ತೆಲುಗು ನಾಯಕಿಯರು 'ರಾಜ ಶ್ಯಾಮಲ ಹೋಮ'ದ ಮೊರೆ ಹೋಗುತ್ತಿರೋದ್ಯಾಕೆ? ಕ್ಯೂನಲ್ಲಿರೋ ನಟಿಯರು ಯಾರು?
ಸಿನಿಮಾ ಮಂದಿಗೆ ದೇವರ ಮೇಲೆ ಎಲ್ಲಿಲ್ಲದ ನಂಬಿಕೆ. ಸಿನಿಮಾದ ಪ್ರತಿಯೊಂದು ಕೆಲಸ ಮಾಡುವಾಗಲೂ ದೇವರ ಮೊರೆ ಹೋಗುತ್ತಾರೆ. ಆಗಾಗ ಹೀರೊಗಳು ತಿರುಪತಿ, ಮಂತ್ರಾಲಯ ಅಂತ ಬೇರೆ ಬೇರೆ ಕಡೆ ಹೋಗಿ ದೇವರ ದರ್ಶನ ಪಡೆದು ಬರುತ್ತಾರೆ. ಇನ್ನು ಹೀರೊಯಿನ್‌ಗಳು ಕೂಡ ದೇವಸ್ಥಾನಗಳಿಗೆ ಭೇಟಿ ಕೊಡುವುದು ಹೊಸದೇನಲ್ಲ.
ಆದ್ರೀಗ ಟಾಲಿವುಡ್‌ನಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಸ್ಟಾರ್ ನಟಿಯರೆಲ್ಲ ಒಬ್ಬೊಬ್ಬರಾಗಿಯೇ ದೇವರ ಹೊರ ಹೋಗುತ್ತಿದ್ದಾರಂತೆ. ಸಮಂತಾ, ರಶ್ಮಿಕಾ ಮಂದಣ್ಣ ಸೇರಿದಂತೆ ಕೆಲವು ನಟಿಯರು ಹೋಮ ಹವನಗಳನ್ನು ಮಾಡಿಸುತ್ತಿದ್ದಾರೆ ಅಂತ ಗುಲ್ಲೆದ್ದಿದೆ.

ದಕ್ಷಿಣ ಭಾರತದ ಸ್ಟಾರ್ ನಟಿಯರು ಪ್ರವಿತ್ರವಾದ ಹಿಂದೂ ದೇವಸ್ಥಾನಗಳಿಗೆ ಹೋಗಿ ಬಂದಿರೋ ಉದಾಹರಣೆಗಳು ಇವೆ. ಸಮಂತಾ, ನಯನತಾರಾ ಅವರಂತಹ ಸ್ಟಾರ್ ಹೀರೊಯಿನ್ ಪವಿತ್ರ ಸ್ಥಳಗಳಿಗೆ ಹೋಗಿ ಬಂದಿದ್ದಾರೆ. ಅದ್ರೀಗ ಕೆಲ ಹೀರೊಯಿನ್ಸ್ 'ರಾಜ ಶ್ಯಾಮಲ ಹೋಮ' ಮಾಡಿಸುತ್ತಿದ್ದಾರೆ ಎಂದು ಟಾಲಿವುಡ್‌ನಲ್ಲಿ ಗುಸು ಗುಸು ಎದ್ದಿದೆ.
ಸಮಂತಾ-ರಶ್ಮಿಕಾರಿಂದ ವಿಶೇಷ ಹೋಮ?
ಟಾಲಿವುಡ್‌ನ ಸ್ಟಾರ್ ಹೀರೊಯಿನ್‌ಗಳ ಸರ್ಕಲ್‌ನಲ್ಲಿ 'ರಾಜ ಶ್ಯಾಮಲ' ಹೋಮ ಜಾಲ್ತಿಯಲ್ಲಿ ಇದೆಯಂತೆ. ತೆಲುಗು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೆ ಏರಿರೋ ನಟಿಯರು 'ರಾಜ ಶ್ಯಾಮಲ ಹೋಮ'ದ ಮೊರೆ ಹೋಗುತ್ತಿದ್ದಾರೆ ಎಂದು ಸದ್ದಿಯಾಗುತ್ತಿದೆ. ಗುಟ್ಟಾಗಿ ಸದ್ದಿಲ್ಲದೆ ಸಮಂತಾ, ರಶ್ಮಿಕಾ ಮಂದಣ್ಣ ಇಬ್ಬರೂ ಈಗಾಗಲೇ ಈ ಹೋಮವನ್ನು ಮಾಡಿದ್ದಾರಂತೆ.

