»   » ಜಾಕಿ ಚಾನ್ ಚಿತ್ರದಲ್ಲಿ ಸೋನು ಸೂದ್: ಟ್ರೈಲರ್ ನೋಡಿದ್ರಾ?

ಜಾಕಿ ಚಾನ್ ಚಿತ್ರದಲ್ಲಿ ಸೋನು ಸೂದ್: ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ಮಾರ್ಷಲ್ ಆರ್ಟ್ಸ್ ಕಿಂಗ್ ಮತ್ತು ಸಿನಿಪ್ರಿಯರ ಹಾಟ್ ಫೇವರಿಟ್ ಹಾಂಗ್ ಕಾಂಗ್ ನಟ ಜಾಕಿ ಚಾನ್ ಭಾರತ ಮತ್ತು ಚೀನಾ ಸಂಸ್ಥೆಗಳ ಸಹ ಭಾಗಿತ್ವದ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕುಂಗ್ ಫು ಕಿಂಗ್ ತೆರೆ ಮೇಲೆ ದೀರ್ಘ ಸಮಯದ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.[ಜಾಕಿಚಾನ್ ನೂರನೇ ಚಿತ್ರ, ನೂರಾರು ವಿಷ್ಯ]

ಜಾಕಿ ಚಾನ್ ಚಿತ್ರ ಅಂದ್ರೇನೆ ಒಂದು ರೀತಿಯ ವಿಶೇಷತೆ ಇರುತ್ತೆ. ಅದರ ಜೊತೆಗೆ ಭಾರತ ಮತ್ತು ಚೀನಾ ಕಂಪನಿಗಳ ಸಹಯೋಗದಲ್ಲಿ ನಿರ್ಮಾಣವಾದ ಚಿತ್ರದಲ್ಲಿ ಬಾಲಿವುಡ್ ನ ಪ್ರಮುಖರು ಅಭಿನಯಿಸಿದ್ದಾರೆ. ಅಲ್ಲದೇ ಟ್ರೈಲರ್ ಬಿಡುಗಡೆ ಆಗಿದ್ದು ಭಾರತದಲ್ಲಿ ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ಆ ಚಿತ್ರ ಯಾವುದು, ಬಿಡುಗಡೆ ಯಾವಾಗ, ಬಾಲಿವುಡ್ ನ ಯಾರೆಲ್ಲಾ ನಟಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ..

ಭಾರತ ಮತ್ತು ಚೀನಾ ಕಂಪನಿಯ ಸಹಯೋಗದ ಚಿತ್ರ

ಆಸ್ಕರ್ ಪ್ರಶಸ್ತಿ ವಿಜೇತ ಜಾಕಿ ಜಾನ್ ಅಭಿನಯಿಸಿರುವ, ಭಾರತ ಮತ್ತು ಚೀನಾ ಕಂಪನಿಯ ಸಹಯೋಗದಲ್ಲಿ ನಿರ್ಮಾಣವಾಗಿರುವ ಚಿತ್ರ 'ಕುಂಪು ಫು ಯೋಗ'.[ಜಾಕಿಚಾನ್ ನೂರನೇ ಚಿತ್ರ, ನೂರಾರು ವಿಷ್ಯ]

ವಿಶೇಷ ಪಾತ್ರದಲ್ಲಿ ಸೋನು ಸೂದ್

ಬಹುಭಾಷಾ ನಟ ಸೋನು ಸೂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ತೆಲುಗು, ತಮಿಳು, ಪಂಜಾಬಿ ಮತ್ತು ಕನ್ನಡ ಚಿತ್ರದಲ್ಲಿ ಸೋನು ಸೂದ್ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಕುಂಗ್ ಫು ಕಿಂಗ್ 'ಜಾಕಿ ಚಾನ್‌' ಜೊತೆ 'ಕುಂಪು ಫು ಯೋಗ' ಚಿತ್ರದಲ್ಲಿ ನಟಿಸಿದ್ದಾರೆ.

