11 ವರ್ಷಗಳ ಬಳಿಕ ಮತ್ತೆ 'ಅವತಾರ್ 2' ರಿಲೀಸ್: ಈ ದಿನ ಬಿಡುಗಡೆಯಾಗುವುದು ಪಕ್ಕಾ!

ಹಾಲಿವುಡ್ ಚಿತ್ರ 'ಅವತಾರ್' ಸಿನಿಮಾ ಲೋಕದ ವಿಸ್ಮಯ. 11 ವರ್ಷಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ನೋಡಿ ಮೂಗಿನ ಬೆರಳಿಟ್ಟುಕೊಂಡವರು ಅದೆಷ್ಟೋ ಮಂದಿ. ಈ ಸಿನಿಮಾ ನೋಡಿದ ಬಳಿಕ ಸಿನಿ ಪ್ರೇಮಿಗಳೆಲ್ಲರೂ 'ಅವತಾರ್' ಜಪ ಮಾಡಿದ್ದೇ ಹೆಚ್ಚು. 3 ಡಿ ಸಿನಿಮಾ ಅಂದರೆ ಹೇಗಿರುತ್ತೆ? ಅನ್ನುವುದನ್ನು ಪರಿಚಯಿಸಿತ್ತು. ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಅಳಿಸಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.

ಇಡೀ ವಿಶ್ವವೇ ಹೊಗಳಿಕೊಂಡಾಡಿದ ಸಿನಿಮಾ 'ಅವತಾರ್' ಮತ್ತೊಂದು ಅವತರಣಿಕೆಗೆ ವೇದಿಕೆ ಸಿದ್ಧ ಮಾಡಿಕೊಂಡಿತ್ತು. ಆದರೆ, 'ಅವತಾರ್ 2' ನೋಡಲು ಇಷ್ಟು ವರ್ಷ ಬೇಕಾಗಬಹುದು ಅನ್ನುವ ಸಣ್ಣ ಕಲ್ಪನೆಯೂ ಇರಲಿಲ್ಲ. ಆದರೆ, 'ಅವತಾರ್ 2' ಸೆಟ್ಟೇರಿದ ದಿನದಿಂದ ಈ ಸಿನಿಮಾ ಯಾವಾಗ ಬರುತ್ತೋ? ನಾವು ಯಾವಾಗ ಆ ಸಿನಿಮಾ ನೋಡುತ್ತೆವೋ ಅಂತ ಸಿನಿ ಪ್ರಿಯರು ಕಾತುರದಿಂದಲೇ ಕಾದು ಕೂತಿದ್ದರು. ಕೊನೆಗೂ 'ಅವತಾರ್ 2' ಯಾವಾಗ ಬಿಡುಗಡೆಯಾಗುತ್ತೆ ಅನ್ನುವುದು ಕನ್ಫರ್ಮ್ ಆಗಿದೆ.

ಡಿಸೆಂಬರ್ 16 ಕ್ಕೆ 'ಅವತಾರ್ 2'

ಬಹು ನಿರೀಕ್ಷೆಯ ಸಿನಿಮಾ 'ಅವತಾರ್ 2' ಯಾವಾಗ ರಿಲೀಸ್ ಆಗಬಹುದು ಅನ್ನುವ ಸುಳಿವನ್ನು ಈ ಹಿಂದೆನೇ ಸಿಕ್ಕಿತ್ತು. ನಿರ್ದೇಶಕ ಜೇಮ್ಸ್ ಕೆಮರೂನ್ ಕಳೆದ ವರ್ಷವೇ 2022 ಡಿಸೆಂಬರ್‌ 16 ರಿಲೀಸ್ ಆಂತ ಹೇಳಿದ್ದರು. ಆದ್ರೀಗ ಅಧಿಕೃತವಾಗಿ ಹಿಂದೆ ಹೇಳಿದ ದಿನವೇ 'ಅವತಾರ್ 2' ರಿಲೀಸ್ ಆಗುತ್ತೆ ಅನ್ನುವುದನ್ನು ಬಹಿರಂಗಗೊಳಿಸಿದ್ದಾರೆ. ಕಳೆದ ವರ್ಷವೇ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದರೆ, ಕೊರೊನದಿಂದಾಗಿ ಚಿತ್ರೀಕರಣ ವಿಳಂಬಗೊಂಡಿದ್ದರಿಂದ ಬಿಡುಗಡೆ ದಿನವನ್ನು ಈ ವರ್ಷ ಡಿಸೆಂಬರ್ 16ಕ್ಕೆ ಮುಂದೂಡಿದ್ದಾರೆ.

