ಹಾಲಿವುಡ್ ನಟನನ್ನು ಬೈಕ್‌ನಲ್ಲಿ ಬೆನ್ನಟ್ಟಿದ್ದ ಭಾರತದ ಅಭಿಮಾನಿ

ಅವೆಂಜರ್ಸ್, ಸ್ಟಾರ್ ಟ್ರೆಕ್, ರಶ್ ಮುಂತಾದ ಸಿನಿಮಾಗಳಿಂದ ಖ್ಯಾತರಾದ ಹಾಲಿವುಡ್ ನಟ ಕ್ರಿಸ್ ಹೆಮ್ಸ್‌ವರ್ಥ್ ಇತ್ತೀಚೆಗೆ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದು ತಮ್ಮ ಮುಂದಿನ ಚಿತ್ರ 'ಎಕ್ಸ್‌ಟ್ರಾಕ್ಷನ್' ಶೂಟಿಂಗ್‌ಗಾಗಿ ಭಾರತಕ್ಕೆ ಬಂದಾಗ ಕಾರ್‌ನಲ್ಲಿ ತೆರಳುತ್ತಿದ್ದ ಸಂದರ್ಭದ್ದು.

ಭಾರತಕ್ಕೆ ಬಂದಿದ್ದ ಹೆಮ್ಸ್‌ವರ್ಥ್ ಕಾರ್‌ನಲ್ಲಿ ಸಾಗುತ್ತಿರುವುದು ಕೆಲವರಿಗೆ ಹೇಗೋ ಗೊತ್ತಾಗಿತ್ತು. ಬೈಕ್‌ನಲ್ಲಿ ಅವರ ಕಾರ್‌ಅನ್ನು ಹಿಂಬಾಲಿಸತೊಡಗಿದರು. ಹೆಮ್ಸ್‌ವರ್ಥ್ ಅವರ ಫೋಟೊಗಳನ್ನು ಪ್ರಿಂಟ್ ತೆಗೆಸಿಕೊಂಡು ಅವರಿಗೆ ತೋರಿಸುತ್ತಾ ಸಾಹಸ ಮಾಡಿದರು. ಅದನ್ನು ಕಂಡು ಹೆಮ್ಸ್‌ವರ್ಥ್ ಕಕ್ಕಾಬಿಕ್ಕಿಯಾಗಿದ್ದಾರೆ. ಭಾರತದಲ್ಲಿ ಈ ರೀತಿಯ ಹುಚ್ಚಾಟಗಳನ್ನು ಮಾಡುತ್ತಾರೆ ಎಂದು ಅವರು ಎಣಿಸಿರಲಿಲ್ಲ. ಮುಂದೆ ಓದಿ...

ಬೈಕ್ ಸ್ಟಂಟ್‌ಗಳೆಲ್ಲ ಮಾಡಿದ

ಬೈಕ್ ಸ್ಟಂಟ್‌ಗಳೆಲ್ಲ ಮಾಡಿದ

'ಹಠಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಈ ಯುವಕ ನನ್ನ ಆಟೋಗ್ರಾಫ್ ಪಡೆದುಕೊಂಡಿದ್ದಲ್ಲದೆ, ನಾನು ಇದುವರೆಗೆ ಮಾಡಿದ ಮೋಟಾರ್ ಬೈಕ್ ಸ್ಟಂಟ್‌ಗಳೆಲ್ಲವನ್ನೂ ಮಾಡಿದ' ಎಂದು ಹೆಮ್ಸ್‌ವರ್ಥ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಬರೆದಿದ್ದಾರೆ.

ಫೋಟೊ ತೋರಿಸಿ ಆಟೋಗ್ರಾಫ್ ಕೇಳಿದ

ಫೋಟೊ ತೋರಿಸಿ ಆಟೋಗ್ರಾಫ್ ಕೇಳಿದ

ಹೆಮ್ಸ್‌ವರ್ಥ್ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಬೈಕ್‌ನಲ್ಲಿ ಗೆಳೆಯರೊಂದಿಗೆ ಹಿಂಬಾಲಿಸುವ ಯುವಕ, ಪಟ್ಟುಬಿಡದೆ ಕಾರಿನ ವೇಗದಲ್ಲಿ ಸಾಗುತ್ತಾ, ಹೆಮ್ಸ್‌ವರ್ಥ್ ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ. ಅವರ ಪ್ರಿಂಟ್ ತೆಗೆದ ಫೋಟೊ ತೋರಿಸುತ್ತಾ ಆಟೋಗ್ರಾಫ್‌ಗಾಗಿ ದುಂಬಾಲು ಬೀಳುತ್ತಾನೆ.

ಕಾರ್ ನಿಲ್ಲಿಸಿ ಆಟೋಗ್ರಾಫ್

ಇದನ್ನು ಕಂಡು ಹೆಮ್ಸ್‌ವರ್ಥ್ ಕಸಿವಿಸಿಗೊಳ್ಳುತ್ತಾರೆ. ಆ ಯುವಕ ಹೆಲ್ಮೆಟ್ ಕೂಡ ಧರಿಸದೆ ಇದ್ದಿದ್ದರಿಂದ ಜಾಗ್ರತೆಯಿಂದ ಬೈಕ್ ಓಡಿಸುವಂತೆ ಸೂಚಿಸುತ್ತಾರೆ. ಆದರೂ ಆತ ತನ್ನ ಸರ್ಕಸ್ ಮುಂದುವರಿಸಿದಾಗ ಕೊನೆಗೆ ಕಾರ್ ನಿಲ್ಲಿಸುತ್ತಾರೆ. ಬಳಿಕ ಆತನಿಗೆ ಆಟೋಗ್ರಾಫ್ ಕೊಟ್ಟು ಫೋಟೊ ಕೂಡ ತೆಗೆಸಿಕೊಳ್ಳಲು ಮುಂದಾಗುತ್ತಾರೆ.

ಭಾರತ ಸಂಸ್ಕೃತಿ ಚಿತ್ರದಲ್ಲಿ

ಭಾರತ ಸಂಸ್ಕೃತಿ ಚಿತ್ರದಲ್ಲಿ

'ಭಾರತ ಸುಂದರವಾದ ದೇಶ. ಇದು ಅಂತಾರಾಷ್ಟ್ರೀಯ ಆಕ್ಷನ್ ಫಿಲ್ಮ್‌ಗಳಲ್ಲಿಯೂ ಅಪರೂಪಕ್ಕೆ ಕಾಣಿಸುತ್ತದೆ. ಈ ಚಿತ್ರದ ಕಥೆಯಲ್ಲಿನ ಕೆಲವು ಸುಂದರವಾದ ಸಾಂಸ್ಕೃತಿಕ ಸಂಗತಿಗಳು ಭಾರತದಲ್ಲಿ ಸಮೃದ್ಧವಾಗಿವೆ. ಹಾಗೆಯೇ ಅವು ಚಿತ್ರದಲ್ಲಿ ಅಷ್ಟೇ ಮನೋಹರವಾಗಿ ಚಿತ್ರಿತಗೊಂಡಿವೆ' ಎಂದು ಚಿತ್ರದ ಸಹ ನಿರ್ಮಾಪಕ ಜೋ ರುಸ್ಸೋ ಇತ್ತೀಚೆಗೆ ಹೇಳಿದ್ದರು. ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ ಕೂಡ ನಟಿಸುತ್ತಿದ್ದಾರೆ.

More from Filmibeat

English summary
Hollywood actor Chris Hemsworth's car was chased by Indian fan on street during the shoot of his Extraction movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X