'ಕಾಫಿ ವಿತ್ ಕರಣ್ 7' ಶೋನಲ್ಲಿ ಕತ್ರಿನಾ ಕೈಫ್ ಸಿಹಿ ಸುದ್ದಿ: ಬಾಲಿವುಡ್‌ನಲ್ಲೇನಿದು ಟಾಕ್?

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಮದುವೆ ಆದಲ್ಲಿಂದ ಇದೊಂದು ಸುದ್ದಿ ಓಡಾಡುತ್ತಲೇ ಇದೆ. ಕತ್ರಿನಾ-ವಿಕ್ಕಿ ಇಬ್ಬರೂ 2021ರಲ್ಲಿ ರಾಜಸ್ಥಾನದ ಐಶಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಕತ್ರಿನಾ ಗರ್ಭಿಣಿ ಆಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಹರಿದಾಡುತ್ತಲೇ ಇದೆ.

ಕತ್ರಿನಾ ಕೈಫ್ ಪ್ರೆಗ್ನೆಂಟ್ ಆಗಿದ್ದಾರೆ ಅನ್ನೋ ಸುದ್ದಿ ಆಗಾಗ ಹೈಡ್‌ಲೈನ್ ಆಗುತ್ತಲೇ ಇದೆ. ಇದೇ ವರ್ಷ ಮೇ ತಿಂಗಳಿನಲ್ಲಿಯೂ ಕತ್ರಿನಾ ಕೈಫ್ ಪ್ರೆಗ್ನೆಂಟ್ ಅನ್ನು ಸುದ್ದಿ ಮತ್ತೆ ಹಬ್ಬಿತ್ತು. ಈ ವೇಳೆ ಕತ್ರಿನಾ ಕೈಫ್ ಮ್ಯಾನೇಜರ್ ಈ ಸುದ್ದಿಯೆಲ್ಲಾ ಸುಳ್ಳು ಎಂದು ಹೇಳಿದ ಮೇಲೆ ಗಾಳಿಸುದ್ದಿಗೆ ಬ್ರೇಕ್ ಬಿದ್ದಿತ್ತು.

ಇತ್ತೀಚೆಗೆ ಕತ್ರಿನಾ ಕೈಫ್ ಏರ್‌ಪೋರ್ಟ್‌ನಲ್ಲಿಯೂ ಸುದ್ದಿಯಾಗಿದ್ದರು. ದೊಗಲೆ ಕಾಸ್ಟ್ಯೂಮ್ ಧರಿಸಿದ ಬಂದಿದ್ದರಿಂದ ಕತ್ರಿನಾ ಕೈಫ್ ವಿಡಿಯೋ ನೋಡಿ, ಅಭಿಮಾನಿಗಳೇ ಗರ್ಭಿಣಿ ಇರಬಹುದು ಎಂಬ ಸುದ್ದಿ ಹಬ್ಬಿತ್ತು. ಈಗ ಮತ್ತೆ ಇಂತಹದ್ದೇ ಸುದ್ದಿ ಓಡಾಡುತ್ತಿದೆ. ಈಗ ಮತ್ತೆ ಕತ್ರಿನಾ ಕೈಫ್ ಪ್ರೆಗ್ನೆನ್ಸಿ ಬಗ್ಗೆ ಟಾಕ್ ಶುರುವಾಗಿದೆ. ಶೀಘ್ರದಲ್ಲಿಯೇ ಈ ಸಿಹಿ ಸುದ್ದಿಯನ್ನುಅಭಿಮಾನಿಗಳ ಬಳಿ ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ಕೂಡ ಇದೆ.

ಕರಣ್ ಕಾರ್ಯಕ್ರಮದಲ್ಲಿ ಕತ್ರಿನಾ ಸಿಹಿ ಸುದ್ದಿ

ಕರಣ್ ಕಾರ್ಯಕ್ರಮದಲ್ಲಿ ಕತ್ರಿನಾ ಸಿಹಿ ಸುದ್ದಿ

'ಕಾಫಿ ವಿತ್ ಕರಣ್ ಸೀಸನ್ 7' ಈ ಬಾರಿ ಡಿಸ್ನಿ ಹಾಟ್‌ ಸ್ಟಾರ್ ಓಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಸುದ್ದಿಯಲ್ಲಿದೆ. ಇದೇ ಟಾಕ್ ಶೋನಲ್ಲಿ ಕತ್ರಿನಾ ಕೈಫ್ ತಾನು ಗರ್ಭಿಣಿ ಅನ್ನುವ ವಿಷಯವನ್ನು ರಿವೀಲ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್‌ ಸಿನಿಮಾಗಳ ವರದಿ ಮಾಡುವ ಹಲವು ವೆಬ್‌ಸೈಟ್‌ಗಳು ಈ ವಿಷಯವನ್ನು ಪ್ರಸ್ತಾಪ ಮಾಡಿವೆ. ಆದರೆ, ಕೆಲವು ಮೂಲಗಳು "ಹೀಗೆ ಬಹಿರಂಗವಾಗಿ ವೈಯಕ್ತಿಕ ಜೀವನದ ಬಗ್ಗೆ ಇಬ್ಬರೂ ಮಾತನಾಡುವುದಿಲ್ಲ" ಎಂದೂ ಹೇಳುತ್ತಿವೆ.