ಅವತಾರ್ ಚಿತ್ರ 4 ಸೀಕ್ವೆಲ್ ನಿರ್ಮಾಣ

ಅವತಾರ್ ಚಿತ್ರ 4 ಸೀಕ್ವೆಲ್ ನಿರ್ಮಾಣ

2009ರಲ್ಲಿ 'ಅವತಾರ್' ಸಿನಿಮಾ ಬಾಕ್ಸಾಫೀಸ್‌ನ ಎಲ್ಲಾ ದಾಖಲೆಗಳನ್ನು ಹೇಳ ಹೆಸರಿಲ್ಲದಂತೆ ಹೊಡೆದು ಓಡಿಸಿತ್ತು. ವಿಶ್ವದಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಗೆ ಸೇರಿಕೊಂಡಿತ್ತು. ಇದೇ ಯಶಸ್ಸು ನಿರ್ದೇಶಕ ಜೇಮ್ಸ್ ಕ್ಯಾಮರೂನ್‌ಗೆ ನಾಲ್ಕು ಅವತಾರ್ ಸಿರೀಸ್ ತರಲು ಪ್ರೇರೇಪಣೆ ನೀಡಿತ್ತು. 'ಅವತಾರ್ 2' ಡಿಸೆಂಬರ್‌ನಲ್ಲಿ ತೆರೆಕಾಣುತ್ತಿದ್ದರೆ, ಅವತಾರ್ 3 ಡಿಸೆಂಬರ್ 2024ಕ್ಕೆ ಬಿಡುಗಡೆಯಾಗಲಿದೆ. ಹಾಗೇ 'ಅವತಾರ್ 4' ಹಾಗೂ 'ಅವತಾರ್ 5' ಕೂಡ ರಿಲೀಸ್ ಆಗಲಿದೆ.

'ಅವತಾರ್ 2' ನಲ್ಲಿ ಟೈಟಾನಿಕ್ ಚೆಲುವೆ

'ಅವತಾರ್ 2' ನಲ್ಲಿ ಟೈಟಾನಿಕ್ ಚೆಲುವೆ

ಬಹು ನಿರೀಕ್ಷಿತ ಸಿನಿಮಾ 'ಅವತಾರ್‌ 2' ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಕೇಟ್ ವಿನ್‌ಸ್ಲೆಟ್. ನಿರ್ದೇಶಕ ಜೇಮ್ ಕೆಮರೂನ್ ನಿರ್ದೇಶಿಸಿದ್ದ ಟೈಟಾನಿಕ್ ಸಿನಿಮಾದಲ್ಲಿ ಕೇಟ್ ನಟಿಸಿದ್ದರು. ಈ ಚಿತ್ರದಲ್ಲಿ ಫ್ರೀ ಡೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ, ಸಿನಿಮಾದಲ್ಲಿ ಇವರದ್ದು ದೊಡ್ಡ ಪಾತ್ರವಿಲ್ಲ ಎಂದು ಹೇಳಲಾಗಿದೆ. ಇವರ ಪಾತ್ರಕ್ಕೆ ಕೇಟ್ ಕೇವಲ ಒಂದು ತಿಂಗಳು ಮಾತ್ರ ಶೂಟಿಂಗ್ ಮಾಡಿದ್ದು, ಇದೇ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದ ಜೊತೆ ಕೆಲಸ ಮಾಡಿದ್ದಾರೆ.

ಯಾರೀ ಜೇಮ್ಸ್ ಕೆಮರೂನ್?

ಯಾರೀ ಜೇಮ್ಸ್ ಕೆಮರೂನ್?

ಸಿನಿಮಾ ಪ್ರೇಮಿಗಳಿಗೆ ಜೇಮ್ಸ್ ಕೆಮರೂನ್ ಹೆಸರು ತುಂಬಾನೇ ಚಿರಪರಿಚಿತ. ಇನ್ನು ನಿರ್ದೇಶನದ ಕನಸು ಹೊತ್ತು ಬರುವ ಅದೆಷ್ಟೋ ಮಂದಿಗೆ ಜೇಮ್ಸ್ ಮಾನಸಿಕ ಗುರು. ಇವರು ನಿರ್ದೇಶಿಸಿದ ಒಂದೊಂದು ಸಿನಿಮಾವೂ ಅದ್ಭುತ. 1984ರಲ್ಲಿ ನಿರ್ದೇಶಿಸಿದ ಟರ್ಮಿನೇಟರ್, ಟರ್ಮಿನೇಟರ್ 2, ಟೈಟಾನಿಕ್, 2009ರಲ್ಲಿ ತೆರೆಕಂಡ ಅವತಾರ್ ಸಿನಿಮಾದ ಸೃಷ್ಟಿಕರ್ತ ಇದೇ ಜೇಮ್ಸ್ ಕೆಮರೂನ್. 11 ವರ್ಷಗಳಿಂದ ಕೇವಲ ಅವತಾರ್ 2, ಅವತಾರ್ 3, ಅವತಾರ್ 4 ಹಾಗೂ ಅವತಾರ್ 5 ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Avatar 2 the epic science fiction movie is going to release on December 26th 2022. Avatar 2 is the sequel to the last movie released 11 years ago. There are three more sequels of the film in the row.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X