»   » 2017 ರ ಬಹು ನಿರೀಕ್ಷಿತ ಚಿತ್ರ 'ಲೋಗನ್' ಟ್ರೈಲರ್ ಬಿಡುಗಡೆ

2017 ರ ಬಹು ನಿರೀಕ್ಷಿತ ಚಿತ್ರ 'ಲೋಗನ್' ಟ್ರೈಲರ್ ಬಿಡುಗಡೆ

Posted By:
Subscribe to Filmibeat Kannada

ಹಾಲಿವುಡ್ ಸೂಪರ್ ಹೀರೋ ಸಿನಿಮಾ ಆಧಾರಿತ ಎಕ್ಸ್ ಮೆನ್ ಸೀರೀಸ್ ನ 10 ನೇ ಸಿನಿಮಾದ ಟ್ರೈಲರ್ ಒಂದು ಬಿಡುಗಡೆ ಆಗಿದೆ. ಎಕ್ಸ್ ಮೆನ್ ಸೀರೀಸ್ ನ 10 ನೇ ಸಿನಿಮಾದ ಟ್ರೈಲರ್ ನೆನ್ನೆಯಷ್ಟೇ ಬಿಡುಗಡೆ ಆಗಿದ್ದರು ಸಹ ಈಗಾಗಲೇ 526,684 ಬಾರಿ ವೀಕ್ಷಣೆ ಪಡೆದಿದೆ.[ಜಾಕಿ ಚಾನ್ ಚಿತ್ರದಲ್ಲಿ ಸೋನು ಸೂದ್: ಟ್ರೈಲರ್ ನೋಡಿದ್ರಾ?]

ಏನು ಕೇವಲ ಎರಡೂ ದಿನಗಳಲ್ಲಿ ಇಷ್ಟೊಂದು ವೀಕ್ಷಣೆ ಪಡೆದಿದ್ಯಾ ಅಂತ ಎಲ್ಲರಿಗೂ ಆಶ್ಚರ್ಯ ಆಗೋದು ಗ್ಯಾರಂಟಿ. ಅಂತಹ ಸ್ಪೆಷಲ್ ಈ ಚಿತ್ರ ದಲ್ಲಿದೆ. ಆ ಸ್ಪೆಷಲ್ ಚಿತ್ರ ಯಾವುದು? ಅದರ ವಿಶೇಷತೆ ಏನು? ಇಲ್ಲಿದೆ ಮಾಹಿತಿ...

ಲೋಗನ್

ಹಾಲಿವುಡ್ ನ ಸೂಪರ್ ಹೀರೋ ಎಕ್ಸ್ ಮೆನ್ ಸೀರೀಸ್ ನ 10 ನೇ ಸಿನಿಮಾ ಹೆಸರು 'ಲೋಗನ್'. ಇದು ಹಾಲಿವುಡ್ ಅಂಗಳದ 2017 ರ ಬಹು ನಿರೀಕ್ಷಿತ ಚಿತ್ರವು ಸಹ. ಆದ್ದರಿಂದ ಟ್ರೈಲರ್ ಬಿಡುಗಡೆ ಆದ ಕೇವಲ ಒಂದೂವರೆ ದಿನಗಳಲ್ಲಿ 526,680 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಲೋಗನ್ ಚಿತ್ರದ ವಿಶೇಷತೆ ಏನು?

ಅಂದಹಾಗೆ 'ಲೋಗನ್' ಚಿತ್ರ ಈ ಹಿಂದೆ ಬಂದ ಎಕ್ಸ್ ಮೆನ್ ಸೀರೀಸ್ ನ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ವಿಭಿನ್ನವಾಗಿದೆ. ಯಾಕಂದ್ರೆ ಈ ಹಿಂದೆ ಎಕ್ಸ್ ಮೆನ್ ಸೀರೀಸ್ ಚಿತ್ರಗಳಲ್ಲಿ ಸೂಪರ್ ಹೀರೋ ಆಗಿದ್ದ ನಾಯಕ ನಟ Hugh Jackman ಈಗ ಪ್ರಮೋಶನ್ ಪಡೆದು ಪ್ರೊಫೆಸರ್ ಎಕ್ಸ್ ಆಗಿದ್ದಾರೆ.

