Toxic Business:'ಟಾಕ್ಸಿಕ್' ಆಂಧ್ರ-ತೆಲಂಗಾಣದಲ್ಲಿ ಆದ ಬ್ಯುಸಿನೆಸ್ ಎಷ್ಟು? ಯಶ್‌ಗೆ ಹೇಗಿದೆ ಬೇಡಿಕೆ?

'ಟಾಕ್ಸಿಕ್' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಇನ್ನೂ ಯಶ್ ಸಿನಿಮಾ ಪ್ರಚಾರವನ್ನು ಶುರು ಮಾಡಿಲ್ಲ. 'ಕೆಜಿಎಫ್ 2' ಬಳಿಕ ಯಶ್‌ ಸಿನಿಮಾ ದೇಶಾದ್ಯಂತ ಬೇಡಿಕೆ ಹೆಚ್ಚಿದೆ. ಹೀಗಾಗಿ 'ಟಾಕ್ಸಿಕ್' ಸಿನಿಮಾ ಮಾಡುವ ವ್ಯವಹಾರದ ಬಗ್ಗೆ ನೂರೆಂಟು ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ. ಆದರೆ ಇಲ್ಲಿವರೆಗೂ ಬರ್ತ್‌ಡೇ ಟೀಸರ್ ಬಿಟ್ಟು ಸದ್ದು ಮಾಡಿದ್ದು ಬಿಟ್ಟರೆ, ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ.

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. ಮಲಯಾಳಂ ನಟಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎರಡೂ ಸಂಸ್ಥೆಗಳು ಸೇರಿ ಸಿನಿಮಾವನ್ನು ನಿರ್ಮಾಣ ಮಾಡಿವೆ. ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

Yash and KVN Productions Toxic movie Andra Pradesh and Telangana theatrical business report

ಯಶ್‌ಗೆ ಜೊತೆಯಾಗಿ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯರೇ ಕೆಲಸ ಮಾಡಿದ್ದಾರೆ. ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಇಷ್ಟು ಮಂದಿ ನಾಯಕಿಯರು ನಟಿಸಿದ್ದಾರೆ. ಇನ್ನು ಅಥಿತಿ ಪಾತ್ರದಲ್ಲಿ ಬಾಲಿವುಡ್‌ನ ಪ್ರಮುಖ ನಟಿಯೊಬ್ಬರು ಸಿನಿಮಾದ ಆರಂಭದಲ್ಲಿಯೇ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿನೂ ಇದೆ. ಈ ಮಟ್ಟಿಗೆ ನಿರೀಕ್ಷೆ ಹುಟ್ಟಾಕಿರುವ 'ಟಾಕ್ಸಿಕ್' ಬ್ಯುಸಿನೆಸ್ ಅನ್ನು ಶುರು ಮಾಡಿದೆ. ಸದ್ಯ ಆಂಧ್ರ ಹಾಗೂ ತೆಲಂಗಾಣ ಬ್ಯುಸಿನೆಸ್ ಲಾಕ್ ಆಗಿದೆ ಎನ್ನಲಾಗಿದೆ. ಹಾಗಿದ್ದರೆ, ಎಷ್ಟು ಕೋಟಿಗೆ 'ಟಾಕ್ಸಿಕ್' ಥಿಯೇಟ್ರಿಕಲ್ ಬ್ಯುಸನೆಸ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಯಶ್ ಜೊತೆಗೆ ಐದು ನಾಯಕಿಯರ ಜೊತೆ ಇನ್ನೂ ಬಿಗ್ ಸ್ಟಾರ್‌ಗಳು ನಟಿಸಿದ್ದಾರೆ. ಅಕ್ಷಯ್ ಒಬೆರಾಯ್, ಬಿಯಾಟ್ರಿಜ್ ತೌಫಾನ್‌ಬಾಚ್, ಡೆರಿಲ್ ಡಿ ಸಿಲ್ವಾ, ಸುದೇವ್ ನಾಯರ್, ಅಮಿತ್ ತಿವಾರಿ, ಟೊವಿನೋ ಥಾಮಸ್ ಮತ್ತು ಕೈಲ್ ಪಾಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಗ್ ಕ್ಯಾನ್ವಸ್ ಸಿನಿಮಾ ಮೇಲೆ ಹಿಂದೆಂದಿಗಿಂತಲೂ ನಿರೀಕ್ಷೆಯಿದೆ.

