ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ: ಮನೋರಂಜನ್ ಮದುವೆಗೆ ನಡೀತಿದೆ ಸಿದ್ಧತೆ

ಸ್ಯಾಂಡಲ್‌ವುಡ್‌ನಲ್ಲಿ ಗಾಳಿಸುದ್ದಿಗಳಿಗೇನು ಕಮ್ಮಿ? ಗಾಂಧಿನಗರದ ಗಲ್ಲಿ ಗಲ್ಲಿಯೊಳಗೆ ದಿನಕ್ಕೆ ಒಂದಲ್ಲಾ ಒಂದು ಸುದ್ದಿ ಓಡಾಡುತ್ತಲೇ ಇರುತ್ತೆ. ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದರೆ, ಶೀಘ್ರದಲ್ಲಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಆರಂಭ ಆಗಲಿದೆಯಂತೆ. ಮೊದಲ ಪುತ್ರ ಮನೋರಂಜನ್ ಮದುವೆಗೆ ಕ್ರೇಜಿಸ್ಟಾರ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮನೋರಂಜನ್ ಸಿನಿಮಾಗಳು ಬಿಡುಗಡೆಯಾಗಿವೆ. ಹತ್ತಿರದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದೇ ಸರಿಯಾದ ಸಮಯ ಮದುವೆ ಮಾಡಬೇಕು ಅಂತ ನಿರ್ಧಾರ ಮಾಡಿದಂತಿದೆ. ಹೀಗಾಗಿ ತಮ್ಮ ಮಗನ ಮದುವೆ ಮಾಡಲು ನಿರ್ಧರಿಸಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ, ಮನೋರಂಜನ್ ಮದುವೆ ಯಾವಾಗ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

 ಕ್ರೇಜಿ ಮನೆಯಲ್ಲಿ ಮದುವೆ ಸಂಭ್ರಮ

ಕ್ರೇಜಿ ಮನೆಯಲ್ಲಿ ಮದುವೆ ಸಂಭ್ರಮ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಿದ್ದಾರೆ. 'ಸಾಹೇಬ' ಸಿನಿಮಾದಿಂದ ಆರಂಭವಾದ ಮನೋರಂಜನ್ ಸಿನಿಮಾ ಜರ್ನಿ ಈಗ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ 'ಪ್ರಾರಂಭ' ಹಾಗೂ 'ಮುಗಿಲ್ ಪೇಟೆ' ಸಿನಿಮಾಗಳು ತೆರೆಕಂಡಿವೆ. ಈ ಸಿನಿಮಾಗಳಿಗೆ ಅದ್ಭುತ ಯಶಸ್ಸು ಸಿಗದೆ ಹೋದರೂ, ಮನೋರಂಜನ್ ನಟನೆಯ ಬಗ್ಗೆ ಕ್ರೇಜಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಈ ವರ್ಷ ಮದುವೆ ಆಗಲು ನಿರ್ಧರಿಸಿದ್ದಾರಂತೆ.

 ಜೂನ್ ತಿಂಗಳಲ್ಲಿ ಪಕ್ಕಾ ಅರೇಂಜ್ ಮ್ಯಾರೇಜ್

ಜೂನ್ ತಿಂಗಳಲ್ಲಿ ಪಕ್ಕಾ ಅರೇಂಜ್ ಮ್ಯಾರೇಜ್

ಸಿನಿಮಾ ಜರ್ನಿ ಆರಾಮಾಗಿ ಸಾಗುತ್ತಿದೆ. ಕೌಟುಂಬಿಕ ಜವಾಬ್ದಾರಿಗಳು ಮುಗಿದಿವೆ. ಹೀಗಾಗಿ ಮನೋರಂಜನ್ ಜೂನ್‌ನಲ್ಲಿ ಮದುವೆ ಆಗುತ್ತಾರೆ ಎನ್ನಲಾಗಿದೆ. ಕಳೆದ ವರ್ಷವೇ ಮನೋರಂಜನ್ ಮದುವೆ ಆಗುವುದಾಗಿ ಹೇಳಿದ್ದರು. ತಂದೆ-ತಾಯಿ ಇಷ್ಟ ಹುಡುಗಿಯನ್ನೇ ವಿವಾಹವಾಗುತ್ತಿದ್ದೇನೆ ಎಂದಿದ್ದರು. ಆದರೆ, ಕೊರೊನಾದಿಂದ ಮನೋರಂಜನ್ ಸಿನಿಮಾ ಮುಂದಕ್ಕೆ ಹೋಗಿತ್ತು. ಹೀಗಾಗಿ ಮದುವೆಯನ್ನೂ ಮುಂದೂಡಿದ್ದರು ಎಂದು ಆಪ್ತವಲಯ ಹೇಳುತ್ತಿದೆ.

 ಮೊದಲ ಪುತ್ರನ ಮದುವೆಗೆ ಸಿದ್ಧತೆ

ಮೊದಲ ಪುತ್ರನ ಮದುವೆಗೆ ಸಿದ್ಧತೆ

ಎರಡು ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅದ್ದೂರಿಯಾಗಿ ಪುತ್ರಿ ಗೀತಾಂಜಲಿ ಮದುವೆ ಮಾಡಿದ್ದರು. ಮಂಟಪದಿಂದ ಹಿಡಿದು ಪ್ರತಿಯೊಂದು ಕ್ರೇಜಿಸ್ಟಾರ್ ಕಲ್ಪನೆಯಲ್ಲಿಯೇ ಸಿಂಗಾರಗೊಂಡಿತ್ತು. ಇದೀಗ ಮೊದಲ ಪುತ್ರ ಮನೋರಂಜನ್‌ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಎಲ್ಲಾ ಸರಿಯಾಗಿದ್ದಿದ್ದರೆ 2021ರಲ್ಲಿ ಮನೋರಂಜನ್ ದಾಂಪತ್ಯಕ್ಕೆ ಕಾಲಿಡುತ್ತಿದ್ದರು. ಆದರೆ, ಸಿನಿಮಾ ಕಮಿಟ್ಮೆಂಟ್‌ನಿಂದ ಇದು ಸಾಧ್ಯವಾಗಿರಲಿಲ್ಲ. ತಮ್ಮನ ಸಿನಿಮಾ ಬಿಡುಗಡೆ ಬಳಿಕ ಮದುವೆ ಗ್ಯಾರಂಟಿ.

 'ತ್ರಿವಿಕ್ರಮ್' ಸಿನಿಮಾ ರಿಲೀಸ್‌ಗೆ ಸಿದ್ಧತೆ

'ತ್ರಿವಿಕ್ರಮ್' ಸಿನಿಮಾ ರಿಲೀಸ್‌ಗೆ ಸಿದ್ಧತೆ

ರವಿಚಂದ್ರನ್‌ಗೆ ಈ ವರ್ಷ ಡಬಲ್ ಸಂಭ್ರಮ. ಮೊದಲನೆಯದು ಮೊದಲನೇ ಪುತ್ರ ಮನೋರಂಜನ್ ಮದುವೆ. ಇನ್ನೊಂದು ಎರಡನೇ ಪುತ್ರ ವಿಕ್ರಮ್ ಸ್ಯಾಂಡಲ್‌ವುಡ್ ಎಂಟ್ರಿ. ಹೌದು.. ವಿಕ್ರಮ್ ಅಭಿನಯದ ಮೊದಲ ಸಿನಿಮಾ 'ತ್ರಿವಿಕ್ರಮ್' ಬಿಡುಗಡೆ ಸಜ್ಜಾಗುತ್ತಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಇಬ್ಬರೂ ಮಕ್ಕಳೂ ಈ ವರ್ಷ ತಂದೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ.

More from Filmibeat

English summary
V Ravichandran son Manoranjan wedding in June. Crazy Star Ravichandran planning marriage his first song in June. Its said that Manoranjan marriage will be arrange not love marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X