ಇತ್ತೀಚೆಗೆ ಸಮಂತಾ ಸುಮಾರು 12 ಮಂದಿ ಹೈದರಾಬಾದ್‌ನ ತಮ್ಮ ಮನೆಗೆ ಪುರೋಹಿತರನ್ನು ಕರೆಸಿಕೊಂಡು ಈ ಹೋಮ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ ಹಲವು ಬೇರೆ ಬೇರೆ ಹೋಮಗಳನ್ನೂ ಮಾಡಿದ್ದಾರೆಂದು ಮೂಲಗಳು ಹೇಳುತ್ತಿವೆ. ಸಮಂತಾ ಹಿಂದೆನೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಇದೇ ಹೋಮ ಮಾಡಿದ್ದಾರಂತೆ. ಹೈದರಾಬಾದ್‌ನಿಂದ ಕರ್ನಾಟಕಕ್ಕೆ ಪುರೋಹಿತರನ್ನು ಇದೇ 'ರಾಜ ಶ್ಯಾಮಲ ಹೋಮ' ಮಾಡಿಸಲು ಕರೆದುಕೊಂಡು ಹೋಗಿದ್ದರು ಎಂದು ಮೂಲಗಳು ಹೇಳುತ್ತಿವೆ.
ನಿಧಿ ಅಗರ್ವಾಲ್‌ರಿಂದನೂ 'ರಾಜ ಶ್ಯಾಮಲ ಹೋಮ'
ಇತ್ತೀಚೆಗೆ 'ರಾಜ ಶ್ಯಾಮಲ ಹೋಮ'ವನ್ನು ಟಾಲಿವುಡ್‌ನ ಮತ್ತೊಬ್ಬ ನಟಿನೂ ಮಾಡಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಹೈದರಾಬಾದ್‌ನಲ್ಲಿರೋ ಪುರೋಹಿತರನ್ನು ಈ ಕಾರಣಕ್ಕಾಗಿಯೇ ಮುಂಬೈಗೆ ಕರೆದುಕೊಂಡು ಹೋಗಿದ್ದರು ಎಂದೂ ಹೇಳಲಾಗುತ್ತಿದೆ.
ನಿಧಿ ಅಗರ್ವಾಲ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ಪವನ್ ಕಲ್ಯಾಣ್ ನಟಿಸುತ್ತಿರುವ 'ಹರ ಹರ ವೀರ ಮಲ್ಲು' ಸಿನಿಮಾದಲ್ಲಿ ನಿಧಿ ಅಗರ್ವಾಲ್ ಕಾಣಿಸಿಕೊಂಡಿದ್ದು, ರಿಲೀಸ್ ಆಗಬೇಕಿದೆ. ಈ ಗ್ಯಾಪ್‌ನಲ್ಲೇ 'ರಾಜ ಶ್ಯಾಮಲ ಹೋಮ' ಮಾಡಿಸಿರೋ ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.
'ರಾಜ ಶ್ಯಾಮಲ ಹೋಮ' ಮಾಡಿಸೋದ್ಯಾಕೆ?
ಟಾಲಿವುಡ್ ಮೂಲಗಳ ಪ್ರಕಾರ, 'ರಾಜ ಶ್ಯಾಮಲ ಹೋಮ'ವನ್ನು ವೃತ್ತಿಯಲ್ಲಿ ಯಶಸ್ಸನ್ನು ಕಾಣಲು ಮಾಡುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ತಮ್ಮ ವೈರಿಗಳಿಂದ ರಕ್ಷಣೆ ಪಡೆಯುವುದಕ್ಕೂ ಈ ಹೋಮವನ್ನು ಮಾಡಿಸುತ್ತಾರೆ ಎಂದು ಸುದ್ದಿಯಾಗಿದೆ.
ಸಮಂತಾ, ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್ ಬಳಿಕ ಇನ್ನೂ ಇಬ್ಬರು ನಟಿಯರು ಇದೇ ಹೋಮವನ್ನು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರಂತೆ. ಬಾಲಿವುಡ್ ನಟಿ ಕೃತಿ ಸೆನನ್ ಹಾಗೂ ಪೂಜಾ ಹೆಗ್ಡೆ ಕೂಡ ಈ ಸಾಲಿನಲ್ಲಿ ನಿಂತಿದ್ದಾರಂತೆ. ಈಗಾಗಲೇ ಪೂಜೆ ಹೆಜ್ಜೆ ಪೆದ್ದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಮವನ್ನು ಮಾಡಿಸಿದ್ದರು. ಸದ್ಯ ಟಾಲಿವುಡ್ ನಟಿಯರು ಮಾಡುತ್ತಿರುವ 'ರಾಜ ಶ್ಯಾಮಲ ಹೋಮ'ದ ಬಗ್ಗೆನೇ ಸುದ್ದಿಯಾಗುತ್ತಿದೆ.


Click it and Unblock the Notifications











