Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಪ್ರಚಾರಕ್ಕೆ ಬರುತ್ತಿಲ್ಲ ಅನುಷ್ಕಾ ಶೆಟ್ಟಿ.. ಅದಕ್ಕೆ ಕಾರಣ ಪ್ರಭಾಸ್?
'ಬಾಹುಬಲಿ' ಬಳಿಕ ಅನುಷ್ಕಾ ಶೆಟ್ಟಿ ವೃತ್ತಿ ಬದುಕು ಮತ್ತಷ್ಟು ಎತ್ತರಕ್ಕೆ ಹೋಗಬೇಕಿತ್ತು. ಆದರೆ, ಅದ್ಯಾಕೋ ಸ್ವೀಟಿ ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅದೆಷ್ಟೋ ಮಂದಿ ಇದಕ್ಕೆ ಕಾರಣ ಹುಡುಕೋ ಪ್ರಯತ್ನ ಮಾಡಿದ್ದರು.
ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು. 'ಅರುಂಧತಿ', 'ಬಾಹುಬಲಿ' ಅಂತಹ ಮೆಗಾ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಅನುಷ್ಕಾ ಶೆಟ್ಟಿಯ ವೃತ್ತಿ ಬದುಕು ಡೋಲಾಯಮಾನವಾಗಿದೆ. ಸಿನಿಮಾರಂಗದಲ್ಲಿ ಅನುಷ್ಕಾ ಅಂದುಕೊಂಡಷ್ಟು ಆಕ್ಟೀವ್ ಆಗಿಲ್ಲ. ಅದಕ್ಕೆ ಕಾರಣ ಹುಡುಕಲು ಹೋದವರಿಗೆ ಸಿಕ್ಕಿದ್ದು ಪ್ರಭಾಸ್.

ಅನುಷ್ಕಾ ಶೆಟ್ಟಿ ನಟಿಸಿದ ಸಿನಿಮಾ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಬಿಡುಗಡೆಗೆ ಹತ್ತಿರದಲ್ಲಿದೆ. ಹೀಗಿದ್ದರೂ, ಅನುಷ್ಕಾ ಶೆಟ್ಟಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಮುಂದಾಗಿಲ್ಲ. ಟಾಲಿವುಡ್ ಮೂಲಗಳ ಪ್ರಕಾರ, ಅನುಷ್ಕಾ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂಬ ಸುದ್ದಿ ಓಡಾಡುತ್ತಿದೆ. ಅದಕ್ಕೆ ಕಾರಣ ಪ್ರಭಾಸ್ ಎನ್ನಲಾಗುತ್ತಿದೆ.
ಅನುಷ್ಕಾ ಶೆಟ್ಟಿ ಸಿನಿಮಾ ಪ್ರಚಾರ ಮಾಡಲ್ಲ
ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ನವೀನ್ ಪೋಲಿಶೆಟ್ಟಿ ಒಂಟಿಯಾಗಿ ಇಡೀ ಸಿನಿಮಾವನ್ನು ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ. 'ಖುಷಿ' ಸಿನಿಮಾ ಪ್ರಚಾರದಿಂದ ಸಮಂತಾ ದೂರ ಉಳಿದಿದ್ದು, ವಿಜಯ್ ದೇವರಕೊಂಡ ಹೇಗೆ ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೋ ಹಾಗೇ ನವೀನ್ ಪೋಲಿಶೆಟ್ಟಿ ಸಿನಿಮಾ ಪ್ರಚಾರ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಪ್ರಚಾರಕ್ಕೆ ಹಿಂಜರಿಯಲು ಏನು ಕಾರಣ?
ಅನುಷ್ಕಾ ಶೆಟ್ಟಿ ಸಿನಿಮಾ ಪ್ರಚಾರದಿಂದ ಹಿಂಜರಿಯಲು ಎರಡು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಮೊದಲನೆಯದು ಅನುಷ್ಕಾ ಶೆಟ್ಟಿ ಮೊದಲಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾದಿಂದ ಪ್ರಚಾರದಿಂದಲೂ ದೂರ ಉಳಿದಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಗಳು ಓಡಾಡುತ್ತಿವೆ.

ಡಾರ್ಲಿಂಗ್ ಪ್ರಭಾಸ್ ಕಾರಣ?
'ಬಾಹುಬಲಿ' ಸಿನಿಮಾದಿಂದಲೂ ಡಾರ್ಲಿಂಗ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ. ಪ್ರಭಾಸ್ ಹಾಗೂ ಅನುಷ್ಕಾ ಇಬ್ಬರೂ ನಾವು ಉತ್ತಮ ಸ್ನೇಹಿತರು ಎಂದು ಹೇಳುತ್ತಲೇ ಬಂದಿದ್ದಾರೆ. ಪ್ರಚಾರಕ್ಕೆ ತೆರಳಿದಾಗ ಈ ಪ್ರಶ್ನೆಗಳನ್ನು ಕೇಳುತ್ತಾರೆ ಅನ್ನೋ ಕಾರಣಕ್ಕೆ ಹಿಂದೇಟು ಹಾಕಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಹೇಳಿಕೆಯನ್ನು ಇನ್ನೂ ಕೊಟ್ಟಿಲ್ಲ.
ಎಡವಿದ್ರಾ ಅನುಷ್ಕಾ ಶೆಟ್ಟಿ?
'ಬಾಹುಬಲಿ' ಬಳಿಕ ಅನುಷ್ಕಾ ಶೆಟ್ಟಿ ವೃತ್ತಿ ಬದುಕು ಮತ್ತಷ್ಟು ಎತ್ತರಕ್ಕೆ ಹೋಗಬಹುದಿತ್ತು. ಆದರೆ, ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅನುಷ್ಕಾ ಶೆಟ್ಟಿ ಎಡವಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅನುಷ್ಕಾ ಇನ್ನು ಮುಂದೆಯಾದರೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











