನಡ ಮತ್ತೊಬ್ಬ ನಟಯನ್ನು ಪರಿಚಯಿಸುತ್ತಿದ್ದಾರೆ. ಅವರೇ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್. ಉಮೇಶ್ ಕೆ ಕೃಪ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೇಮ್ ಪುತ್ರಿಯ ಫೋಟೊಗಳು ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರು ವೆಲ್‌ಕಮ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಅಮೃತಾ ಪ್ರೇಮ್ ಬಗ್ಗೆ ಚರ್ಚೆ ಆರಂಭ ಆಗಿದೆ.

ದರ್ಶನ್ 56ನೇ ಸಿನಿಮಾಗೆ ಮಾಲಾಶ್ರೀ ಪುತ್ರಿ ನಾಯಕಿ

ದರ್ಶನ್ 56ನೇ ಸಿನಿಮಾಗೆ ಮಾಲಾಶ್ರೀ ಪುತ್ರಿ ನಾಯಕಿ

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ರಾಧನಾ ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆಯುತ್ತಿದೆ. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವಾಗಲೇ ಸ್ಟಾರ್ ನಟರ ಮಕ್ಕಳು ಒಬ್ಬೊಬ್ಬರಾಗಿಯೇ ಎಂಟ್ರಿ ಕೊಡುತ್ತಿರುವುದು ಮತ್ತಷ್ಟು ಹುರುಪು ನೀಡುತ್ತಿದೆ.

More from Filmibeat

English summary
Upendra Daughter Aishwarya Will Be the Lead Actress For Yuva Rajkumar First Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X