ಹಾಲಿವುಡ್ ನಟಿ ಕೆಲ್ಲಿ ಪ್ರೆಸ್ಟೊನ್ ಸ್ತನ ಕ್ಯಾನ್ಸರ್‌ಗೆ ಬಲಿ

ಟ್ವಿನ್ಸ್, ಜೆರ್ರಿ ಮ್ಯಾಗುರೆ, ಮಿಸ್ಚೀಫ್ ಸೇರಿದಂತೆ ಹಾಲಿವುಡ್‌ನ ಅನೇಕ ಚಿತ್ರಗಳು ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ನಟಿಸಿದ್ದ ನಟಿ ಕೆಲ್ಲಿ ಪ್ರೆಸ್ಟೊನ್ ಭಾನುವಾರ ನಿಧನಾದರು. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 57 ವರ್ಷದ ನಟಿಯ ಸಾವಿನ ಸುದ್ದಿಯನ್ನು ಅವರ ಪತಿ, ಹಾಲಿವುಡ್ ನಟ ಜಾನ್ ಟ್ರವೊಲ್ಟಾ ಬಹಿರಂಗಪಡಿಸಿದ್ದಾರೆ.

Recommended Video

ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

ಪತ್ನಿ ಕೆಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸಂಗತಿಯನ್ನು ಟ್ರವೊಲ್ಟಾ ಭಾನುವಾರ ಮಧ್ಯರಾತ್ರಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಕೆಲ್ಲಿ ಎರಡು ವರ್ಷಗಳಿಂದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ ಸಾವನ್ನು ಗೆಲ್ಲುವುದು ಅವರಿಗೆ ಸಾಧ್ಯವಾಗಲಿಲ್ಲ.

'ನನ್ನ ಸುಂದರವಾದ ಪತ್ನಿ ಕೆಲ್ಲಿ, ಸ್ತನ ಕ್ಯಾನ್ಸರ್ ಜತೆಗಿನ ಎರಡು ವರ್ಷದ ಹೋರಾಟದಲ್ಲಿ ಸೋತಿದ್ದಾಳೆ ಎಂದು ನಿಮಗೆ ತಿಳಿಸಲು ಹೃದಯ ಭಾರವಾಗುತ್ತಿದೆ. ಆಕೆ ಅನೇಕರ ಬೆಂಬಲ ಮತ್ತು ಪ್ರೀತಿಯೊಂದಿಗೆ ಧೈರ್ಯದಿಂದ ಹೋರಾಟ ನಡೆಸಿದ್ದಳು' ಎಂದು ಟ್ರವೊಲ್ಟಾ ತಿಳಿಸಿದ್ದಾರೆ.

Actress, John Travoltas Wife Kelly Preston Dies Of Breast Cancer

ಇಬ್ಬರೂ 28 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಸುದೀರ್ಘ ಕಾಲ ಸಿನಿಮಾ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಅವರು, ಪತಿಯೊಂದಿಗೂ ತೆರೆ ಹಂಚಿಕೊಂಡಿದ್ದಾರೆ.

1983ರಲ್ಲಿ '10 ಟು ಮಿಡ್‌ನೈಟ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 1999ರಲ್ಲಿ ಕೆವಿನ್ ಕಾಸ್ಟನರ್ ಅವರೊಂದಿಗೆ 'ಫಾರ್ ದಿ ಲವ್ ಆಫ್ ದಿ ಗೇಮ್' ಚಿತ್ರದಲ್ಲಿ ನಟಿಸಿದ್ದ ಕೆಲ್ಲಿ, 2004ರಲ್ಲಿ ಮರೂನ್ 5ರ 'ಶಿ ವಿಲ್ ಬಿ ಲವ್‌ಡ್' ಮ್ಯೂಸಿಕ್ ವಿಡಿಯೋದಲ್ಲಿ ಕೂಡ ಕಾಣಿಸಿಕೊಂಡಿದ್ದರು.

1991ರಲ್ಲಿ ಪ್ಯಾರಿಸ್‌ನಲ್ಲಿ ಮಧ್ಯರಾತ್ರಿ ಸಮಾರಂಭದಲ್ಲಿ ಕೆಲ್ಲಿ ಹಾಗೂ ಟ್ರವೊಲ್ಟಾ ಮದುವೆಯಾಗಿದ್ದರು. ಆ ಸಮಯದಲ್ಲಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. 2000ದಲ್ಲಿ ಮಗಳು ಎಲ್ಲಾ ಬ್ಲೀಯು ಜನಿಸಿದ್ದರು. 2010ರಲ್ಲಿ ಮಗ ಬೆಂಜಮಿನ್ ಹುಟ್ಟಿದ್ದರು.

2009ರಲ್ಲಿ ಕುಟುಂಬದವರೆಲ್ಲ ರಜೆಯ ದಿನ ಕಳೆಯಲು ಬಹಮಾಸ್‌ಗೆ ತೆರಳಿದ್ದಾಗ ಅವಘಡವೊಂದರಲ್ಲಿ ಮೊದಲ ಮಗ ಜೆಟ್ ಮೃತಪಟ್ಟಿದ್ದರು. ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಘಟನೆ ವಿವಾದ ಸೃಷ್ಟಿಸಿತ್ತು.

More from Filmibeat

English summary
Kelly Preston, Hollywood actress and wife of actor John Travolta has died at 57. She was battling with breast cancer since 2 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X