'ಕುಂಗ್ ಫೂ ಯೋಗ' ದಲ್ಲಿ ಎಂ ಎಸ್ ಧೋನಿ ಚಿತ್ರದ ನಟಿ

ಎಂ ಎಸ್ ಧೋನಿ ಚಿತ್ರದ ನಟಿ ದಿಶಾ ಪಟಾಣಿ ಮತ್ತು ಬಾಲಿವುಡ್ ನಟಿ ಅಮೀರ್ ದಸ್ತೂರ್ 'ಕುಂಗ್ ಫೂ ಯೋಗ' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಕುಂಗ್ ಫೂ ಯೋಗ' ಚಿತ್ರಕಥೆ

ಮಗಧ ಸಾಮ್ರಾಜ್ಯದ ಆಭರಣ ಮತ್ತು ಅಪಾರ ಸಂಪತ್ತನ್ನು ಸರ್ಚ್‌ ಮಾಡಲು ಹೋಗುವ ಭಾರತ ಮತ್ತು ಚೀನಾದ ಪ್ರೊಫೆಸರ್‌ ಗಳು ಮತ್ತು ಆ ಸಂದರ್ಭದಲ್ಲಿ ಇವರ ನಡುವೆ ಏರ್ಪಡುವ ಪೈಪೋಟಿ ಚಿತ್ರದ ಕಥೆ ಆಗಿದೆ.

'ಕುಂಗ್ ಫೂ ಯೋಗ' 3 ಭಾಷೆಗಳಲ್ಲಿ

ಅಂದಹಾಗೆ 'ಕುಂಗ್ ಫೂ ಯೋಗ' ಚಿತ್ರವನ್ನು ಹಿಂದಿ, ಇಂಗ್ಲೀಷ್, ಮ್ಯಾಂಡರಿನ್ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಭಾರತದಲ್ಲಿ ರಿಲೀಸ್ ಯಾವಾಗ

ಭಾರತದ ನಟ ನಟಿಯರು ಅಭಿನಯಿಸಿರುವ 'ಕುಂಗ್ ಫೂ ಯೋಗ' ಚಿತ್ರವನ್ನು ಭಾರತದಲ್ಲಿ ಫೆಬ್ರವರಿ 3 ರಂದು ಬಿಡುಗಡೆ ಮಾಡಲಾಗುತ್ತಿದೆ. ಅಂದಹಾಗೆ ಅಮೆರಿಕ ದಲ್ಲಿ ಇದೇ ತಿಂಗಳ 27 ರಂದು 'ಕುಂಗ್ ಫೂ ಯೋಗ' ತೆರೆ ಕಾಣುತ್ತಿದ್ದು, ಚೀನಾ ದಲ್ಲಿ 28 ನೇ ತಾರೀಖು ಬಿಡುಗಡೆ ಆಗಲಿದೆ.

ಸ್ಟಾನ್ಲೇ ಟಾಂಗ್ ಆಕ್ಷನ್ ಕಟ್

'ಕುಂಗ್ ಫೂ ಯೋಗ' ಚಿತ್ರಕ್ಕೆ ಹಾಂಗ್ ಕಾಂಗ್ ನ ಸ್ಟಾನ್ಲೇ ಟಾಂಗ್ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಜಾಕಿ ಚಾನ್ ಎಂದಿನಂತೆ ತಮ್ಮ ಸಾಹಸಮಯ ಮಾರ್ಷಲ್ ಆರ್ಟ್ಸ್ ಕಲೆಯ ಪ್ರದರ್ಶನವನ್ನು ತೋರಿಸಿದ್ದಾರೆ. ನಥನ್ ವಾಂಗ್ ಮತ್ತು ಕೊಮೈಲ್ ಶಿವಾನ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಟ್ರೈಲರ್ ನೋಡಿ

English summary
Trailer of the much awaited Jackie Chan-Sonu Sood starrer 'Kung Fu Yoga' is out. It's a sneak peek into the action-packed movie, which highlights the best of Indian and Chinese cultures. Starring noted Kung Fu master Jackie Chan along with Bollywood actors Sonu Sood, Amyra Dastur and Disha Patani, 'Kung Fu Yoga' is an Indo-Chinese collaboration directed by noted director Stanley Tong.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada