Nayanthara: ಲೇಡಿ ಸೂಪರ್‌ಸ್ಟಾರ್ ನಯನತಾರ ದಿಢೀರನೇ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ಯಾಕೆ? ಏನಿದರ ಗುಟ್ಟು?

ಲೇಡಿ ಸೂಪರ್‌ಸ್ಟಾರ್ ನಯನತಾರಾ ಸೋಶಿಯಲ್ ಮೀಡಿಯಾದ ದೂರ. ನಯನತಾರಾಗೂ ಇನ್‌ಸ್ಟಾಗ್ರಾಂಗೂ ಯಾವುದಕ್ಕೂ ಸಂಬಂಧವೇ ಇಲ್ಲವೇನೋ ಅನ್ನುವಂತೆ ಇದ್ದರು. ಆದ್ರೀಗ ದಿಢೀರನೇ ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿ ತಮ್ಮ ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದ್ದರು.

ನಯನತಾರಾ ಈಗ 'ಜವಾನ್' ಸಿನಿಮಾ ರಿಲೀಸ್‌ ಎದುರು ನೋಡುತ್ತಿದ್ದಾರೆ. ಈಗಾಗಲೇ ಗೊತ್ತಿರೋ ಹಾಗೇ ನಯನತಾರಾ ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ, ಪ್ರಚಾರದಲ್ಲಿ ಮಾತ್ರ ಭಾಗವಹಿಸುವುದಿಲ್ಲ. ಹಲವು ವರ್ಷಗಳಿಂದ ಇದೇ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.

nayanthara-instagram-entry-reason

ನಿನ್ನೆ (ಆಗಸ್ಟ್ 31) ಚೆನ್ನೈನಲ್ಲಿ ನಡೆದ 'ಜವಾನ್' ಕಾರ್ಯಕ್ರಮದಲ್ಲೂ ನಯನತಾರಾ ಕಾಣಿಸಿಕೊಂಡಿರಲಿಲ್ಲ. ಶಾರುಖ್ ಖಾನ್, ವಿಜಯ್ ಸೇತುಪತಿ, ಪ್ರಿಯಾಮಣಿ ಅಂತಹ ನಟರು ವೇದಿಕೆ ಮೇಲೆ ಇದ್ದರೂ ಲೇಡಿ ಸೂಪರ್‌ಸ್ಟಾರ್ ಸುಳಿವು ಮಾತ್ರ ಇರಲಿಲ್ಲ. ಆದರೆ, ಮಾರನೇ ದಿನವೇ ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿ ಮೊದಲ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಅಷ್ಟಕ್ಕೂ ನಯನತಾರಾ ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ್ದೇಕೆ? ತಿಳಿಯಲು ಮುಂದೆ ಓದಿ..

ಇನ್‌ಸ್ಟಾಗ್ರಾಂ ದಿಢೀರ್ ಎಂಟ್ರಿ?

ಲೇಡಿ ಸೂಪರ್‌ಸ್ಟಾರ್ ನಯನತಾರಾ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟು ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ನೆಗೆಟಿವ್ ಕಮೆಂಟ್‌ಗಳು, ಟ್ರೋಲ್‌ ಇವುಗಳಿಂದ ದೂರವೇ ಉಳಿದಿದ್ದ ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಕ್ಕೆ ಫ್ಯಾನ್ಸ್ ಶಾಕ್ ಆಗಿದ್ದು ನಿಜ. ಯಾಕಂದ್ರೆ, ನಯನತಾರಾ ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಎಲ್ಲದರಿಂದಲೈ ದೂರವೇ ಉಳಿದಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂ ನಯನತಾರಾ ನೋಡಿ ಥ್ರಿಲ್ ಆಗಿದ್ದಾರೆ.

nayanthara-instagram-entry-reason

ಮೊದಲ ಪೋಸ್ಟ್ ಏನು?

