Toxic Movie: 2025 ಏಪ್ರಿಲ್‌ನಲ್ಲೂ ಯಶ್ 'ಟಾಕ್ಸಿಕ್' ರಿಲೀಸ್ ಅನುಮಾನ; ಯಾಕೆ?
ರಾಕಿಂಗ್ ಸ್ಟಾರ್ ಯಶ್ ಹೊಸಾ ಸಿನಿಮಾ ಟಾಕ್ಸಿಕ್ ಬಗ್ಗೆ ಒಂದಿಷ್ಟೇ ಇಷ್ಟು ಸುದ್ದಿ ಬಂದ್ರೂ ಅಭಿಮಾನಿಗಳು ಕಣ್ಣು ಕಿವಿ ಅಲರ್ಟ್ ಆಗಿ ಗಮನಿಸ್ತಾರೆ. ಕೆಜಿಎಫ್ ನಂಥಾ ಬ್ಲಾಕ್ಬಸ್ಟರ್ ಕೊಟ್ಟ ನಂತರ ಯಶ್ ಪ್ರತೀ ನಡೆಯೂ ಕುತೂಹಲಕಾರಿಯೇ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಮೂಲಕ ಯಶ್ ಯಶೋಗಾಥೆ ಮುಂದುವರೆಯುತ್ತೆ ಅನ್ನೋದು ಗೊತ್ತಾದಾಗ ಸಹಜವಾಗೇ ಫ್ಯಾನ್ಸ್ ಸಖತ್ ಖುಷಿಪಟ್ರು. ಇದೀಗ ಟಾಕ್ಸಿಕ್ ಚಿತ್ರತಂಡ ಒಂದು ಮೇಜರ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಲೇಡಿ ಸೂಪರ್ಸ್ಟಾರ್ ನಯನತಾರಾ ಮೊಟ್ಟಮೊದಲ ಬಾರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇವರಿಬ್ಬರ ಜೊತೆಗೆ ಭಾರೀ ತಾರಾಗಣವೇ ಟಾಕ್ಸಿಕ್ ಗಾಗಿ ಸಜ್ಜಾಗಿದೆ. ಶೃತಿ ಹಾಸನ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಕೂಡಾ ಚಿತ್ರತಂಡ ಸೇರಲಿದ್ದಾರೆ. ಅಂದ್ಹಾಗೆ ಇಷ್ಟೊಂದು ಭಾರೀ ತಾರಾಗಣವಿರುವ ಟಾಕ್ಸಿಕ್ ಏಪ್ರಿಲ್ 10, 2025ಕ್ಕೆ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು.

ಆದ್ರೆ ಈಗ ಆ ದಿನಾಂಕ ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಸುಮಾರು 100 ದಿನಗಳ ಶೂಟಿಂಗ್ ಅಲ್ಲದೇ ಸಾಕಷ್ಟು ವಿಶುವಲ್ ಎಫೆಕ್ಟ್ಸ್ ಈ ಸಿನಿಮಾದಲ್ಲಿ ಬಳಸಲಾಗ್ತಿದೆ. ಇಷ್ಟೆಲ್ಲಾ ಭಾರೀ ತಾರಾಗಣ ಇರೋದ್ರಿಂದ ಎಲ್ಲರ ಡೇಟ್ಗಳನ್ನು ಹೊಂದಿಸುವುದು ಕೂಡಾ ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಈಗಾಗಲೇ ಚಿತ್ರದ ಕೆಲಸ ಶುರುವಾಗಿರೋದು ಹೌದಾದ್ರೂ ಅಂದುಕೊಂದಷ್ಟು ಬೇಗ ಶೂಟಿಂಗ್ ಮುಗಿಯೋದು ಸ್ವಲ್ಪ ಕಷ್ಟವೇ ಆಗಿದೆ. ಆದ್ದರಿಂದ ಅನಿವಾರ್ಯವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಇನ್ನು ಟಾಕ್ಸಿಕ್ ಶೂಟಿಂಗ್ ಗಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಮುಖ್ಯ ಸೀಕ್ವೆನ್ಸ್ ಒಂದರ ಶೂಟಿಂಗ್ ಅಲ್ಲಿ ನಡೆಯಲಿದೆಯಂತೆ. ಆ ಸೀಕ್ವೆನ್ಸ್ ನಲ್ಲಿ ಟಾಕ್ಸಿಕ್ ನ ಮುಖ್ಯ ಪಾತ್ರಧಾರಿಗಳೆಲ್ಲಾ ಒಟ್ಟಿಗೆ ನಟಿಸಲಿದ್ದಾರೆ ಎನ್ನಲಾಗಿದೆ.

ಇನ್ನು ನಯನತಾರಾ ಈ ಚಿತ್ರದಲ್ಲಿ ಯಶ್ ಸಹೋದರಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಹುಮಾ ಖುರೇಷಿ ವಿಲನ್ ಪಾತ್ರ ನಿರ್ವಹಿಸ್ತಿದ್ದಾರೆ ಎನ್ನುವ ಸುದ್ದಿಯೂ ಓಡಾಡ್ತಿದೆ. ಆದ್ರೆ ಇನ್ನೇನು 2025ರ ಏಪ್ರಿಲ್ ತಿಂಗಳಿಗೆ ಟಾಕ್ಸಿಕ್ ವೈಭವವನ್ನು ತೆರೆ ಮೇಲೆ ನೋಡಬಹುದು ಎಂದು ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದರು. ಆದ್ರೆ ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವುದು ಸ್ವಲ್ಪ ನಿರಾಸೆ ಉಂಟುಮಾಡಿದೆ. ಆದ್ರೆ ಇನ್ನೊಂದಷ್ಟು ದಿನ ಕಾದ್ರೂ ಪರ್ವಾಗಿಲ್ಲ ಭಾರೀ ಸಿನಿಮಾವನ್ನೇ ನೋಡ್ಬಹುದು. ಈ ವಿಚಾರದಲ್ಲಿ ಯಶ್ ಚಿತ್ರ ಮೋಸ ಮಾಡೋದಿಲ್ಲ ಎನ್ನುವ ನಂಬಿಕೆ ಕೂಡಾ ಅಭಿಮಾನಿಗಳಲ್ಲಿದೆ. ಆದ್ದರಿಂದ ಇನ್ನು ಬಿಡುಗಡೆಯ ದಿನಾಂಕ ಯಾವುದು ಎಂದು ಚಿತ್ರತಂಡ ಹೇಳದೇ ಇದ್ದರೂ ಅಭಿಮಾನಿಗಳ ಕುತೂಹಲವಂತೂ ಇದ್ದೇ ಇದೆ.


Click it and Unblock the Notifications











