Rajinikanth 170: ರಜನಿ 170ನೇ ಸಿನಿಮಾ ಆರಂಭ ಯಾವಾಗ? 'ಜೈ ಭೀಮ್' ಡೈರೆಕ್ಟರ್ ಆಕ್ಷನ್ ಕಟ್ ಹೇಳೋದ್ಯಾವಾಗ?

ರಜನಿಕಾಂತ್ ಸಿನಿಮಾ 'ಜೈಲರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸೂಪರ್‌ಸ್ಟಾರ್ ಕಥೆ ಮುಗೀತು ಅಂದವರಿಗೆ ತಲೈವಾ ತಲೆಕೆಡಿಸಿಕೊಳ್ಳುವಂತಹ ತಿರುಗೇಟು ಕೊಟ್ಟಿದ್ದಾರೆ. ಈ ಮಧ್ಯೆ 170ನೇ ಸಿನಿಮಾ ಬಗ್ಗೆ ಜೋರಾಗಿಯೇ ಚರ್ಚೆ ಶುರುವಾಗಿದೆ.

'ಜೈಲರ್' ಸಿನಿಮಾ 500 ಕೋಟಿ ರೂ. ಗಳಿಕೆ ಮಾಡುತ್ತಿದ್ದಂತೆ ರಜನಿಕಾಂತ್ ಸಿನಿಮಾಗಳು ಬೇಗನೇ ಸೆಟ್ಟೇರುವುದಕ್ಕೆ ಶುರು ಮಾಡಿವೆ. ರಜನಿ ಮುಂದಿನ ಸಿನಿಮಾಗೆ 'ಜೈ ಭೀಮ್' ನಿರ್ದೇಶಿಸಿದ ಟಿ ಎಸ್ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ರಜನಿ ಅಭಿಮಾನಿಗಳು ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.

Viral Rajinikanth 170th Movie with Jai Bheem Director will start very soon

ರಜನಿಕಾಂತ್ ಹಾಗೂ ಜ್ಞಾನವೇಲ್ ಇಬ್ಬರದ್ದೂ ಡೆಡ್ಲಿ ಕಾಂಬಿನೇಷನ್‌. ಇವರಿಬ್ಬರ ಸಿನಿಮಾವನ್ನು ನೋಡುವ ರೀತಿ ಬೇರೆ. ಹೀಗಾಗಿ ರಜನಿಕಾಂತ್ 170ನೇ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಈ ಸಿನಿಮಾದಲ್ಲಿ ಯಾರೆಲ್ಲ ಇರುತ್ತಾರೆ? ಅನ್ನೋ ಪ್ರಶ್ನೆ ಅಭಿಮಾನಿಗಳ ಮುಂದಿದೆ. ಅದಕ್ಕೆ ತಕ್ಕಂತೆ ಟಾಲಿವುಡ್‌ನಲ್ಲಿ ಸುದ್ದಿಯೊಂದು ಓಡಾಡುತ್ತಿದೆ,

170ನೇ ಸಿನಿಮಾ ಮೇಲೆ ಕಣ್ಣು

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಸೂಪರ್‌ ಹಿಟ್ ಆದ ಬೆನ್ನಲ್ಲೇ 170ನೇ ಸಿನಿಮಾವನ್ನು ಆದಷ್ಟು ಬೇಗ ಪೂಜೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಸೂಪರ್‌ಸ್ಟಾರ್‌ಗೆ ಆಕ್ಷನ ಕಟ್ ಹೇಳುವುದಕ್ಕೆ ಜ್ಞಾನವೇಲ್ ಹಾಗೂ ಲೋಕೇಶ್ ಕನಗರಾಜು ಕ್ಯೂನಲ್ಲಿ ಇದ್ದರು. ರಜನಿ ಇಬ್ಬರಲ್ಲಿ ಯಾರಿಗೆ ಮೊದಲು ಗ್ರೀನ್ ಸಿಗ್ನಲ್ ಕೊಡುತ್ತಾರೋ ಅನ್ನೋ ಕುತೂಹಲವಿತ್ತು. ಅದಕ್ಕೀಗ ಚಿಕ್ಕದೊಂದು ಸುಳಿವು ಸಿಕ್ಕಿದೆ.

'ಜೈ ಭೀಮ್' ನಿರ್ದೇಶಕರಿಗೆ ಜೈ

ರಜನಿಕಾಂತ್ 170ನೇ ಸಿನಿಮಾವನ್ನು 'ಜೈ ಭೀಮ್' ನಿರ್ದೇಶಕ ಟಿ.ಎಸ್. ಜ್ಞಾನವೇಲ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಲೋಕೇಶ್ ಕನಗರಾಜ್ ಸದ್ಯ 'ಲಿಯೋ' ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಹೀಗಾಗಿ 'ಜೈ ಭೀಮ್' ನಿರ್ದೇಶಕರ ಪಾಲಿಗೆ 170ನೇ ಸಿನಿಮಾ ಬಂದಿದೆ ಅನ್ನೋ ಮಾತು ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ.

Viral Rajinikanth 170th Movie with Jai Bheem Director will start very soon

ಮುಹೂರ್ತ ಯಾವಾಗ? ಟೈಟಲ್ ಏನು?

ಸೂಪರ್‌ಸ್ಟಾರ್ ರಜನಿಕಾಂತ್ 170ನೇ ಸಿನಿಮಾದ ಮುಹೂರ್ತ ಆಗಸ್ಟ್ 26ರಂದು ನಡೆಯಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ಮುಹೂರ್ತ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 19ರಿಂದ 170ನೇ ಶೂಟಿಂಗ್ ಶುರು ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಟೈಟಲ್ ರಿಲೀಸ್ ಆಗಿಲ್ಲ. ಆದರೆ 'ಲೀಡರ್', 'ವೆಟ್ಟಯ್ಯನ್' ಅನ್ನೋ ಹೆಸರು ಓಡಾಡುತ್ತಿದೆ.

170ನೇ ಸಿನಿಮಾ ದಿಗ್ಗಜರ ಸಮಾಗಮ

170ನೇ ಸಿನಿಮಾದಲ್ಲಿ ರಜನಿಕಾಂತ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಎನ್‌ಕೌಂಟರ್ ಅನ್ನು ವಿರೋಧಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಸುದ್ದಿ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಭಗತ್ ಫಾಸಿಲ್, ಮಂಜು ವಾರಿಯರ್, ಶರ್ವಾನಂದ್ ಸೇರಿದಂತೆ ಹಲವು ನಟರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೀಗ ಇದು ಕಮರ್ಷಿಯಲ್ ಸಿನಿಮಾ ಆಗುತ್ತಾ? ಇಲ್ಲ ಪ್ರಶಸ್ತಿ ಗೆಲ್ಲುವ ಸಿನಿಮಾ ಆಗುತ್ತಾ ಅನ್ನೋ ಗೊಂದಲದಲ್ಲಿ ಇದ್ದಾರೆ.

More from Filmibeat

English summary
Rajinikanth 170th Movie with Jai Bheem Director will start soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X