ಆಲಿಯಾ ಭಟ್ ಬೇಬಿ ಬಂಪ್ ಫೋಟೊ ಲೀಕ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್!
ಆಲಿಯಾ ಭಟ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದೇ ವೇಳೆ ಆಲಿಯಾ ಪ್ರೆಗ್ನೆಂಟ್ ಆಗಿರುವ ವಿಷಯ ಕೂಡ ಗೊತ್ತಿದೆ. ಆದರೆ, ಗರ್ಭಿಣಿಯಾಗಿದ್ದರೂ ಆಲಿಯಾ ಭಟ್ ಹಾಲಿವುಡ್ ಸಿನಿಮಾಗಳಲ್ಲಿ ಹೇಗೆ ನಟಿಸುತ್ತಿದ್ದಾರೆ ಎಂಬ ಅನುಮಾನ ಇತ್ತು.
ಇತ್ತೀಚೆಗಷ್ಟೇ ಆಲಿಯಾ ಭಟ್ ನಟಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಸಿನಿಮಾ ಮುಗಿಸಿ ಬಂದಿದ್ದಾರೆ. ಈ ವಿಷಯವನ್ನು ಸ್ವತ: ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಈಗ ಅದೇ ಸಿನಿಮಾದಲ್ಲಿ ಗರ್ಭಿಣಿಯಾಗಿರುವ ಆಲಿಯಾ ಭಟ್ ಶೂಟಿಂಗ್ ಮಾಡುತ್ತಿರುವ ಫೋಟೊಗಳು ಲೀಕ್ ಆಗಿವೆ. ಇದೇ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆಲಿಯಾ ಬೇಬಿ ಬಂಪ್ ಫೋಟೊ ಲೀಕ್
ಆಲಿಯಾ ಭಟ್ ಹಾಗೂ ಹಾಲಿವುಡ್ ನಟಿ ಗಾಲ್ ಗ್ಯಾಡೋಟ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ 'ಹಾರ್ಟ್ ಆಫ್ ಸ್ಟೋನ್'. ಇದು ಆಲಿಯಾ ಭಟ್ ಕನಸಿನ ಸಿನಿಮಾ. ಹಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಲಿಯಾ ಕನಸನ್ನು ನನಸು ಮಾಡಿದ ಸಿನಿಮಾವಿದು. ಇದೇ ಕನಸಿನ ಪ್ರಾಜೆಕ್ಟ್ ಅನ್ನೇ ಆಲಿಯಾ ಮುಗಿಸಿ ಬಂದಿದ್ದಾರಷ್ಟೇ. ಅಷ್ಟರಲ್ಲಿಯೇ ಆಲಿಯಾ ಭಟ್ ಬೇಬಿ ಬಂಪ್ ಇಟ್ಟುಕೊಂಡೇ ನಟಿಸಿದ ಫೋಟೊಗಳು ಲೀಕ್ ಆಗಿವೆ.

ಪೋರ್ಚುಗಲ್‌ನಲ್ಲಿ ಶೂಟಿಂಗ್
ಅಲಿಯಾ ಭಟ್ ಹಾಲಿವುಡ್ ಸಿನಿಮಾದ ಶೂಟಿಂಗ್ ಮುಗಿದು ಹೆಚ್ಚು ದಿನಗಳೇನು ಆಗಿಲ್ಲ. ಪೋರ್ಚುಗಲ್‌ನಲ್ಲಿ ಆಲಿಯಾ ಭಟ್ ಭಾಗದ ಫೋಷನ್ ಅನ್ನು ಶೂಟ್ ಮಾಡಲಾಗಿದೆ. ಬಿಸಿಲಿನಲ್ಲಿ ಗರ್ಭಿಣಿ ಆಲಿಯಾ ಭಟ್ ಗ್ರೀನ್ ಜಂಪ್ ಸೂಟ್ ಹಾಕಿಕೊಂಡು ಮತ್ತು ಕಾಂಬಾಟ್ ಬೂಟ್‌ಗಳನ್ನು ಹಾಕಿಕೊಂಡಿದ್ದಾರೆ. ಆಲಿಯಾ ಹಾಗೂ ವಂಡರ್ ವುಮನ್ ನಟಿ ಗಾಲ್ ಗ್ಯಾಡೊಟ್ ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಯಾವುದೋ ಆಕ್ಷನ್ ಸೀನ್‌ನಲ್ಲಿ ನಟಿಸಿರಬಹುದು ಎಂದು ಅಂದಾಜಿಲಾಗಿದೆ.

ಆಲಿಯಾ ಗರ್ಭಿಣಿ ಎಂದು ಘೋಷಣೆ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇದೇ ವರ್ಷ ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಮದುವೆಯಾದ ಎರಡು ತಿಂಗಳ ಬಳಿಕ ಜೂನ್ 27 ರಂದು ಇಬ್ಬರೂ ಪ್ರೆಗ್ನೆನ್ಸಿಯನ್ನು ಅನೌನ್ಸ್ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಲಿಯಾ ಭಟ್ ತಾನು ಒಪ್ಪಿಕೊಂಡಿರುವ ಸಿನಿಮಾಗಳನ್ನೆಲ್ಲಾ ಮುಗಿಸಿದ್ದಾರೆ.
Recommended Video

ಸಿನಿಮಾಗಳು ಮುಗಿದಿದೆ
ಆಲಿಯಾ ಭಟ್ ಈಗಾಗಲೇ ತಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ್ದಾರೆ. ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಕೂಡ ಮುಗಿದಿದೆ. ಇನ್ನೊಂದು ಕಡೆ 'ಡಾರ್ಲಿಂಗ್ಸ್' ಸಿನಿಮಾ ಹಾಗೂ ಬಹುನಿರೀಕ್ಷೆಯ ಸಿನಿಮಾ ಪತಿ ರಣ್‌ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ಕೂಡ ಬಿಡುಗಡೆ ಸಜ್ಜಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











