James Bond: 'ಬ್ರಿಟಿಷ್ ಸ್ಪೈ 007'ಗಾಗಿ ಹುಡುಕಾಟ ಶುರು; ಯಾರಾಗ್ತಾರೆ ಮುಂದಿನ ಜೇಮ್ಸ್ ಬಾಂಡ್?

ವಿಶ್ವದ ಮೂಲೆ ಮೂಲೆಯಲ್ಲಿ 'ಜೇಮ್ಸ್ ಬಾಂಡ್' ಸಿನಿಮಾಗಳಿಗೆ ಫ್ಯಾನ್ ಫಾಲೋವಿಂಗ್ ಇದೆ. 'ಸ್ಪೈ' ಸಿನಿಮಾಗಳಿಗೆ ಹೊಸ ಮೆರುಗು ನೀಡಿದ್ದೇ ಈ 'ಜೇಮ್ಸ್ ಬಾಂಡ್' ಸಿನಿಮಾಗಳು. ಆಕ್ಷನ್, ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಅನ್ನು ಹೊತ್ತು ತರುವ 'ಜೇಮ್ಸ್ ಬಾಂಡ್' ಸೀರಿಸ್‌ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆಯನ್ನು ಮಾಡಿದೆ. ಆದರೆ, ಕೆಲವು ವರ್ಷಗಳಿಂದ ಈ ಬ್ರಿಟಿಷ್ ಸ್ಪೈ ಸಿನಿಮಾ ಬಗ್ಗೆ ಸುಳಿವೇ ಇರಲಿಲ್ಲ.

ಸದ್ಯಕ್ಕೀಗ 'ಜೇಮ್ಸ್ ಬಾಂಡ್' ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅಮೆಜಾನ್ ಎಂಜಿಎಂ ಸಂಸ್ಥೆ ಹೊಸ ಜೇಮ್ಸ್ ಬಾಂಡ್‌ಗಾಗಿ ಅಧಿಕೃತವಾಗಿ ಹುಡುಕಾಟವನ್ನು ಶುರುವಾಡಿದೆ. ಈಗಾಗಲೇ ಮುಂದಿನ 'ಜೇಮ್ಸ್ ಬಾಂಡ್' ಯಾರಾಗಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಆಡಿಷನ್ ಶುರುವಾಗಿರೋ ಬಗ್ಗೆ ಸುದ್ದಿ ಹೊರ ಬೀಳುತ್ತಿದ್ದಂತೆ ಕೆಲವು ನಟರ ಹೆಸರುಗಳು ಕೇಳಿ ಬರುತ್ತಿದೆ.

After Daniel Craig Amazon MGM Studios has began audition for next James Bond

ಕಳೆದ ಕೆಲವು ದಶಕಗಳಿಂದ ಜೇಮ್ಸ್ ಬಾಂಡ್ ಸಿನಿಮಾಗಳು ಸಿನಿ ಪ್ರಿಯರನ್ನು ರಂಜಿಸುತ್ತಿವೆ. 2021ರಲ್ಲಿ 'ನೋ ಟೈಮ್ ಟು ಡೈ' ರಿಲೀಸ್ ಆಗಿದ್ದೇ ಕೊನೆ ಆನಂತರ 'ಜೇಮ್ಸ್ ಬಾಂಡ್' ಮುಂದಿನ ಸೀರಿಸ್‌ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಅದಕ್ಕೆ ಕಾರಣ 'ಜೇಮ್ ಬಾಂಡ್' ಪಾತ್ರಗಳಲ್ಲಿ ನಟಿಸುತ್ತಿದ್ದ ಡೇನಿಯಲ್ ಕ್ರೇಗ್ ಆ ಪಾತ್ರದಿಂದ ಹೊರ ಬಂದಿದ್ದರು. ಹೀಗಾಗಿ ನಿರ್ಮಾಣ ಸಂಸ್ಥೆ ಹೊಸ 'ಬಾಂಡ್' ಹುಡುಕಾಟದಲ್ಲಿ ಬ್ಯುಸಿಯಾಗಿತ್ತು. ಕೊನೆಗೂ ಈಗ ಜೇಮ್ ಬಾಂಡ್ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.

ಜೇಮ್ಸ್ ಬಾಂಡ್ ಭಾರೀ ಫೇಮಸ್ ಆಗಿದ್ದ ಪಿಯರ್ಸ್ ಬ್ರಾಸ್ನನ್ ನಿರ್ಗಮನದ ಬಳಿಕ ಇಂತಹದ್ದೇ ಒಂದು ಸ್ಥಿತಿ ನಿರ್ಮಾಣ ಆಗಿತ್ತು. ಆಗ ಹೊಸ ಜೇಮ್ಸ್ ಬಾಂಡ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು ಡೇನಿಯಲ್ ಕ್ರೇಗ್. 2006 ರಲ್ಲಿ ತೆರೆಕಂಡಿದ್ದ 'ಕ್ಯಾಸಿನೋ ರಾಯಲ್' ಮೂಲಕ ಡೇನಿಯಲ್ ಕ್ರೇಗ್ 'ಜೇಮ್ಸ್ ಬಾಂಡ್' ಆಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸುಮಾರು 15 ವರ್ಷಗಳ ಕಾಲ 'ಜೇಮ್ಸ್ ಬಾಂಡ್' ಆಗಿ ನಟಿಸಿದ್ದರು.

