ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
'ಬಾಹುಬಲಿ' ಸಿನಿಮಾ ಮೂಲಕ ದಿಢೀರನೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು ಅನುಷ್ಕಾ ಶೆಟ್ಟಿ. ಪ್ರಭಾಸ್‌ಗೆ ಯಾವ ಮಟ್ಟಿಗೆ ಜನಪ್ರಿಯತೆ ಬಂದಿತ್ತೋ ಅಷ್ಟೇ ಅನುಷ್ಕಾ ಶೆಟ್ಟಿ ಕೂಡ ಜನಮನ್ನಣೆ ಗಳಿಸಿದ್ದರು. ದಾಖಲೆ ಬರೆದ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದರೂ, ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅತೀ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಹಾಗಂತ ಅನುಷ್ಕಾ ಶೆಟ್ಟಿಗೆ ಅವಕಾಶಗಳು ಬರುತ್ತಿಲ್ಲ ಅಂತೇನಿಲ್ಲ. ಈ ನಟಿ ಒಪ್ಪಿದರೆ, ಸಿನಿಮಾ ನಿರ್ದೇಶನ ಮಾಡುವುದಕ್ಕೆ ನಿರ್ದೇಶಕರ ದೊಡ್ಡ ಗುಂಪೇ ಇದೆ. ಆದರೆ, ಅನುಷ್ಕಾ ಶೆಟ್ಟಿನೇ ಯಾಕೋ ಮನಸ್ಸು ಮಾಡುತ್ತಿಲ್ಲ ಅನ್ನೋದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ಇದರೊಂದಿಗೆ ಅನುಷ್ಕಾ ಶೆಟ್ಟಿ ತಮ್ಮನ್ನು ಹುಡುಕಿಕೊಂಡು ಬರುವ ನಿರ್ದೇಶಕರಿಗೆ ಒಂದು ಕಂಡೀಷನ್ ಹಾಕುತ್ತಿದ್ದಾರಂತೆ.

ಅನುಷ್ಕಾ ಶೆಟ್ಟಿ ಹಾಕುವ ಕಂಡೀಷನ್‌ಗೆ ಒಪ್ಪಿದರೆ ಮಾತ್ರ ಸಿನಿಮಾ ಮಾಡುತ್ತೇನೆ ಎನ್ನುತ್ತಿದ್ದಾರಂತೆ. 'ಬಾಹುಬಲಿ' ಸಿನಿಮಾಗೂ ಮುನ್ನ ಅನುಷ್ಕಾ ಶೆಟ್ಟಿ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಾದರೂ ಕಾಣಿಕೊಳ್ಳುತ್ತಿದ್ದರು. ಆದರೆ, ರಾಜಮೌಳಿ ಸಿನಿಮಾ ಯಾವಾಗ ರಿಲೀಸ್ ಆಯ್ತೋ.. ಅಲ್ಲಿಂದ ಸೆಲೆಕ್ಟಿವ್ ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಅದೀಗ ಇನ್ನೊಂದು ಹಂತಕ್ಕೆ ಹೋಗಿದ್ದು, ನಿರ್ದೇಶಕರಿಗೆ ಅನುಷ್ಕಾ ಶೆಟ್ಟಿ ಕಂಡೀಷನ್ ಹಾಕುತ್ತಿದ್ದಾರೆ ಅನ್ನೋ ಮಟ್ಟಿಗೆ ಬಂದು ನಿಂತಿದೆ.
ವಯಸ್ಸು 42 ದಾಟಿದರೂ ಅನುಷ್ಕಾ ಶೆಟ್ಟಿಗೆ ಅವಕಾಶವೇನು ಕಮ್ಮಿಯಾಗಿಲ್ಲ. ಹೀಗಲೂ ಅನುಷ್ಕಾ ಶೆಟ್ಟಿ ಜೊತೆ ನಟಿಸುವುದಕ್ಕೆ ಸ್ಟಾರ್ ನಟರು ತುದಿಗಾಲಲ್ಲಿ ನಿಂತಿದ್ದಾರೆ. ಇಷ್ಟೊಂದು ಬೇಡಿಕೆ ಇರುವ ನಟಿ ಸಿನಿಮಾಗಳ ಆಯ್ಕೆಯಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಳ್ಳೆಯ ಕತೆ ಹಿಡಿದು ಬಂದರೂ ಅನುಷ್ಕಾ ಶೆಟ್ಟಿ ಮಾತ್ರ ಒಪ್ಪಿತ್ತಿಲ್ಲವಂತೆ. ಅಷ್ಟಕ್ಕೂ ಅನುಷ್ಕಾ ಶೆಟ್ಟಿ ನಿರ್ದೇಶಕರಿಗೆ ಹಾಕುತ್ತಿರುವ ಕಂಡಿಷನ್ ಏನು? ತಿಳಿಯಲು ಮುಂದೆ ಓದಿ.
'ಬಾಹುಬಲಿ'ಯ ಜೇಜಮ್ಮ ಪಾತ್ರ ದಕ್ಷಿಣ ಭಾರತಕ್ಕಷ್ಟೇ ಅಲ್ಲ ಅನುಷ್ಕಾ ಶೆಟ್ಟಿಯನ್ನು ಪ್ರಪಂಚದಾದ್ಯಂತ ಗುರುತಿಸುವಂತೆ ಮಾಡಿತ್ತು. ಈ ಜನಪ್ರಿಯತೆಯಿಂದ ಇನ್ನೊಂದಿಷ್ಟು ಸಿನಿಮಾಗಳನ್ನು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಭಿಮಾನಿಗಳ ಆಸೆ ನಿರಾಸೆ ಆಯ್ತು. ಅನುಷ್ಕಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುವುದಕ್ಕೆ ಶುರು ಮಾಡಿದ್ದರು.

