ದಿಢೀರನೇ 'ಬಾಹುಬಲಿ 2' ಫೋಟೊ ಶೇರ್ ಮಾಡಿದ ಅನುಷ್ಕಾ; 'ರಾಜಾ ಸಾಬ್' ರಹಸ್ಯವೇನು?

ಟಾಲಿವುಡ್‌ನಲ್ಲಿ ಕೆಲವು ಸ್ಟಾರ್‌ಗಳು ಈಗಾಗಲೇ ಸೂಪರ್‌ಸ್ಟಾರ್ ಮಟ್ಟಕ್ಕೆ ಏರಿದ್ದಾರೆ. ಇದರಲ್ಲಿ ದೊಡ್ಡ ದೊಡ್ಡ ಸ್ಟಾರ್ ಎನಿಸಿಕೊಂಡವರು ಇನ್ನೂ ಮದುವೆಯಾದೇ ಹಾಗೇ ಉಳಿದುಕೊಂಡಿದ್ದಾರೆ. ಅದರಲ್ಲಿ ಹೀರೊ ಹಾಗೂ ಹೀರೊಯಿನ್ ಕೂಡ ಸೇರಿಕೊಂಡಿದ್ದಾರೆ. ಇವರ ಬಗ್ಗೆ ಆಗಾಗ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಲೇ ಇರುತ್ತೆ.

ವಯಸ್ಸು 35 ದಾಟಿದರೂ, ತೆಲುಗು ಚಿತ್ರರಂಗದ ಹಲವು ಹೀರೋ- ಹೀರೋಯಿನ್‌ಗಳು ಇನ್ನೂ ಮದುವೆ ಆಗದೇ ಹಾಗೆಯೇ ಉಳಿದಿದ್ದಾರೆ. ಇವರಿಗೆ ನೇಮ್- ಫೇಮ್ ಎಲ್ಲವೂ ಸಿಕ್ಕಿದ್ದರೂ ಇನ್ನೂ ಸಂಸಾರ ಅನ್ನುವ ಬಂಧದಲ್ಲಿ ಸಿಕ್ಕಿಕೊಳ್ಳುವುದಕ್ಕೆ ತಯಾರಿಲ್ಲ. ಇಂತಹವರಲ್ಲಿ ಡಾರ್ಲಿಂಗ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ.

What is that latest proof that Anushka Shetty and Prabhas are in a relationship

'ಬಾಹುಬಲಿ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಅನುಷ್ಕಾ ಶೆಟ್ಟಿ , ಪ್ರಭಾಸ್ ಮೇಲೆ ಅಭಿಮಾನಿಗಳ ಕಣ್ಣು ಬಿದ್ದಿತ್ತು. ಈ ಜೋಡಿ ಕೆಮಿಸ್ಟ್ರಿ ತೆರೆಮೇಲಷ್ಟೇ ಅಲ್ಲ, ತೆರೆ ಹಿಂದೆಯೂ ಇರಬಹುದೇ? ಅನ್ನೋ ಪ್ರಶ್ನೆ ಮೂಡಿದ್ದೇ ಈ ಸಿನಿಮಾ ತೆರೆಕಂಡಾಗ. ಅಲ್ಲಿಂದ ಇಲ್ಲಿವರೆಗೂ ಅಭಿಮಾನಿಗಳು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತ ಬಲವಾಗಿ ನಂಬಿ ಕೂತಿದ್ದಾರೆ. ಆದರೆ, ಈ ಜೋಡಿ ಮಾತ್ರ ಇನ್ನೂ ಆ ಮಾತನ್ನು ಒಪ್ಪಿಕೊಳ್ಳುತ್ತಲೇ ಇಲ್ಲ.

ಪ್ಯಾನ್ ಇಂಡಿಯಾ ಸಿನಿಮಾ 'ಬಾಹುಬಲಿ' ಸೀರಿಸ್ ತೆರೆಕಂಡ ಬಳಿಕ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮತ್ತೆ ಒಟ್ಟಿಗೆ ನಟಿಸಿಲ್ಲ. ಅಲ್ಲಿಂದ ತಮ್ಮದೇ ಹಾದಿ ಹಿಡಿದು ಬೇರೆ ಬೇರೆ ಸಿನಿಮಾ ಮಾಡುತ್ತಿದ್ದಾರೆ. 'ಬಾಹುಬಲಿ 2' ರಿಲೀಸ್ ಬಳಿಕ ಆರಂಭದಲ್ಲಿ ಅನುಷ್ಕಾ ಹಾಗೂ ಪ್ರಭಾಸ್ ಇಬ್ಬರೂ ಸೋಲು ಕಂಡಿದ್ದರು. ಆದರೆ, ಅನುಷ್ಕಾ ಶೆಟ್ಟಿ ಸ್ವಲ್ಪ ಗ್ಯಾಪ್ ತೆಗೆದುಕೊಂಡು 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಮಾಡಿದ್ದರು. ಈ ಸಿನಿಮಾ ಗೆದ್ದು ಮತ್ತೆ ಅನುಷ್ಕಾಗೆ ಹೊಸ ಹುರುಪು ಕೊಟ್ಟಿತ್ತು.

