ಉಪೇಂದ್ರ, ಸುದೀಪ್ ಅಭಿನಯದ 'ಕಬ್ಜ' ಚಿತ್ರಕ್ಕೆ ಇಬ್ಬರು ನಾಯಕಿಯರು ಫಿಕ್ಸ್: ಯಾರವರು?
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ಸಿನಿಮಾ 'ಕಬ್ಜ'. ಈ ಸಿನಿಮಾ ಸೆಟ್ಟೇರಿ ಅದೆಷ್ಟು ದಿನಗಳಾಗಿವೆ. ಇನ್ನೂ ಸಿನಿಮಾ ಶೂಟಿಂಗ್ ನಡೆಯುತ್ತಲೇ ಇದೆ. ನಿರ್ದೇಶಕ ಆರ್ ಚಂದ್ರು ಸಿನಿಮಾ ಬಿಡುಗಡೆಯನ್ನುಇಷ್ಟೊಂದು ತಡ ಮಾಡುತ್ತಿರುವುದಕ್ಕೆ ಕಾರಣ ಕೋವಿಡ್. ಸಿನಿಮಾ ತಡವಾಗುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಬೇಸರವಿದೆ. ಆದರೆ, ಈ ಬೇಸರ ಮಯಾವಾಗುವಂತಹ ಸುದ್ದಿಯೊಂದಿದೆ. ಅದೇನಂದರೆ, 'ಕಬ್ಜ' ಸಿನಿಮಾಗೆ ಇಬ್ಬರು ನಾಯಕಿಯರು ಸಿಕ್ಕಿದ್ದಾರೆ. ನಾಳೆನೇ (ಮಾರ್ಚ್7) ರಿಲೀಸ್ ಆಗುತ್ತೆ ಅನ್ನುವುದು ಅಸಲಿ ಮ್ಯಾಟರ್.
'ಕಬ್ಜ' ಸಿನಿಮಾ ಸದ್ಯಕ್ಕೆ ರಿಲೀಸ್ ಆಗುವ ಹಾಗೆ ಕಾಣಿಸುತ್ತಿಲ್ಲ. ಯಾಕಂದ್ರೆ, ಈ ಸಿನಿಮಾಗೆ ಈಗತಾನೇ ನಾಯಕಿಯರು ಸಿಕ್ಕಾದ್ದಾರಂತೆ. ಅಂದ್ಮೇಲೆ ಇನ್ನೂ ತುಂಬಾನೇ ಶೂಟಿಂಗ್ ಬಾಕಿಯಿದೆ. ಇದೇ ವೇಳೆ ನಾಳೆ (ಮಾರ್ಚ್ 07) ನಾಯಕಿಯರ ಅನಾವರಣ ಆಗುತ್ತಿರುವುದರಿಂದ 'ಕಬ್ಬ'ಗೆ ಆಯ್ಕೆಯಾಗಿರುವ ಇಬ್ಬರು ನಾಯಕಿಯರು ಯಾರು? ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಇವರಲ್ಲಿ ಯಾರು ಅಂತ ಹೇಳ್ತೀವಿ. ಅದನ್ನು ತಿಳಿಯಲು ಮುಂದೆ ಓದಿ.

'ಕಬ್ಜ'ಗೆ ಇಬ್ಬರು ಬಹುಭಾಷಾ ನಟಿಯರು
'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ. ಹಾಗಂತ ಈ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಬರೋಬ್ಬರಿ 7 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ತಾರಾಗಣ ಕೂಡ ದೊಡ್ಡದೇ ಇದೆ. ಒಂದ್ಕಡೆ ರಿಯಲ್ ಸ್ಟಾರ್ ಉಪೇಂದ್ರ, ಇನ್ನೊಂದ್ಕಡೆ ಕಿಚ್ಚ ಸುದೀಪ್. ಇವರಿಬ್ಬರಿಗೂ ಒಬ್ಬ ನಾಯಕಿಯರನ್ನು ನಿರ್ದೇಶಕ ಆರ್ ಚಂದ್ರ ಹುಡುಕಿಕೊಂಡು ಬಂದಿದ್ದಾರಂತೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇಬ್ಬರಿಗೂ ನಾಯಕಿಯರನ್ನಾಗಿ ಬಹುಭಾಷಾ ನಟಿಯನ್ನು ಹುಡುಕಿಕೊಂಡು ಬಂದಿದ್ದಾರಂತೆ. ಇಂತಹದ್ದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಉಪ್ಪಿಗೆ ಶ್ರಿಯಾ ಸರಣ್ ಬಹುಭಾಷಾ ನಟಿ
'ಕಬ್ಜ' ಚಿತ್ರದ ಇಬ್ಬರು ಬಹುಭಾಷಾ ನಟಿಯರಲ್ಲಿ ಒಬ್ಬರು ಈಗಾಗಲೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅವರೇ ಶ್ರಿಯಾ ಸರಣ್. ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿರುವ ಈ ನಟಿ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ನೆನೆಪಿರಲಿ ಪ್ರೇಮ್ ನಟಿಸಿದ ಚಂದ್ರ ಸಿನಿಮಾಗೆ ಶ್ರಿಯಾ ಸರಣ್ ನಾಯಕಿ ಆಗಮಿಸಿದ್ದರು. ಆದರೆ, ಆ ಸಿನಿಮಾ ಕನ್ನಡದಲ್ಲಿ ಸದ್ದು ಮಾಡಿರಲಿಲ್ಲ. ಈಗ ಮತ್ತೆ ಬಿಗ್ ಪ್ರಾಜೆಕ್ಟ್ ಮೂಲಕ ಎಂಟ್ರಿಕೊಡುತ್ತಿದ್ದಾರೆ ಎನ್ನಲಾಗಿದೆ.

ಕಿಚ್ಚನಿಗೆ ನಾಯಕಿ ಯಾರು?
ಭಾರ್ಗವ್ ಭಕ್ಷಿಯಾಗಿ ನಟಿಸುತ್ತಿರುವ ಕಿಚ್ಚ ಸುದೀಪ್‌ಗೂ ಒಬ್ಬರು ನಾಯಕಿ ಬೇಕಿದೆ. ಇಬ್ಬರಿಗೂ ಬಹುಭಾಷಾ ನಾಯಕಿನೇ ಬೇಕಿರುವುದರಿಂದ ಇಷ್ಟು ಸಮಯ ಹಿಡಿದಿದೆ ಎನ್ನಲಾಗಿದೆ. ಆದರೆ, ಈ ಸಿನಿಮಾದಲ್ಲಿ ಕಿಚ್ಚ ಸುದೀಪ್‌ಗೆ ಯಾರು ನಾಯಕಿ ಆಗುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅದು ನಾಳೆ( ಮಾಚ್ 7) ರಿವೀಲ್ ಆಗುತ್ತೆ ಎನ್ನಲಾಗಿದೆ. ಇವರ ಫಸ್ಟ್ ಲುಕ್ ಮಾರ್ಚ್ 07ರಂದು ರಿಲೀಸ್ ಮಾಡಲು ತೀರ್ಮಾನಿಸಿದ್ದಾರೆ. ಹೀಗಾಗಿ ಕಿಚ್ಚನ ನಾಯಕಿ ಸದ್ಯಕ್ಕೆ ಸೀಕ್ರೆಟ್.

ಕಬ್ಜ ಬಜೆಟ್ ಎಷ್ಟು?
'ಕಬ್ಜ' ಸಿನಿಮಾದ ಬಜೆಟ್ ಕೇಳಿದರೆ ಶಾಕ್ ಆಗುತ್ತೆ. ಇದು ಕನ್ನಡದ ದುಬಾರಿ ಬಜೆಟ್ ಸಿನಿಮಾಗಳಲ್ಲೊಂದು. ಏಳು ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಹಣ ಖರ್ಚಾಗುತ್ತಿದೆ. ಇದರೊಂದಿಗೆ ಸ್ಟಾರ್‌ಕಾಸ್ಟ್ ಕೂಡ ದೊಡ್ಡದಿದೆ. ದಿನದಿಂದ ದಿನಕ್ಕೆ ಒಬ್ಬೊಬ್ಬರೇ ಸೇರಿಕೊಳ್ಳುತ್ತಿದ್ದಾರೆ. ಈ ಇಬ್ಬರು ಬಹುಭಾಷಾ ನಟಿಯರ ಬೇರೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ 'ಕಬ್ಜ' ಚಿತ್ರದ ಬಜೆಟ್ ಇಲ್ಲಿವರೆಗೂ 70 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ ಇದು ಕನ್ನಡದ ದುಬಾರಿ ಬಜೆಟ್ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು.

'ಕಬ್ಜ' ಡಿಲೇಗೆ ಕಾರಣವೇನು?
'ಕಬ್ಜ' ಸಿನಿಮಾ ತಡವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಕೋವಿಡ್. ಎರಡು ವರ್ಷ ಕೊರೊನಾದಿಂದಾಗಿ ತಡವಾಗಿದೆ. ಈ ಸಿನಿಮಾವನ್ನು ಸೆಟ್ಟಿನಲ್ಲಿಯೇ ಚಿತ್ರೀಕರಣ ಮಾಡಬೇಕಿದೆ. 70ರ ದಶಕದಲ್ಲಿ ನಟಿಯುವ ಅಂಡರ್‌ವರ್ಲ್ಡ್ ಕಥೆಯನ್ನೇ ಆಧರಿಸಿ, ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ ಇಬ್ಬರು ಸೂಪರ್‌ಸ್ಟಾರ್‌ಗಳ ಡೇಟ್ ಹೊಂದಾಣಿಕೆ ಆಗಬೇಕು. ಜೊತೆಗೆ ದೊಡ್ಡ ತಾರಾಬಳಗವನ್ನು ಒಂದೆಡೆ ಸೇರಿಸುವುದು ಕೂಡ ಅಷ್ಟೇ ಕಠಿಣ. ಇಂತಹದ್ದೇ ಒಂದು ಕಾರಣಗಳಿಂದ 'ಕಬ್ಜ' ಚಿತ್ರೀಕರಣ ತಡವಾಗಿದೆ.


Click it and Unblock the Notifications











