ಬಾಲಿವುಡ್‌ನ ಊರ್ವಶಿ ಬಿಟ್ಟಿದ್ದು ಡೋಂಗಿನಾ? 'ಕಾಂತಾರ 2' ಲೋಡಿಂಗ್ ಅಂದು ಬಕ್ರಾ ಮಾಡಿದ್ರಾ?
ರಿಷಬ್ ಶೆಟ್ಟಿಯ 'ಕಾಂತಾರ' ಇಡೀ ಭಾರತೀಯರನ್ನು ಗಮನ ಸೆಳೆದಿದ್ದು ಗೊತ್ತೇ ಇದೆ. ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಮಾಡಿದ ಮೋಡಿಗೆ ದಿಗ್ಗಜರೆಲ್ಲರೂ ಬೆರಗಾಗಿದ್ದರು. ಇಷ್ಟೊಂದು ಸಕ್ಸಸ್ ಸಿಕ್ಕಮೇಲೆ ರಿಷಬ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಆಗದೆ ಇರುತ್ತಾ?
'ಕಾಂತಾರ' ಯಶಸ್ಸಿನ ಬಗ್ಗೆ ರಿಷಬ್ ಶೆಟ್ಟಿಯ ನಡೆಯೇನು? ಅನ್ನೋದು ಯಶ್ 19ನೇ ಸಿನಿಮಾದಷ್ಟೇ ಕುತೂಹಲ. ಅವರು ಅನೌನ್ಸ್ ಮಾಡ್ತಿಲ್ಲ. ಇವರೂ ಅನೌನ್ಸ್ ಮಾಡುತ್ತಿಲ್ಲ. ಆದರೆ, ನೂರೆಂಟು ಸುದ್ದಿಗಳು ಮಾತ್ರ ಗಾಳಿಯಲ್ಲಿ ಮನಸ್ಸಿಗೆ ಬಂದಂತೆ ಹಾರಾಡುತ್ತಿದೆ.
ಹೀಗೆ ಗಾಳಿಯಲ್ಲಿ ಹುಟ್ಟಿಕೊಂಡ ಸುದ್ದಿಗಳಲ್ಲಿ ಒಂದೆರಡು ಇನ್ನೂ ಹಾರಾಡುತ್ತಲೇ ಇವೆ. ರಿಷಬ್ ಶೆಟ್ಟಿ 'ಕಾಂತಾರ 2'ಗೆ ಕೈ ಹಾಕಿರೋ ಸುದ್ದಿ ಒಂದಾದ್ರೆ, ಇನ್ನೊಂದು 'ಕಾಂತಾರ' ಪ್ರೀಕ್ವೆಲ್. ಇವೆರಡೂ ಸುದ್ದಿ ನಿಜವೋ..? ಇಲ್ಲ ಸುಳ್ಳೋ..? ಅನ್ನೋದೂ ಗೊತ್ತಿಲ್ಲ. ಈ ಗ್ಯಾಪ್‌ನಲ್ಲೇ ರಿಷಬ್ ಶೆಟ್ಟಿ ಜೊತೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಫೋಟೊ ಕ್ಲಿಕ್ಕಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. 'ಕಾಂತಾರ 2'ಗೆ ಊರ್ವಶಿನೇ ನಾಯಕಿ ಅನ್ನುವಷ್ಟರ ಮಟ್ಟಿಗೆ ಚರ್ಚೆಯಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುದ್ದಿ ಓಡಾಡುತ್ತಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

ಊರ್ವಶಿಯ 'ಕಾಂತಾರ 2' ಲೋಡಿಂಗ್
ಊರ್ವಶಿ ರೌಟೇಲಾ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿಲ್ಲದೆ ಹೋದ್ರೂ, ಸದಾ ಸುದ್ದಿಯಲ್ಲಂತೂ ಇರುತ್ತಾರೆ. ಏನಾದರೂ ಹೇಳಿಕೆ ಕೊಟ್ಟು ಚರ್ಚೆಯಲ್ಲಿರುತ್ತಾರೆ. ಇಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆಯುತ್ತಾರೆ. ಕೆಲವು ದಿನಗಳ ಹಿಂದೆ ಕೂಡ ಊರ್ವಶಿ ತನ್ನ ಇನ್‌ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಜೊತೆಗಿದ್ದ ಫೋಟೊವನ್ನು ಹಂಚಿಕೊಂಡಿದ್ದರು. ಸಾಲದ್ದಕ್ಕೆ "ಕಾಂತಾರ 2 ಲೋಡಿಂಗ್" ಅಂತ ಬರೆದುಕೊಂಡಿದ್ದರು. ಈ ಪೋಸ್ಟ್ ಬಳಿಕ 'ಕಾಂತಾರ 2' ಹಾಗೂ ಊರ್ವಶಿ ರೌಟೇಲಾ ನಟಿಸುತ್ತಿದ್ದಾರೆ ಅನ್ನೋ ಬಗ್ಗೆ ಚರ್ಚೆಯಾಗುತ್ತಿದೆ.