'ಬಾಹುಬಲಿ 2' ಸಿನಿಮಾದಿಂದ ಈ ಜೋಡಿ ಮತ್ತೆ ಒಟ್ಟಿಗೆ ನಟಿಸಿದ್ದೇ ಇಲ್ಲ. ಆದರೂ, ಅಭಿಮಾನಿಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇವರ ಲವ್ ಸ್ಟೋರಿ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಮತ್ತೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರನ್ನು ಒಟ್ಟಿಗೆ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಒಂದೇ ಸಿನಿಮಾ ಇವರು ನಟಿಸಬೇಕು ಅನ್ನೋ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಜೋಡಿ ಮಾತ್ರ ಬೇರೆ ಬೇರೆ ಹಾದಿಯನ್ನು ಹಿಡಿದು ಹೊರಟಿದೆ.

What is that latest proof that Anushka Shetty and Prabhas are in a relationship

ಪದೇ ಪದೆ ಇವರಿಬ್ಬರ ಮದುವೆ ವಿಷಯ ಪ್ರಸ್ತಾಪ ಆದಾಗುತ್ತಲೇ ಇದೆ. ಆ ವೇಳೆ ಎಲ್ಲಾ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ತಳ್ಳಿ ಹಾಕುತ್ತಲೇ ಇದ್ದರು. ಆದರೆ, ಹಲವು ದಿನಗಳಿಂದ ಇವರಿಬ್ಬರ ಬಗ್ಗೆ ಅನುಮಾನವಿದ್ದ ಅಭಿಮಾನಿಗಳಿಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅನುಷ್ಕಾ ಶೆಟ್ಟಿ ಇದ್ದಕ್ಕಿದ್ದ ಹಾಗೇ 'ಬಾಹುಬಲಿ 2' ಸಿನಿಮಾದ ತಮ್ಮ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಅಷ್ಟಕ್ಕೂ ಅನುಷ್ಕಾ ಶೆಟ್ಟಿ ಕಾರಣವೇ ಇಲ್ಲದೆ ಈ ಪೋಸ್ಟರ್ ಅನ್ನು ಶೇರ್ ಮಾಡಿದ್ದು ಯಾಕೆ? ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕಂಡುಕೊಂಡಿದ್ದಾರೆ. ಬಾಹುಬಲಿಯ ದೇವಸೇನಾ ಪಾತ್ರದ ಪೋಸ್ಟರ್ ಅನ್ನು ಯಾವುದೇ ಶೀರ್ಷಿಕೆ ಇಲ್ಲದೆ ಯಾಕೆ? ಪೋಸ್ಟ್ ಮಾಡಿದರು? ಅದೂ ಪ್ರಭಾಸ್ ನಟಿಸಿದ 'ರಾಜಾ ಸಾಬ್' ಗ್ಲಿಂಪ್ಸ್ ಹೊರ ಬೀಳುತ್ತಿದ್ದಂತೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದೇಕೆ? ಅಂತ ತಲೆ ಕೆಡಿಸಿಕೊಂಡಿದ್ದರು.

ಈ ಪೋಸ್ಟ್ ಅನ್ನು ಪ್ರಭಾಸ್‌ಗಾಗಿಯೇ ಹಾಕಿದ್ದಾರೆಂದು ತೆಲುಗು ಮಂದಿ ಶೇರ್ ಮಾಡುತ್ತಿದ್ದಾರೆ. ಈ ಫೋಸ್ಟ್ ಸಂಚಲನ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಮಾತು ಮತ್ತೆ ಶುರುವಾಗಿದೆ. ಅನುಷ್ಕಾ ಒಂದೇ ಒಂದು ಪೋಸ್ಟ್ ಅನ್ನು ಶೇರ್ ಮಾಡಿದ್ದು, ಯಾವುದೇ ವಿಷಯವನ್ನು ಹಂಚಿಕೊಳ್ಳದಿರುವುದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ. ಇಬ್ಬರೂ ಒಳ್ಳೆಯ ಸುದ್ದಿ ನೀಡುತ್ತಾರಾ? ಇಲ್ಲ ಇದು ಕೇವಲ ಕಾಕತಾಳೀಯವೇ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

More from Filmibeat

English summary
Anushka Shetty and Prabhas are in a relationship speculation going on in Tollywood:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X