Breaking: ಹಾಲಿವುಡ್ ನಟ-ನಿರ್ಮಾಪಕ ರೇ ಲಿಯೊಟ್ಟಾ ನಿಧನ
ಅಮೆರಿಕದ ನಟ ಹಾಗೂ ನಿರ್ಮಾಪಕ ರೇ ಲಿಯೊಟ್ಟಾ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೆಲವು ವರದಿಗಳ ಪ್ರಕಾರ, ರೇ ಲಿಯೊಟ್ಟಾ ಮಲಗಿರುವಾಗಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ರೇ ಲಿಯೊಟ್ಟಾ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ 'ಡೇಂಜರಸ್ ವಾಟರ್ಸ್' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.
ರೇ ಲಿಯೊಟ್ಟಾ ಹಾಲಿವುಡ್‌ನ ಸುಪ್ರಸಿದ್ಧ ನಟನಾಗಿದ್ದು, ಮಾರ್ಟಿನ್ ಸ್ಕೋರ್ಸೆಸ್ ನಿರ್ದೇಶಿಸಿದ ಕ್ರೈಂ ಕ್ಲಾಸಿಕ್ ಗಾಢ್ ಫೆಲ್ಲಾಸ್ ಸಿನಿಮಾದ ಮೂಲಕ ವಿಶ್ವದ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ರೇ ಲಿಯೊಟ್ಟಾ ನಿಧನಕ್ಕೆ ಹಾಲಿವುಡ್ ಮಂದಿ ಹಾಗೂ ಸಿನಿಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ.
ರೇ ಲಿಯೊಟ್ಟಾ ಅವರ ಅಪಾರ ಅಭಿಮಾನಿಗಳಿಗೆ ಇವರ ನಿಧನ ಶಾಕ್ ಕೊಟ್ಟಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ರೇ ಅವರ ಅಭಿಮಾನಿಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

Recommended Video

ಹಾಲಿವುಡ್ ದಿಗ್ಗಜ ರೇ ಲಿಯೊಟ್ಟಾ ಪುತ್ರಿ ಕಾರ್ಸೆನ್ ಅವರನ್ನು ಅಗಲಿದ್ದಾರೆ. ವರದಿಗಳ ಪ್ರಕಾರ ರೇ ಲಿಯೊಟ್ಟಾ ಅವರು ಜೇಸಿ ನಿಟ್ಟೊಲೊರನ್ನು ವಿವಾಹವಾಗಲು ಸಜ್ಜಾಗುತ್ತಿದ್ದರು ಎನ್ನಲಾಗಿದೆ. ಹಾಲಿವುಡ್ ಸಿನಿಮಾಗಳ ಜೊತೆ ರೇ, ಆಪಲ್ ಟಿವಿ+ ಸಿರೀಸ್ ಬ್ಲಾಕ್ ಬರ್ಡ್‌ನ ಟರೊನ್ ಎಗೆರ್ಟನ್‌ನಲ್ಲಿ ನಟಿಸಿದ್ದರು. ಅಮೆಜಾನ್ ಪ್ರೈಮ್‌ನ ಹನ್ನಾ, ಜೆನಿಫರ್ ಲೊಪೇಜ್‌ರೊಂದಿಗೆ 'ಶೇಡ್ಸ್ ಆಫ್ ಬ್ಲ್ಯು 'ನಲ್ಲಿ ನಟಿಸಿದ್ದರು.


Click it and Unblock the Notifications











