Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಉಪ್ಪೇನ' ನಟಿ ಕೃತಿ ಶೆಟ್ಟಿ ಕೈ ತಪ್ಪಿದ ಬಾಲಿವುಡ್ ಆಫರ್: ಇದೇ ಕಾರಣ!
ಟಾಲಿವುಡ್‌ನಲ್ಲಿ 'ಉಪ್ಪೇನ' ಸಿನಿಮಾ ಬಾಕ್ಸಾಫೀಸ್ ಅನ್ನೇ ಊಟಿ ಮಾಡಿತ್ತು. ತೆಲುಗು ಚಿತ್ರರಂಗಕ್ಕೆ ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಅನ್ನೋ ಇಬ್ಬರು ಕಲಾವಿದರನ್ನು ನೀಡಿದ ಸಿನಿಮಾವಿದು. ಅದರಲ್ಲೂ ಕೃತಿ ಶೆಟ್ಟಿ ಟಾಲಿವುಡ್‌ನ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದರು.
'ಉಪ್ಪೇನ' ಬಳಿಕ ಕೃತಿ ಶೆಟ್ಟಿ ನಿಂತೇ ಇಲ್ಲ. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಈ ಮೂಲಕ ತೆಲುಗು ಚಿತ್ರರಂಗದ ಭರವಸೆಯ ನಟಿ ಎನಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಕೃತಿ ಶೆಟ್ಟಿ ಅಭಿನಯದ ಸಿನಿಮಾಗಳು ಯಾಕೋ ಸದ್ದು ಮಾಡುತ್ತಿಲ್ಲ.
2022ರಲ್ಲಿ
ಗೆಲುವಿಗಿಂತ
ಹೆಚ್ಚು
ಸೋಲನ್ನೇ
ಕಂಡ
ಕರ್ನಾಟಕ
ಮೂಲದ
ತೆಲುಗು
ನಟಿಯರು!
ಹೀಗಿದ್ದರೂ, ಟಾಲಿವುಡ್‌ನ ಲಕ್ಕಿ ಗರ್ಲ್ ಕೃತಿ ಶೆಟ್ಟಿಗೆ ಬಾಲಿವುಡ್ ಆಫರ್ ಹುಡುಕಿಕೊಂಡು ಬಂದಿತ್ತಂತೆ. ಇನ್ನೇನು ಕೃತಿ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟು ಬಿಡುತ್ತಾರೆ ಅನ್ನೋವಾಗಲೇ ಆ ಪ್ರಾಜೆಕ್ಟ್‌ನಿಂದ ಹೊರಬಿದ್ದಿದ್ದಾರೆ. ಅಸಲಿಗೆ ಅದಕ್ಕೇನು ಕಾರಣ ಅನ್ನೋದು ಕೂಡ ರಿವೀಲ್ ಆಗಿದೆ.

ಬಾಲಿವುಡ್ ಆಫರ್ ಮಿಸ್
ಕೃತಿ ಶೆಟ್ಟಿ ಟಾಲಿವುಡ್‌ನಲ್ಲಿ ಉಯೋನ್ಮುಖ ನಟಿ. ಸೂಪರ್ ಹಿಟ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿರುವ ನಟಿ ತೆಲುಗು ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕೃತಿ ನಟಿಸಿದ ಒಂದೆರಡು ಸಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಈ ವೇಳೆನೇ ಬಾಲಿವುಡ್‌ನ ಪ್ರೊಕ್ಷಡನ್ ಹೌಸ್‌ವೊಂದು ಕೃತಿ ಶೆಟ್ಟಿಗೆ ಬಿಗ್ ಆಫರ್ ನೀಡಿತ್ತಂತೆ. ಇನ್ನೇನು ಕೃತಿ ಶೆಟ್ಟಿ ಬಾಲಿವುಡ್ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಡುತ್ತಾರೆ ಅನ್ನೋ ಸುದ್ದಿ ಅಡ್ಡಾಡಿತ್ತು. ಅಷ್ಟರಲ್ಲೇ ಬಾಲಿವುಡ್ ಸಿನಿಮಾ ಕೃತಿ ಕೈ ತಪ್ಪಿದೆ ಅನ್ನೋ ಮಾತು ಕೇಳಿಬರುತ್ತಿದೆ.

