ಕೊನೆಗೂ ಯಶ್ 19 ಸ್ಕ್ರಿಪ್ಟ್ ಲಾಕ್.. ಡಿಸೆಂಬರ್‌ನಿಂದ ಶೂಟಿಂಗ್? ಹೊಸ ಟ್ವಿಟರ್ ಅಪ್‌ಡೇಟ್?
ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ದೊಡ್ಡ ಸವಾಲಾಗಿಬಿಟ್ಟಿದೆ. ಯಶ್ ಅಭಿಮಾನಿಗಳು ಹೊಸ ಸಿನಿಮಾದ ಅಪ್‌ಡೇಟ್‌ಗಾಗಿ ಕಾದೂ ಕಾದು ಸುಸ್ತಾಗಿದ್ದಾರೆ. ಆದರೆ, ಇದೂವರೆಗೂ ಯಶ್ ತಮ್ಮ ಫ್ಯಾನ್ಸ್‌ಗೆ ಖುಷಿ ಸುದ್ದಿಯನ್ನು ನೀಡಿಲ್ಲ. ಯಶ್ 19 ಯಾವಾಗ ಶುರುವಾಗುತ್ತೆ ಅನ್ನೋ ಸುಳಿವು ಕೂಡ ಇಲ್ಲ.
ಈಗಾಗಲೇ ಯಶ್ ಕೂಡ " ಯಶ್ 19 ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನೆಲ್ಲ ನಂಬಬೇಡಿ. ಏನೇ ಇದ್ದರೂ ನಾನೇ ಎಲ್ಲವನ್ನೂ ಹೇಳುತ್ತೇನೆ" ಎಂದು ನ್ಯೂಸ್ ಚಾನೆಲ್ ಒಂದಕ್ಕೆ ಹೇಳಿದ್ದರು. ಆದರೆ, ಅಭಿಮಾನಿಗಳಿಗೆ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಯಶ್ 19 ಬಗ್ಗೆ ಅಪ್‌ಡೇಟ್ ಮಾತ್ರ ಸಿಗುತ್ತಲೇ ಇರುತ್ತೆ.

ಯಶ್ 19 ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಟ್ರೆಂಡಿಂಗ್‌ನಲ್ಲಿದೆ. ಯಶ್ ಹೊಸ ಸಿನಿಮಾ ಯಾವ ದಿನದಿಂದ ಆರಂಭ ಆಗುತ್ತೆ ಅನ್ನೋದನ್ನು ಅಭಿಮಾನಿಗಳೇ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರೋ ಸುದ್ದಿ ಏನು? ಯಶ್ 19 ಬಗ್ಗೆ ಏನಿದು ಹೊಸ ಅಪ್‌ಡೇಟ್. ತಿಳಿಯಲು ಮುಂದೆ ಓದಿ..
ಟ್ವಿಟರ್‌ನಲ್ಲಿ 'ಯಶ್ 19' ಟ್ರೆಂಡ್
ಟ್ವಿಟರ್‌ನಲ್ಲಿ ಯಶ್ 19 ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಯಶ್ ಫ್ಯಾನ್ಸ್ ಪೇಜ್ ಸೇರಿದಂತೆ ಸಿನಿಮಾ ಸುದ್ದಿಗಳನ್ನು ಹಂಚಿಕೊಂಡುವ ಪೇಜ್‌ಗಳು ಹೊಸ ಸುದ್ದಿಯೊಂದನ್ನು ಟ್ರೆಂಡಿಂಗ್‌ನಲ್ಲಿಟ್ಟಿವೆ. ನಿನ್ನೆ (ಸೆಪ್ಟೆಂಬರ್ 13) ರಾತ್ರಿಯಿಂದ ಟ್ವಿಟರ್‌ನಲ್ಲಿ 'ಯಶ್ 19' ಸಿನಿಮಾ ಟ್ರೆಂಡಿಂಗ್‌ನಲ್ಲಿದ್ದು, ಹೊಸ ಸಿನಿಮಾ ಶೂಟಿಂಗ್ ಯಾವಾಗಿನಿಂದ ಶುರುವಾಗುತ್ತೆ ಅನ್ನೋದನ್ನು ಪೋಸ್ಟ್ ಮಾಡಿದ್ದಾರೆ. ಹೊಸ ಸಿನಿಮಾ ನಿರ್ದೇಶಕರು ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ಟ್ರೆಂಡ್ ಮಾಡಲಾಗಿದೆ.
'ಯಶ್ 19' ಡಿಸೆಂಬರ್‌ನಲ್ಲಿ ಶುರು?
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದೂವರೆ ವರ್ಷ ಆಗಿದೆ. ಯಶ್ ಹೊಸ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ಏನೂ ಇಲ್ಲ. ಇತ್ತೀಚೆಗೆ ಯಶ್ ಹೊಸ ಸಿನಿಮಾ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡುವುದಾಗಿ ಹೇಳಿದ್ದರು. ಆದರೆ, ಮತ್ತೆ ಸೈಲೆಂಟ್ ಆಗಿದ್ದಾರೆ. ಸದ್ಯ ಹೊಸ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಸ್ಕ್ರೀಪ್ ಕೆಲಸ ನಡೆಯುತ್ತಿದೆ ಎಂದಿದ್ದರು. ಆದ್ರೀಗ ಟ್ವಿಟರ್‌ನಲ್ಲಿ ಆಗುತ್ತಿರುವ ಪ್ರಕಾರ, 'ಯಶ್ 19' ಶೂಟಿಂಗ್ ಡಿಸೆಂಬರ್ 23ರಿಂದ ಆರಂಭ ಆಗಲಿದೆ. ಆದರೆ, ಯಶ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಲಾಕ್ ಆಯ್ತಾ ಸ್ಕ್ರಿಪ್ಟ್ ?
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಸ್ಕ್ರಿಪ್ಟ್ ನಡೆಯುತ್ತಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಯಶ್ ಹೇಳಿದ್ದರು. ಆದ್ರೀಗ ಯಶ್ 19 ಸ್ಕ್ರಿಪ್ಟ್ ಕೂಡ ಲಾಕ್ ಆಗಿದ್ದು, ಮಲಯಾಳಂ ನಿರ್ದೇಶಕ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಟ್ವಿಟರ್‌ನಲ್ಲಿ ವೈರಲ್ ಮಾಡುತ್ತಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇದ್ಯಾವ ಸುದ್ದಿ ಬಗ್ಗೆನೂ ಅಧಿಕೃತ ಮಾಹಿತಿ ಇಲ್ಲ.
ರಾವಣನ ಅವತಾರ ದಾಟುತ್ತಾರಾ ಯಶ್?
'ಯಶ್ 19' ಸಿನಿಮಾ ಜೊತೆ ಜೊತೆಗೆ ಬಾಲಿವುಡ್ ಸಿನಿಮಾವೊಂದು ಚರ್ಚೆಯಲ್ಲಿದೆ. ಬಾಲಿವುಡ್‌ನಲ್ಲಿ ಮತ್ತೊಂದು 'ರಾಮಾಯಣ' ಸೆಟ್ಟೇರುವುದರಲ್ಲಿದೆ. 'ದಂಗಲ್' ಅಂತಹ ಮೆಗಾ ಸಿನಿಮಾ ನೀಡಿದ್ದ ನಿತೇಶ್ ತಿವಾರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್, ರಾವಣ ಪಾತ್ರ ಮಾಡುತ್ತಾರೆಂಬ ಸುದ್ದಿನೂ ಓಡಾಡುತ್ತಿದೆ.


Click it and Unblock the Notifications











