ಮೊದಲ ಹಾಲಿವುಡ್ ಸಿನಿಮಾ ಮುಗಿಸಿದ ಗರ್ಭಿಣಿ ಆಲಿಯಾ ಭಟ್: ವೈರಲ್ ಆಯ್ತು ಸೆಲ್ಫಿ!

ಅಲಿಯಾ ಭಟ್ ಹಾಗೂ ರಣ್‌ಬೀರ್‌ ಕಪೂರ್ ಪೋಷಕರಾಗುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಆಲಿಯಾ ಮತ್ತೊಂದು ಸಂತಸ ಸಂಗತಿಯೊಂದನ್ನು ಶೇರ್ ಮಾಡಿದ್ದಾರೆ. ಅದೇನೆಂದರೆ, ಟಾಮ್ ಹಾರ್ಪೆರ್ ನಿರ್ದೇಶಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾವನ್ನು ಆಲಿಯಾ ಭಟ್ ಮುಗಿಸಿಕೊಟ್ಟಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಆಲಿಯಾ ಭಟ್ ಹಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಮೊದಲ ಹಾಲಿವುಡ್ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಖುಷಿಯನ್ನೂ ವ್ಯಕ್ತಪಡಿಸಿದ್ದರು. ಈಗ ಅದೇ ಸಿನಿಮಾ ಮುಗಿಸಿರುವ ಖುಷಿಯಲ್ಲಿದ್ದಾರೆ.

ಆಲಿಯಾ ಭಟ್ ಮೊದಲ ಹಾಲಿವುಡ್ ಸಿನಿಮಾ ಸಹಜವಾಗಿಯೇ ಕುತೂಹಲವಿದೆ. ಇದರೊಂದಿಗೆ ಒಂದೇ ತಿಂಗಳಲ್ಲಿ ತಮ್ಮ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಕೊಟ್ಟಿದ್ದಾರೆ. ಹಾಲಿವುಡ್‌ ವಂಡರ್‌ವುಮನ್ ಜೊತೆಗಿನ ತೆಗೆಸಿಕೊಂಡ ಸೆಲ್ಫಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಲಿಯಾ ಹಾಲಿವುಡ್ ಸಿನಿಮಾ ಮುಗೀತು

ಆಲಿಯಾ ಹಾಲಿವುಡ್ ಸಿನಿಮಾ ಮುಗೀತು

ಆಲಿಯಾ ಭಟ್ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ. ಆದರೆ, ಹಾಲಿವುಡ್‌ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆಯನ್ನು ಹಲವು ದಿನಗಳ ಹಿಂದೆನೇ ವ್ಯಕ್ತಪಡಿಸಿದ್ದರು. ಇದೇ ವೇಳೆ ಹಾಲಿವುಡ್‌ನ ಟ್ಯಾಲೆಂಟ್ ಅಕ್ವಿಸಿಷನ್ ಕಂಪನಿಯೊಂದರ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಆ ಕಂಪನಿ ಮೂಲಕವೇ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತು. ಹಾಲಿವುಡ್‌ ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಲೀಡ್‌ ರೋಲ್‌ನಲ್ಲಿರುವ 'ಹಾರ್ಟ್ ಆಫ್ ಸ್ಟೋನ್‌'ನಲ್ಲಿ ನಟಿಸಿದ್ದರು.

'ವಂಡರ್‌ ವುಮನ್' ಆಲಿಯಾ ಸೆಲ್ಫಿ

'ವಂಡರ್‌ ವುಮನ್' ಆಲಿಯಾ ಸೆಲ್ಫಿ

'ಹಾರ್ಟ್ ಆಫ್ ಸ್ಟೋನ್' ಸಿನಿಮಾದಲ್ಲಿ ಆಲಿಯಾ ಪೋಷನ್ ಮುಗಿದಿದೆ. ಹೀಗಾಗಿ ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಬಾಲಿವುಡ್ ನಟಿ ಆಲಿಯಾ ಭಟ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. "ನನ್ನ ಹುಡುಗಿ ಆಲಿಯಾ ಭಟ್‌ಗೆ ಸ್ಪಲ್ಪ ಪ್ರೀತಿ ಕೊಡಿ. ಇವತ್ತು ಹಾರ್ಟ್ ಆಫ್ ಸ್ಟೋನ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಎಂತಹ ಅದ್ಭುತ ನಟಿ. ಹಾಗೇ ಅತ್ಯುತ್ತಮ ವ್ಯಕ್ತಿ." ಎಂದು ವಂಡರ್‌ ವುಮನ್ ಪೋಸ್ಟ್ ಮಾಡಿದ್ದಾರೆ.

ಮನೆ ಬರುತ್ತೇನೆ ಎಂದ ಆಲಿಯಾ

ಮೊದಲು ಆಲಿಯಾ ಭಟ್ "ಮರೆಯಲಾಗದ ಅನುಭವ. ಮನೆಗೆ ಬರುತ್ತಿದ್ದೇನೆ. 'ಹಾರ್ಟ್ ಆಫ್ ಸ್ಟೋನ್' ತಂಡಕ್ಕೆ ಪೂರ್ತು ಹೃದಯ ನೀಡುತ್ತೇನೆ. ಗ್ಯಾಲ ಗ್ಯಾಡೋಟ್ ಹಾಗೂ ನಿರ್ದೇಶಕ ಟಾಮ್ ಹಾರ್ಪೆರ್ ಅವರಿಗೆ ಧನ್ಯವಾದಗಳು" ಎಂದು ಹೇಳಿದ್ದರು. ಆಲಿಯಾ ಭಟ್ ಈ ಪೋಸ್ಟ್‌ಗೆ ವಂಡರ್‌ವುಮನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸದ್ಯ ಯೂರೋಪ್‌ನಲ್ಲಿರುವ ಆಲಿಯಾ ಭಟ್ ಶೀಘ್ರದಲ್ಲಿಯೇ ಮನೆಗೆ ಬರುವುದಾಗಿ ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್

ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್

ಅಂದ್ಹಾಗೆ ಆಲಿಯಾ ಭಟ್ ಅಭಿನಯದ ಮೊದಲ ಹಾಲಿವುಡ್‌ ಸಿನಿಮಾ ನೆಟ್‌ಫಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಗ್ಯಾಲ ಗ್ಯಾಡೋಟ್ ಹಾಗೂ ಆಲಿಯಾ ಭಟ್ ಇಬ್ಬರೂ ಗೂಢಾಚಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ರಣ್‌ಬೀರ್ ಜೊತೆ ನಟಿಸಿದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬ್ರಹ್ಮಾಸ್ತ್ರ' ಕೂಡ ರಿಲೀಸ್‌ಗೆ ರೆಡಿಯಾಗಿದೆ. ಜೊತೆ 'ಡಾರ್ಲಿಂಗ್' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Alia Bhatt Finished Hollywood Movie Heart Of Stone Starrer Gal Gadot, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X