ಟಾಕ್ ಶೋನಲ್ಲಿ ಖಾಸಗಿ ವಿಷಯ ಹೇಳಲ್ಲ

ಟಾಕ್ ಶೋನಲ್ಲಿ ಖಾಸಗಿ ವಿಷಯ ಹೇಳಲ್ಲ

"ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಖಾಸಗಿ ವಿಷಯಗಳನ್ನು ಟಾಕ್ ಶೋಗಳಲ್ಲಿ ಬಹಿರಂಗ ಪಡಿಸುವುದಿಲ್ಲ. ಬೇರೆ ಸೆಲೆಬ್ರೆಟಿಗಳಂತೆ ವೈಯಕ್ತಿಕ ವಿಚಾರಗಳನ್ನು ಹೀಗೆ ಹೇಳಿಕೊಳ್ಳುವುದು ಅನುಮಾನ. ಆದರೆ, ಅತೀ ಶೀಘ್ರದಲ್ಲಿ ಖಂಡಿತವಾಗಿಯೂ ಮೊದಲ ಪ್ರೆಗ್ನೆನ್ಸಿ ಬಗ್ಗೆ ಅನೌನ್ಸ್ ಮಾಡಲಿದ್ದಾರೆ." ಎಂದು ಕತ್ರಿನಾ ಆಪ್ತರು ನ್ಯೂಸ್ ವೆಬ್‌ ಸೈಟ್‌ಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ 'ಕಾಫಿ ವಿತ್ ಕರಣ್ 7' ಶೋನಲ್ಲಿ ವಿಕ್ಕಿ ಕೌಶಲ್‌ರಿಂದ ಕರಣ್ ಈ ವಿಷಯವನ್ನು ಬಾಯಿಬಿಡುಸುತ್ತಾರಾ ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

ಕರಣ್ ಶೋನಲ್ಲೇ ಪ್ರೀತಿ

ಕರಣ್ ಶೋನಲ್ಲೇ ಪ್ರೀತಿ

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ ಪ್ರೀತಿಸ ಹುಟ್ಟುವುದಕ್ಕೆ ಕರಣ್ ಜೋಹರ್ ನಡೆಸಿಕೊಡುವ ಶೋಗೆ ಅಡಿಪಾಯ ಹಾಕಿತ್ತು. 'ಕಾಫಿ ವಿತ್ ಕರಣ್' ಶೋನಲ್ಲಿ ಕತ್ರಿನಾ ಕೈಫ್ "ತಾನು ವಿಕ್ಕಿ ಕೌಶಲ್ ಜೊತೆ ಸುಂದರವಾಗಿ ಕಾಣುತ್ತೇನೆ" ಎಂದು ಹೇಳಿದ್ದರು. ಆ ಬಳಿಕ ಬಾಲಿವುಡ್ ನಿರ್ದೇಶಕಿ ಜೋಯಾ ಅಖ್ತರ್ ಮನೆಯಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಲ್ಲಿಂದ ಇಬ್ಬರ ಲವ್ ಸ್ಟೋರಿ ಶುರುವಾಗಿತ್ತು. 2021 ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಕತ್ರಿನಾ ಕೈಫ್ ಕೈ ತುಂಬಾ ಸಿನಿಮಾ

ಕತ್ರಿನಾ ಕೈಫ್ ಕೈ ತುಂಬಾ ಸಿನಿಮಾ

ಕತ್ರಿನಾ ಕೈಫ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ ಜೊತೆ 'ಟೈಗರ್ 3' ಸಿನಿಮಾದಲ್ಲಿ ಕತ್ರಿನಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಜೋಯಾ ಅಖ್ತರ್ ನಿರ್ದೇಶಿಸುತ್ತಿರುವ ' ಜೀ ಲೇ ಜರಾ' ಹಾಗೂ 'ಮೆರಿ ಕ್ರಿಸ್‌ಮಸ್' ಸಿನಿಮಾಗಳು ಕೈಯಲ್ಲಿವೆ. ಈ ಪ್ರಾಜೆಕ್ಟ್‌ಗಳು ಕಂಪ್ಲೀಟ್ ಆಗಿ ಮುಗಿದ ಬಳಿಕ ಫ್ಯಾಮಿಲಿ ಪ್ಲ್ಯಾನಿಂಗ್‌ ಬಗ್ಗೆ ಯೋಚನೆ ಮಾಡಬಹುದು ಎಂದು ಆಪ್ತ ವಲಯ ಹೇಳುತ್ತಿವೆ.

More from Filmibeat

English summary
Vicky Kaushal And Katrina Kaif To Announce Her Pregnancy On Koffee With Karan 7, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X