For Quick Alerts
  ALLOW NOTIFICATIONS  
  For Daily Alerts

  ಬ್ರಾಡ್ ಪಿಟ್ ಮೇಲೆ $250 ಮಿಲಿಯನ್ ಮೊಕದ್ದಮೆ ಹೂಡಿದ ಏಂಜಲೀನಾ ಜೋಲಿಯ ಮಾಜಿ ಕಂಪನಿ!

  |

  ಹಾಲಿವುಡ್ ನಟ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಇಬ್ಬರ ನಡುವಿನ ಕಾನೂನು ಸಮರ ಮತ್ತೆ ಮುಂದುವರೆದಿದೆ. ಹಾಲಿವುಡ್ ವರದಿ ಪ್ರಕಾರ, ಬ್ರಾಡ್ ಪಿಟ್ ಮಾಜಿ ಪತ್ನಿ ಏಂಜಲೀನಾ ಜೋಲಿ ಒಡೆತನವಿದ್ದ ಮಾಜಿ ಕಂಪನಿ ಮೊಕದ್ದಮೆಯನ್ನು ಹೂಡಿದೆ.

  ಪೇಜ್ ಸಿಕ್ಸ್ ವರದಿ ಮಾಡಿರುವ ಪ್ರಕಾರ, ಏಂಜಲೀನಾ ಜೋಲಿ ಸ್ಥಾಪಿಸಿದ್ದ ಕಂಪನಿ ಬ್ರಾಡ್ ಪಿಟ್ ವಿರುದ್ಧ 250 ಮಿಲಿಯನ್ ಡಾಲರ್ ಮೊಕದ್ಧಮೆಯನ್ನು ಹೂಡಿದೆ. ಬ್ರಾಡ್ ಪಿಟ್ ಹಾಗೂ ಏಂಜಲೀನಆ ಜೋಲಿ ಇಬ್ಬರೂ ಜಂಟಿಯಾಗಿ ಈ ಕಂಪನಿಯನ್ನು ಖರೀದಿ ಮಾಡಿದ್ದರು.

  ನನ್ನ ಜನನಾಂಗದ ಕಾರಣದಿಂದ ನನಗೆ ಹಣ ಕಡಿಮೆ ಕೊಡುತ್ತಾರೆ: ಆಕ್ರೋಶ ಹೊರಹಾಕಿದ ನಟಿನನ್ನ ಜನನಾಂಗದ ಕಾರಣದಿಂದ ನನಗೆ ಹಣ ಕಡಿಮೆ ಕೊಡುತ್ತಾರೆ: ಆಕ್ರೋಶ ಹೊರಹಾಕಿದ ನಟಿ

  ಬ್ರಾಡ್ ಪಿಟ್ ಹಾಗೂ ಅವರ ತಂಡ ಫ್ರೆಂಚ್ ವೈನ್ ಕಂಪನಿ ಬಗ್ಗೆ 'ಸೀಜ್ ಕಂಟ್ರೋಲ್; ಅಭಿಯಾನವನ್ನು ಆರಂಭಿಸಿತ್ತು. ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಜಂಟಿಯಾಗಿ ಈ ಕಂಪನಿಯನ್ನು ಖರೀದಿ ಮಾಡಿದ್ದರೂ, ವಿಚ್ಛೇದನದ ಪ್ರತಿಕಾರವನ್ನು ತೀರಿಸಿಕೊಳ್ಳಲು ಬ್ರಾಡ್ ಮುಂದಾಗಿದ್ದರು. ಅಲ್ಲದೆ ಕಂಪನಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಏಂಜಲೀನಾ ಜೋಲಿಗೆ ಲಾಭ ಸಿಗದಂತೆ ಮಾಡಲು ಯತ್ನಿಸಿದ್ದರು ಎಂದು ಹೂಡಿದ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

  ಮಂಗಳವಾರ (ಸೆಪ್ಟೆಂಬರ್ 06) ಲಾಸ್ ಎಂಜಲೀಸ್‌ನಲ್ಲಿ ಕೋರ್ಟ್‌ಗೆ ಸಲ್ಲಿಸಿದ ದಾಖಲೆಯಲ್ಲಿ ಹಲವು ಅಂಶಗಳನ್ನು ಬೆಳಕಿಗೆ ತರಲಾಗಿದೆ. ವಿಚ್ಛೇದನಕ್ಕೂ ಮುನ್ನ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಇಬ್ಬರೂ ಸೌತ್ ಫ್ರಾನ್ಸ್‌ನಲ್ಲಿ 1300 ಎಕ್ಕರೆಯನ್ನು 2008ರಲ್ಲಿ ಖರೀದಿಸಿದ್ದರು. ಬಳಿಕ ಎಸ್ಟೇಟ್ ಅನ್ನು ಅಭಿವೃದ್ಧಿಗೊಳಿಸಲು ಇಬ್ಬರೂ ಸಾಕಷ್ಟು ಹಣವನ್ನು ಹಾಕಿದ್ದರು ಎಂದು ಹೇಳಲಾಗಿದೆ.

  ಅಲ್ಲದೆ, ಬ್ರಾಡ್ ಪಿಟ್ ತಮ್ಮ ವಿಚ್ಛೇದನಕ್ಕೆ ಕಾರಣಗಳನ್ನು ಬಹಿರಂಗಪಡಿಸದಂತೆ ತೆಡೆಯುವ ಸಲುವಾಗಿ ಕಟು ಷರತ್ತುಗಳಿಗೆ ಸಹಿ ಹಾಕಲು ಒತ್ತಾಯಿಸಿದ್ದರು. ಅಲ್ಲದೆ ವೈನ್ ಕಂಪನಿಯಲ್ಲಿ ಜೋಲಿಯ ಪಾಲಿನ ಹಣವನ್ನು ಬಳಸಿಕೊಳ್ಳಲು ಯತ್ನಿಸಿದ್ದರು. ಅಲ್ಲದೆ ಈಜು ಕೊಳವನ್ನುನಿರ್ಮಾಣ ಮಾಡಲು ಕಂಪನಿಯ ಕೋಟ್ಯಾಂತರ ಹಣವನ್ನು ಹಾಳು ಮಾಡಿದ್ದಾರೆ ಎಂದು ಮೊಕದ್ಧಮೆಯಲ್ಲಿ ಹೇಳಲಾಗಿದೆ.

  Angelina Jolies Former Company Sued Brad Pitt For French Winery Dispute

  ಅಂದ್ಹಾಗೆ, ಈ ಮೊಕದ್ಧಮೆಯನ್ನು ನೌವೆಲ್ ಕಂಪನಿ ಹೂಡಿದೆ. ಇದು ಫ್ರೆಂಚ್ ವೈನರಿಯಲ್ಲಿ ತನ್ನ ಪಾಲನ್ನು ಉಳಿಸಿಕೊಳ್ಳಲು ಏಂಜಲೀನಾ ಜೋಲಿ ಸ್ಥಾಪಿಸಿದ ಕಂಪನಿಯಾಗಿತ್ತು. ಸದ್ಯ ಜೋಲಿ ತನ್ನ ಪಾಲನ್ನು ಮದ್ಯದ ದೈತ್ಯ ಕಂಪನಿ ಸ್ಟೋಲಿಗೆ ಮಾರಾಟ ಮಾಡಿದ್ದಾರೆ.

  English summary
  Angelina Jolie's Former Company Sued Brad Pitt For French Winery Dispute, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X