ಪ್ರೊಫೆಸರ್ ಎಕ್ಸ್ ಮೆನ್ ಕಾಪಾಡಲು ಫ್ಯೂಚರ್ ಎಕ್ಸ್ ಮೆನ್

'ಲೋಗನ್' ಚಿತ್ರದಲ್ಲಿ Hugh Jackman ಕಾಯಿಲೆಗೆ ಒಳಗಾದ ಪ್ರೊಫೆಸರ್ ಎಕ್ಸ್ ಆಗಿ ಕಾಣಿಸಿಕೊಂಡಿದ್ದು, ಇವರನ್ನು ಕಾಪಾಡಲು ಫ್ಯೂಚರ್ ಸೂಪರ್ ಹೀರೋ ಆಗಿ ಎಕ್ಸ್ ವೂಮೆನ್ ಅನ್ನು ಪರಿಚಯಿಸಲಾಗಿದೆ. ಈ ಎಕ್ಸ್ ವೂಮೆನ್ ಮೆಕ್ಸಿಕನ್ ಗಡಿಯಲ್ಲಿ ಡಾರ್ಕ್‌ ಪಡೆಯವರಿಂದ ಪ್ರೊಫೆಸರ್ ಎಕ್ಸ್ ಅನ್ನು ಕಾಪಾಡುವ ಯಂಗ್ ಎಕ್ಸ್ ವೂಮೆನ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆ ಯಾವಾಗ

ಫ್ಯೂಚರ್ ಎಕ್ಸ್ ಮೆನ್, ಪ್ರೊಫೆಸರ್ ಎಕ್ಸ್ ಮೆನ್‌ ನಂತೆಯೇ ಆಕ್ಷನ್, ಫೈಟ್‌ ಮತ್ತು ಸಹಾಸಮಯ ದೃಶ್ಯಗಳಲ್ಲಿ ಅಭಿನಯಿಸಿರುವ 'ಲೋಗನ್' ಚಿತ್ರ ಮಾರ್ಚ್ 3, 2017 ರಂದು ಬಿಡುಗಡೆ ಆಗುತ್ತಿದೆ. ಅಂದಹಾಗೆ ಈ ಚಿತ್ರವನ್ನು ಈ ಹಿಂದೆ ಎಕ್ಸ್ ಮೆನ್ ಸೀರೀಸ್ ನ 'The Wolverine' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಜೇಮ್ಸ್ ಮ್ಯಾನ್ಗೋಲ್ಡ್ ನಿರ್ದೇಶನ ಮಾಡಿದ್ದಾರೆ.

ಈ ಹಿಂದಿನ ಎಕ್ಸ್ ಮೆನ್ ಸೀರೀಸ್ ಚಿತ್ರಗಳು

'ಲೋಗನ್' ಚಿತ್ರ ಎಕ್ಸ್ ಮೆನ್ ಸೀರೀಸ್ ನ 10 ನೇ ಸಿನಿಮಾ ಆಗಿದ್ದು ಈ ಹಿಂದಿನ ಎಕ್ಸ್ ಮೆನ್ ಸಿನಿಮಾಗಳು ಈ ಕೆಳಕಂಡಂತಿವೆ.

ಲೋಗನ್ ಟ್ರೈಲರ್

2017 ರ ಬಹು ನಿರೀಕ್ಷಿತ ಚಿತ್ರ 'ಲೋಗನ್' ಟ್ರೈಲರ್ ನೋಡಿ

ಲೋಗನ್ ಟ್ರೈಲರ್ ನೋಡಿ

English summary
Hollywood 2017 Most Expected 'Logan' Film Second Trailer Released. This Movie is directed by James Mangold.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada