Toxic: ಹೀಗೊಂದು ಸುದ್ದಿ; ಬೆಂಗಳೂರಿನಲ್ಲಿ 'ಟಾಕ್ಸಿಕ್' ಬಿಗ್ ಇವೆಂಟ್? ಯಶ್ ಮಾಸ್ಟರ್ ಪ್ಲ್ಯಾನ್?

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಟಾಕ್ಸಿಕ್' ಸಿನಿಮಾ ಕೂಡ ಒಂದು. ಅದರಲ್ಲೂ ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಿನಿಮಾ ತುಂಬಾನೇ ಮುಖ್ಯ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಒಂದೇ ಒಂದು ಬಿಗ್ ಹಿಟ್ ಅನ್ನೋದು ಸಿಕ್ಕಿಲ್ಲ. ಹೀಗಾಗಿ ಯಶ್ ನಟಿಸಿರುವ ಗ್ಲೋಬಲ್ ಸಿನಿಮಾ 'ಟಾಕ್ಸಿಕ್' ಮೇಲೆ ನಿರೀಕ್ಷೆಗಳನ್ನು ಇಟ್ಟು ಕೂತಿದೆ. ಇತ್ತ ಯಶ್ ಕೂಡ ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್‌ಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

'ಟಾಕ್ಸಿಕ್' ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಪ್ರಚಾರನೂ ಕೂಡ ತನ್ನದೇ ಸ್ಟೈಲ್‌ನಲ್ಲಿ ಆರಂಭ ಆಗುತ್ತಿದೆ. ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ತನ್ನ ಬತ್ತಳಿಕೆಯಲ್ಲಿರುವ ಒಂದೊಂದೇ ಸರಕನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನಕ್ಕೆ ಮುಂದಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದಲ್ಲಿರುವ ಪ್ರೀ-ಮೇಲ್ ಲೀಡ್‌ಗಳ ಪಾತ್ರಗಳನ್ನು ಪರಿಚಯ ಮಾಡುವ ಟೀಸರ್ ರಿಲೀಸ್ ಮಾಡಲಾಗಿತ್ತು. ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Yash is planning to do biggest Toxic movie event in Bengaluru with female leads

ಈಗ ಸ್ಯಾಂಡಲ್‌ವುಡ್‌ನಲ್ಲಿ 'ಟಾಕ್ಸಿಕ್' ಬಗ್ಗೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. 'ಟಾಕ್ಸಿಕ್' ರಿಲೀಸ್‌ಗೆ 11 ದಿನಗಳು ಮುನ್ನ ಯಶ್ ಅತೀ ದೊಡ್ಡ ಇವೆಂಟ್ ಪ್ಲಾನ್ ಮಾಡುವುದಕ್ಕೆ ಸ್ಕೆಚ್ ಹಾಕಿದ್ದಾರಂತೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಇವೆಂಟ್ ಇದಾಗಿರುತ್ತೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ಯಶ್ ಮಾಸ್ಟರ್ ಪ್ಲಾನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ಬಿಗ್ ಇವೆಂಟ್

'ಕೆಜಿಎಫ್ 2' ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಸಾಕಷ್ಟು ಸಮಯ ತೆಗೆದುಕೊಂಡು ಮಾಡಿರುವ ಸಿನಿಮಾ ಆಗಿದ್ದರಿಂದ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣು ಇದ್ದೇ ಇದೆ. ಅಲ್ಲದೇ ಸಿನಿಮಾವನ್ನು ಗ್ಲೋಬಲ್ ರಿಲೀಸ್ ಮಾಡುತ್ತಿರೋದ್ರಿಂದ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತಹ 'ಟಾಕ್ಸಿಕ್' ಇವೆಂಟ್ ಮಾಡುವುದಕ್ಕೆ ಯಶ್ ನಿರ್ಧಾರ ಮಾಡಿದ್ದಾರೆಂದು ಹೇಳಾಗುತ್ತಿದೆ.

Also Read
"ಒಬ್ಬೊಬ್ರಾಗಿ ಬರ್ತೀರಾ.. ಇಲ್ಲಾ ಒಟ್ಟಿಗೆ ಬರ್ತೀರಾ?": 'ಲೇಡೀಸ್ & ಲೇಡೀಸ್' ಬಿಟ್ಟು ಬಾಕ್ಸ್ ಆಫೀಸ್ ವೈರಿಗಳಿಗೆ ಯಶ್ ಖಡಕ್ ಟಾಂಗ್

ಯಾವಾಗ ಈವೆಂಟ್?

ಸ್ಯಾಂಡಲ್‌ವುಡ್ ಮಂದಿಯ ಪ್ರಕಾರ, ಸಿನಿಮಾ ಬಿಡುಗಡೆ 11 ದಿನ ಮುನ್ನ ಯಶ್ 'ಟಾಕ್ಸಿಕ್' ಇವೆಂಟ್‌ಗೆ ಮುಂದಾಗಿದ್ದಾರೆ. ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ 'ಟಾಕ್ಸಿಕ್' ಇವೆಂಟ್ ನಡೆಯಲಿದೆ. ಈ ಇವೆಂಟ್‌ಗೆ ಇಡೀ ಚಿತ್ರತಂಡವನ್ನು ಸೇರಿಸುವ ಪ್ಲಾನ್ ಮಾಡುತ್ತಿದ್ದಾರೆ. ಜೊತೆಗೆ ವಿಶ್ವದ ಮೂಲೆ ಮೂಲೆಯಿಂದ ಪತ್ರಕರ್ತರು ಆಗಮಿಸಲಿದ್ದಾರೆಂದು ಹೇಳಲಾಗುತ್ತಿದೆ.

Yash is planning to do biggest Toxic movie event in Bengaluru with female leads

ನಾಯಕಿಯರೆಲ್ಲರೂ ಭಾಗಿ

ಈ ಇವೆಂಟ್‌ನಲ್ಲಿ ಯಶ್‌ ತನ್ನ ನಾಯಕಿಯರಿಗೆ ವಿಶೇಷ ಆಹ್ವಾನ ನೀಡಲಿದ್ದಾರೆ. ನಯನತಾರಾ ಸಾಮಾನ್ಯವಾಗಿ ಇವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ. ಆದರೆ, ಈ ಇವೆಂಟ್‌ನಲ್ಲಿ ಅವರಿಗೂ ವಿಶೇಷ ಆಹ್ವಾನವಿರುತ್ತೆ ಎನ್ನಲಾಗಿದೆ. ಇನ್ನು ಉಳಿದಂತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಶಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ.

ಅದೇ ಟ್ರೈಲರ್ ರಿಲೀಸ್

ಇನ್ನು 'ಟಾಕ್ಸಿಕ್' ಟ್ರೈಲರ್ ಅನ್ನೂ ಅಂದೇ ರಿಲೀಸ್ ಮಾಡಲಾಗುತ್ತಂತೆ. ಸಿನಿಮಾ ಬಿಡುಗಡೆಗೆ 11 ದಿನ ಇರುವಾಗಲೇ ಟ್ರೈಲರ್ ರಿಲೀಸ್ ಮಾಡಿ, ಬಳಿಕ ಎಲ್ಲಾ ಭಾಷೆಗಳಿಗೂ ಪ್ರಚಾರಕ್ಕೆ ತೆರಳಲಿದ್ದಾರೆಂದು ಹೇಳಲಾಗುತ್ತಿದೆ. ಸದ್ಯ ಇದೆಲ್ಲ ಸ್ಯಾಂಡಲ್‌ವುಡ್‌ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ಯಶ್ ಆಗಲಿ, ಕೆವಿಎನ್ ಪ್ರೊಡಕ್ಷನ್ ಆಗಲಿ 'ಟಾಕ್ಸಿಕ್' ಇವೆಂಟ್ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ.

English summary
Yash is planning to do biggest Toxic movie event in Bengaluru with female leads. Buzz is that Nayanthara, Kiara Advani, Rukmini Vasanth, Tara Sutaria, Huma Qureshi will present at the event.
Read more about: yash nayanthara toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X