'ಕಾಂತಾರ 2' ಅಥವಾ ಪ್ರೀಕ್ಷೆಲ್?
'ಕಾಂತಾರ' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಏನು ಆಲೋಚನೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಇನ್ನೂ ಆ ಸೀಕ್ರೆಟ್ ಅನ್ನೂ ಬಿಟ್ಟುಕೊಟ್ಟಿಲ್ಲ. ಒಂದಷ್ಟು ದಿನ 'ಕಾಂತಾರ 2'ಗೆ ಕೈ ಹಾಕಿದ್ದಾರೆ ಅಂತಲೂ, ಇತ್ತೀಚೆಗೆ 'ಕಾಂತಾರ' ಪ್ರೀಕ್ವೆಲ್ ಅಂತಲೂ ಚರ್ಚೆಯಾಗುತ್ತಿದೆ. ಆದರೆ, ರಿಷಬ್ ಶೆಟ್ಟಿ ನಿಖರವಾಗಿ ಏನು ಮಾಡುತ್ತಿದ್ದಾರೆ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಹಾಗಿದ್ದರೆ, ಊರ್ವಶಿ ರೌಟೇಲಾ ಹೇಳಿದ್ದು ಸುಳ್ಳೇ? ಇಂತಹದ್ದೊಂದು ಪ್ರಶ್ನೆಗೆ ಸಿನಿಮಾ ಮಂದಿ ಕೊಡೋ ಉತ್ತರವೇ ಬೇರೆ.

ಡೋಂಗಿ ಬಿಟ್ರಾ ಊರ್ವಶಿ ರೌಟೇಲಾ?
ಊರ್ವಶಿ 'ಕಾಂತಾರ 2' ಲೋಡಿಂಗ್ ಅನ್ನುತ್ತಿದ್ದಂತೆ ಸಿನಿಮಾ ಮಂದಿ ಮುಸಿಮುಸಿ ನಗುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ಒಡನಾಟ ಇರುವವರ ಪ್ರಕಾರ ಕೂಡ ಇದೆಲ್ಲಾ ಸುಳ್ಳು ಎನ್ನಲಾಗುತ್ತಿದೆ. 'ಕಾಂತಾರ 2' ಇನ್ನೂ ಊರ್ವಶಿ ರೌಟೇಲಾ ಹೇಳಿದ್ದರಲ್ಲಿ ಸತ್ಯಾಂಶವಿಲ್ಲ. ರಿಷಬ್ ಶೆಟ್ಟಿ ಹಾಗೂ ಊರ್ವಶಿ ಒಂದೇ ಕಾರ್ಯಕ್ರಮದಲ್ಲಿದ್ದರು. ಈ ವೇಳೆ ಇಬ್ಬರೂ ಒಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ ಅಷ್ಟೇ." ಎಂದು ಮಾಹಿತಿ ನೀಡಿದ್ದಾರೆ.

ರಿಷಬ್ ಮುಂದಿನ ಸಿನಿಮಾ ಅನೌನ್ಸ್ ಯಾವಾಗ?
'ಕಾಂತಾರ' ಬಳಿಕ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕೆ ರಿವೀಲ್ ಆಗಿಲ್ಲ. ಸ್ವತ: ರಿಷಬ್ ಶೆಟ್ಟಿನೂ ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ಆದರೆ, 'ಕಾಂತಾರ' ಪ್ರೀಕ್ಷೆಲ್ ಮಾಡುತ್ತಾರೆ ಅನ್ನೋ ಮಾತು ಬಲವಾಗಿ ಕೇಳಿ ಬರುತ್ತಿದೆ. ಆದರೂ, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡುವವರೆಗೂ ಇದೆಲ್ಲವೂ ಗಾಳಿ ಸುದ್ದಿಯಾಗಿಯೇ ಇರುತ್ತೆ.


Click it and Unblock the Notifications