ಇನ್‌ಸ್ಟಾಗ್ರಾಂನಲ್ಲಿ 'ಜವಾನ್' ಸಿನಿಮಾ ಟ್ರೈಲರ್ ಪೋಸ್ಟ್ ಮಾಡಿದ್ದರು. ಅದೇ ನಯನತಾರಾ ಹಾಕಿದ ಮೊದಲ ವಿಡಿಯೋ. ಆ ಬಳಿಕ ತನ್ನ ಇಬ್ಬರು ಮಕ್ಕ ಉಯಿರ್ ಹಾಗೂ ಉಳಗ್ ಜೊತೆಗಿನ ವಿಡಿಯೋ ಹಾಗೂ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ ಕೆಲವೇ ಗಂಟೆಗಳಲ್ಲಿ 6 ಲಕ್ಕಕ್ಕೂ ಅಧಿಕ ಮಂದಿ ಇವರನ್ನು ಫಾಲೋ ಮಾಡುತ್ತಿದ್ದಾರೆ. ಈಗ ಎದ್ದಿರೋ ಪ್ರಶ್ನೆ ಏನಂದ್ರೆ, ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ್ದು ಯಾಕೆ?

ಇನ್‌ಸ್ಟಾಗ್ರಾಂಗೆ ನಯನತಾರಾ ಎಂಟ್ರಿ ಯಾಕೆ?

ನಯನತಾರಾ ಸಿನಿಮಾ ಒಪ್ಪಿಕೊಳ್ಳುವಾಗಲೇ ಪ್ರಚಾರಕ್ಕೆ ಬರೋದಿಲ್ಲ ಅನ್ನೋ ಷರತ್ತು ಹಾಕುತ್ತಾರೆ. ಹೀಗಾಗಿ ಕೆಲವೊಮ್ಮೆ ಸಿನಿಮಾಗೆ ಸಿಗಬೇಕಿದ್ದ ಪ್ರಚಾರದಲ್ಲಿ ಹಿನ್ನಡೆಯಾಗುತ್ತೆ ಅನ್ನೋ ಅಸಮಧಾನ ಕೇಳಿಬರುತ್ತಿತ್ತು. ಇಲ್ಲಾ ಸೂಪರ್‌ಸ್ಟಾರ್‌ಗಳಿದ್ದರೆ ಅವರೇ ಏಕಾಂಗಿಯಾಗಿ ಪ್ರಚಾರ ಮಾಡಬೇಕಿತ್ತು. ಹೀಗಾಗಿ ಸಮಸ್ಯೆಗಳು ಎದುರಾಗದೇ ಇರಲಿ ಅಂತ ನಯನತಾರಾ ಇನ್‌ಸ್ಟಾಗ್ರಾಂ ಓಪನ್ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಂ ಸಿನಿಮಾ ಪ್ರಚಾರ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

'ಜವಾನ್' ಪ್ರಚಾರಕ್ಕೂ ಹೋಗಲ್ಲ

ನಯನತಾರಾ ಮೊದಲ ಬಾಲಿವುಡ್ ಸಿನಿಮಾ 'ಜವಾನ್‌' ರಿಲೀಸ್‌ಗೆ ರೆಡಿಯಾಗಿದೆ. ಚೆನ್ನೈನಲ್ಲಿ ಪ್ರಚಾರ ಮುಗಿಸಿದ ತಂಡ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರಚಾರ ಮಾಡಲಿದೆ. ಆದ್ರೆ, ಮುಂಬೈ ಸೇರಿದಂತೆ ಬೇರೆ ಯಾವುದೇ ಕಡೆಗೂ ನಯನತಾರಾ ಪ್ರಚಾರಕ್ಕೆ ಹೋಗುವುದಿಲ್ಲ ಅನ್ನೋ ಸುದ್ದಿಯಿದೆ. ಆದರೆ, 'ಜವಾನ್' ಟ್ರೈಲರ್ ರಿಲೀಸ್ ಮಾಡಿದಂತೆ ಇನ್‌ಸ್ಟಾಗ್ರಾಂನಲ್ಲಿಯೇ ಪ್ರಚಾರ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Why Nayanthara suddenly opened instagram account
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X