Also Read
ಜೇಮ್ಸ್ ಬಾಂಡ್ ನ ಈ ರಾಯಲ್ ಲುಕ್ ಕಾರುಗಳಲ್ಲಿ ಯಾವುದು ನಿಮಗೆ ಇಷ್ಟ?
ಜೇಮ್ಸ್ ಬಾಂಡ್ ನ ಈ ರಾಯಲ್ ಲುಕ್ ಕಾರುಗಳಲ್ಲಿ ಯಾವುದು ನಿಮಗೆ ಇಷ್ಟ?

2006ರಲ್ಲಿ 'ಕ್ಯಾಸಿನೋ ರಾಯಲ್' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತ್ತು. ಎರಡು ವರ್ಷಗಳ ಗ್ಯಾಪ್‌ನಲ್ಲಿ ಅಂದರೆ, 2008ರಲ್ಲಿ 'ಕ್ವಾಂಟಮ್ ಆಫ್ ಸೊಲೇಸ್' ತೆರೆಕಂಡಿತ್ತು. 2012ರಲ್ಲಿ 'ಸ್ಕೈ ಫಾಲ್', 2015ರಲ್ಲಿ 'ಸ್ಪೆಕ್ಟರ್' ರಿಲೀಸ್ ಆಗಿತ್ತು. 2021ರಲ್ಲಿ 'ನೋ ಟೈಮ್ ಟು ಡೈ' ಸಿನಿಮಾ ರಿಲೀಸ್ ಆಗಿತ್ತು. ಇದು ಡೇನಿಯಲ್ ಕ್ರೇಗ್ 'ಜೇಮ್ಸ್ ಬಾಂಡ್' ಆಗಿ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಇಲ್ಲಿಂದ ಹೊಸ ಬಾಂಡ್ ಆಗಿ ಹುಡುಕಾಟ ಆರಂಭ ಆಗಿತ್ತು. ಆದರೆ, ಇನ್ನೂ ಅಮೆಜಾನ್ ಎಂಜಿಎಂ ಸಂಸ್ಥೆಗೆ ಹೊಸ ಬಾಂಡ್ ಸಿಕ್ಕಿಲ್ಲ.

After Daniel Craig Amazon MGM Studios has began audition for next James Bond

ಈಗ ಅಧಿಕೃತವಾಗಿ ಹೊಸ ಬಾಂಡ್ ಅನ್ನು ಹುಡುಕಾಡುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಮೆಜಾನ್ ಎಂಜಿಎಂ ಸಂಸ್ಥೆ ಅಧಿಕೃತವಾಗಿ ಜೇಮ್ ಬಾಂಡ್ ಹುಡುಕಾಟ ಶುರು ಮಾಡಿದೆ. ಆಸ್ಕರ್ ನಾಮಾಂಕಿತ ಕಾಸ್ಟಿಂಗ್ ಡೈರೆಕ್ಟರ್ ನಿನಾ ಗೋಲ್ಡ್ ಹೊಸ ಜೇಮ್ಸ್ ಬಾಂಡ್ ಹುಡುಕಲು ಸಹಾಯ ಮಾಡುತ್ತಿದ್ದಾರೆ. ಹಾಗೇ ವೆರೈಟಿಗೆ ಅಮೆಜಾನ್ ಎಂಜಿಎಂ ಸಂಸ್ಥೆ ಹೇಳಿಕೆ ನೀಡಿದ್ದು, "ಹೊಸ ಜೇಮ್ಸ್ ಬಾಂಡ್ ಹುಡುಕಾಟ ನಡೆಯುತ್ತಿದೆ. ಕಾಸ್ಟಿಂಗ್ ನಡೆಯುತ್ತಿರುವ ಈ ಸಮಯದಲ್ಲಿ ಆ ಬಗ್ಗೆ ಹೆಚ್ಚೇನು ಹೇಳುವುದಕ್ಕೆ ಆಗುವುದಿಲ್ಲ. ಸರಿಯಾದ ಸಮಯಕ್ಕೆ 007 ಅಭಿಮಾನಿಗಳಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ" ಎಂದು ಹೇಳಿಕೆ ನೀಡಿದೆ.

'ಜೇಮ್ಸ್ ಬಾಂಡ್‌'ಗೆ ಅಧಿಕೃತವಾಗಿ ಆಡಿಷನ್ ಶುರುವಾಗುವ ಮುನ್ನವೇ ಕೆಲವು ಹೆಸರುಗಳು ಓಡಾಡಿದ್ದವು. ಜಾಕೊಬ್ ಎರೋಡಿ, ಕಲ್ಲುಂ ಟರ್ನರ್, ಅರೋನ್ ಟೈಲರ್-ಜಾನ್ಸನ್ ಸೇರಿದಂತ ಹಲವು ಹೆಸರುಗಳು ಓಡಾಡಿದ್ದವು. ಆದರೆ, ಇದ್ಯಾವ ಹೆಸರೂ ಕೂಡ ಸದ್ಯಕ್ಕೆ ಅಧಿಕೃತವಲ್ಲ ಎಂದು ಹೇಳಲಾಗುತ್ತಿದೆ. 'ದುನ್' ಅಂತಹ ಜನಪ್ರಿಯ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ದೇಶಿಸಿದ್ದ ಡೆನಿಸ್ ವಿಲ್ಲೆನೆವ್ಯೂ ಹೊಸ ಬಾಂಡ್ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

English summary
After Daniel Craig Amazon MGM Studios has began audition for next James Bond. Famous actors like Jacob Elordi, Callum Turner, Aaron Taylor-Johnson are in the rumors list.
Read more about: james bond audition
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X