ಯಶ್ ಬರ್ತ್‌ಡೇಗೂ ಮುನ್ನ ಸಿನಿಮಾದ ನಾಯಕಿಯರ ಲುಕ್ ಪೋಸ್ಟರ್‌ಗಳು ಹಾಗೂ ಗ್ಲಿಂಪ್ಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರೊಂದಿಗೆ ಸಿನಿಮಾದ ಟೀಸರ್‌ ಭಾರತೀಯ ಚಿತ್ರರಂಗದಲ್ಲಿಯೇ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಒಂದು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದು ವಿವಾದ ಎರಡನ್ನೂ ಸೃಷ್ಟಿ ಮಾಡಿತ್ತು. 'ಟಾಕ್ಸಿಕ್' ಟೀಸರ್ ನೋಡಿದ್ಮೇಲೆ ಇದು ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಷ್ಟೇ ಅಲ್ಲ. ಇದು ಗ್ಲೋಬಲ್ ಸಿನಿಮಾ ಅನ್ನೋದು ಕನ್ಫರ್ಮ್ ಆಗಿತ್ತು.

Yash and KVN Productions Toxic movie Andra Pradesh and Telangana theatrical business report

ಹೀಗಾಗಿ 'ಟಾಕ್ಸಿಕ್' ಬ್ಯುಸಿನೆಸ್‌ ಮೇಲೆ ಇಡೀ ಭಾರತೀಯ ಚಿತ್ರರಂಗವೇ ಒಂದು ಕಣ್ಣಿಟ್ಟಿದೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, 'ಟಾಕ್ಸಿಕ್' ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ದೊಡ್ಡ ಬ್ಯುಸಿನೆಸ್ ಮಾಡಿದೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಬಳಿಕ ತೆಲುಗು ರಾಜ್ಯಗಳಲ್ಲಿ ಯಶ್‌ಗೆ ಬೇಡಿಕೆ ಹೆಚ್ಚಾಗಿದ್ದು, 'ಟಾಕ್ಸಿಕ್' ದುಬಾರಿ ಮೊತ್ತಕ್ಕೆ ಖರೀದಿ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಆಂಧ್ರ, ನಿಜಾಮ್ ಹಾಗೂ ಸೀಡೆಡ್ ಏರಿಯಾಗಳಲ್ಲಿ 'ಟಾಕ್ಸಿಕ್' ಥಿಯೇಟ್ರಿಕಲ್ ರೈಟ್ಸ್ ಅನ್ನು ಮಾರಾಟ ಮಾಡಲಾಗಿದೆ. ಸುಮಾರು ₹40 ಕೋಟಿಗೆ ಹಕ್ಕುಗಳನ್ನು ಖರೀದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಚೈನ್ ಸಂಸ್ಥೆ ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ಈ ಹಕ್ಕುಗಳನ್ನು ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಿಲೀಸ್ ಕೂಡ ಭರ್ಜರಿಯಾಗಿ ಆಗುತ್ತೆ ಎಂದು ಹೇಳಲಾಗುತ್ತಿದೆ.

'ಟಾಕ್ಸಿಕ್' ಸಿನಿಮಾ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ₹40 ಕೋಟಿಗೆ ವ್ಯವಹಾರ ಮಾಡಿದೆ. ಹಾಗೇ ಬ್ರೇಕ್‌ಈವೆನ್ ಆಗಲು ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಸಬೇಕು ಅಂತಲೂ ಲೆಕ್ಕಾಚಾರ ಹಾಕಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ₹82 ಕೋಟಿ ಗ್ರಾಸ್ ಕಲೆಕ್ಷನ್ ಮಾಡಬೇಕು. ಹಾಗೂ ₹41 ಕೋಟಿ ಶೇರ್ ಬರಬೇಕು ಎಂದು ಅಂದಾಜು ಹಾಕುತ್ತಿದ್ದಾರೆ. ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಕೂಡ ಬಿಡುಗಡೆಯಾಗುತ್ತಿದ್ದು, ಯಶ್ ಹೇಗೆ ಟಕ್ಕರ್ ಕೊಡಬಹುದೆಂದು ಎದುರು ನೋಡುತ್ತಿದ್ದಾರೆ.

More from Filmibeat

English summary
Yash and KVN Productions Toxic movie Andra Pradesh and Telangana theatrical business report.
Read more about: yash toxic business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X