ಬಾಲಿವುಡ್ ಆಫರ್ ಮಿಸ್ ಆಗಿದ್ದೇಕೆ?
ಕರ್ನಾಟಕದ ಕರಾವಳಿ ಕಡೆಯವರೇ ಆಗಿದ್ದರೂ ಬೆಳೆದಿದ್ದೆಲ್ಲ ಮುಂಬೈನಲ್ಲೇ. ಹೀಗಾಗಿ ಕೃತಿ ಶೆಟ್ಟಿ ಬಾಲಿವುಡ್ ಹೊಸದೇನಲ್ಲ. ಈ ಕಾರಣಕ್ಕೆ ಕೃತಿ ಶೆಟ್ಟಿ ಬಾಲಿವುಡ್ ಎಂಟ್ರಿ ಬಗ್ಗೆ ತೆಲುಗು ಚಿತ್ರರಂಗಕ್ಕೆ ಕುತೂಹಲವಿತ್ತು. ಆದರೆ, ಕೃತಿಯ ಮೊದಲ ಬಾಲಿವುಡ್ ಸಿನಿಮಾ ಜಸ್ಟ್ ಮಿಸ್ ಆಗಿದೆ. ಹೌದು, ಬಾಲಿವುಡ್ ಪ್ರೊಡಕ್ಷನ್ ಹೌಸ್ ಕೃತಿಗೆ ಆಡಿಷನ್ ನೀಡುವಂತೆ ಹೇಳಿದ್ದರು. ಆದರೆ, ಕೃತಿ ಶೆಟ್ಟಿ ಆಡಿಷನ್ ನೀಡುವುದಕ್ಕೆ ಹಿಂದೇಟು ಹಾಕಿದ್ದರಂತೆ. ಅದಕ್ಕೆ ಬಾಲಿವುಡ್ ಮಂದಿ ಕೃತಿಯನ್ನು ಸಿನಿಮಾದಿಂದ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಮಲಯಾಳಂ ಚಿತ್ರದಲ್ಲಿ ಕೃತಿ ಶೆಟ್ಟಿ
ಕೃತಿ ಶೆಟ್ಟಿ ಟಾಲಿವುಡ್‌ನಿಂದ ಮಲಯಾಳಂಗೆ ಹಾರಿದ್ದಾರೆ. 'ಮಿನ್ನಾಲ್ ಮುರಳಿ' ಖ್ಯಾತಿಯ ಟುವಿನೋ ಥಾಮಸ್ ನಟಿಸುತ್ತಿರುವ 'ಅಜಯಂತೆ ರಾಂಡಮ್ ಮೋಷನಂ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೃತಿ ಶೆಟ್ಟಿಯ ಈ ಮಲಯಾಳಂ ಸಿನಿಮಾ ಕಾಸರಗೋಡಿನ ಚೆರುವತ್ತೂರ್‌ನಲ್ಲಿ ಆರಂಭ ಆಗಿತ್ತು. ಈಗ ಮೊದಲ ಹಂತದ ಶೂಟಿಂಗ್ ಮುಗಿದು ಎರಡನೇ ಹಂತದ ಶೂಟಿಂಗ್ ಆರಂಭ ಆಗಿದೆ.

ಟಿಟೌನ್ ರೌಡಿ ಜೊತೆ ಕೃತಿ ಶೆಟ್ಟಿ?
'ಲೈಗರ್' ಸೋಲಿನ ಬಳಿಕ ವಿಜಯ್ ದೇವರಕೊಂಡ 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ಸಿನಿಮಾ ಸದ್ಯಕ್ಕೆ ನಿಂತಿದೆ. ಟಾಲಿವುಡ್ ಮೂಲಗಳ ಪ್ರಕಾರ, ಕೃತಿ ಶೆಟ್ಟಿಗೆ ಒಂದು ಚಿಕ್ಕ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದ್ಯಂತೆ. ಫ್ಲ್ಯಾಶ್ ಬ್ಯಾಕ್ ಸೀನ್‌ಗಳಲ್ಲಿ ಕೃತಿ ಶೆಟ್ಟಿ ನಟಿಸಬೇಕಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರಂತೆ. ಸದ್ಯ ಕೃತಿ ಶೆಟ್ಟಿ ಬಾಲಿವುಡ್ ಆಫರ್ ಕೈಬಿಟ್ಟಿದ್ದರೂ, ದಕ್ಷಿಣ ಭಾರತದಲ್ಲಿ ಆಫರ್‌ಗಳಿವೆ.