'ಬಾಹುಬಲಿ' ಬಳಿಕ 'ಭಾಗಮತಿ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಹೆಚ್ಚು ಕಡಿಮೆ ಒಂದು ವರ್ಷ ಗ್ಯಾಪ್ ಕೊಟ್ಟು 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಮತ್ತೆ 'ಮಿಸ್ಟರ್ ಮಿಸ್ಸಸ್ ಪೊಲಿಶೆಟ್ಟಿ' ಸಿನಿಮಾವರೆಗೂ ಕಾಯಬೇಕಾಯ್ತು. ಸದ್ಯ ಅನುಷ್ಕಾ ಶೆಟ್ಟಿ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದರೂ, ಇಂತಹದ್ದೊಂದು ಇಂಟ್ರೆಸ್ಟಿಂಗ್ ಸುದ್ದಿ ಹರಿದಾಡುತ್ತಿದೆ.
ಅನುಷ್ಕಾ ಶೆಟ್ಟಿಯನ್ನು ಹುಡುಕಿಕೊಂಡು ಬರುವ ನಿರ್ದೇಶಕರಿಗೆ ಕಂಡೀಷನ್ ಹಾಕುತ್ತಿದ್ದಾರಂತೆ. ರೊಟೀನ್ ಪಾತ್ರಗಳನ್ನು ತಮ್ಮ ಬಳಿ ತರಬೇಡಿ ಸಿನಿಮಾ ಮಾಡುವುದಿಲ್ಲ ಎನ್ನುತ್ತಿದ್ದಾರಂತೆ. ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ ಎಂದು ಹೇಳಿದ್ದಾರಂತೆ. ಆದರೆ, ಮಲಯಾಳಂ ಸಿನಿಮಾಗೆ ಎಂಟ್ರಿ ಕೊಟ್ಟಿರೋ ಅನುಷ್ಕಾ 'ಕಥನಾರ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಲೇಡಿ ಓರಿಯೆಂಟೆಡ್ ಸಿನಿಮಾ ಅಲ್ಲ. ಹೀಗಾಗಿ ಅನುಷ್ಕಾ ಅಭಿಮಾನಿಗಳೇ ಕನ್ಫ್ಯೂಸ್ ಆಗಿದ್ದಾರೆ. ಆದರೆ, ತೆಲುಗಿನಲ್ಲಿ 'ಘಾಟಿ' ಅನ್ನೂ ಸಿನಿಮಾದಲ್ಲಿ ನಟಿಸುತ್ತಿದ್ದು, ಇದು ಪಕ್ಕಾ ಅನುಷ್ಕಾ ಸಿನಿಮಾ ಎನ್ನಲಾಗಿದೆ.


Click it and Unblock the Notifications











