ಕಾನ್ 2023ನಲ್ಲಿರೋ ಏಕೈಕ ಭಾರತೀಯ ಜ್ಯೂರಿ ಮೀನಾಕ್ಷಿ ಶೆಡ್ಡೆ: ಇಲ್ಲಿವರೆಗೂ ಜ್ಯೂರಿಯಾಗಿದ್ದ ಭಾರತೀಯರು ಯಾರು?

ಫ್ರಾನ್ಸ್‌ನಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ನಡೆಯುತ್ತಿದೆ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನ ಚಿತ್ರೋತ್ಸವ. ವಿಶ್ವದ ಮೂಲೆ ಮೂಲೆಯಿಂದ ಸೆಲೆಬ್ರೆಟಿಗಳು ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಸೆಲೆಬ್ರೆಟಿಗಳು ಹಾಗೂ ಅವರ ಕಾಸ್ಟ್ಯುಮ್‌ಗಳ ಮೇಲೆ ಇಡೀ ಜಗತ್ತೇ ಕಣ್ಣು ಇಟ್ಟಿದೆ. ಇದೇ ಫಿಸ್ಟಿವಲ್‌ನಲ್ಲಿ ಜಗತ್ತಿನ ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ. ಇದರಲ್ಲಿ ವಿಶ್ವದ ಅತ್ಯುತ್ತಮ ಸಿನಿಮಾವನ್ನು ಜ್ಯೂರಿಗಳು ಆಯ್ಕೆ ಮಾಡುತ್ತಾರೆ.

Cannes 2023

ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐದು ಪ್ರಮುಖ ಜ್ಯೂರಿಗಳಿದ್ದಾರೆ. ಸ್ವೀಡನ್‌ನ ನಿರ್ದೇಶಕ ರೂಬೆನ್ ಓಸ್ಟ್ಲುಂಡ್ ಜ್ಯೂರಿ ತಂಡ ಮುಖ್ಯಸ್ಥರಾಗಿದ್ದಾರೆ. ನಟರಾದ ಬ್ರೀ ಲಾರ್ಸನ್ ಹಾಗೂ ಪಾಲ್ ಡಾನೋ ಸೇರಿದಂತೆ ಹಲವು ಮಂದಿ ಜ್ಯೂರಿಯಾಗಿದ್ದಾರೆ. ಈ ವರ್ಷ ಈ ಭಾರತೀಯ ಜ್ಯೂರಿ ತಂಡದಲ್ಲಿ ಏಕೈಕ ಭಾರತೀಯ ಜ್ಯೂರಿಯಾಗಿದ್ದಾರೆ. ಅವರೇ ಮೀನಾಕ್ಷಿ ಶೆಡ್ಡೆ.

ಯಾರೀ ಮೀನಾಕ್ಷಿ ಶೆಡ್ಡೆ?

ಮೀನಾಕ್ಷಿ ಶೆಡ್ಡೆ ಮುಂಬೈ ಮೂಲದ ಮಾಜಿ ಪತ್ರಕರ್ತೆ, ಸಿನಿಮಾ ವಿಮರ್ಶಕಿ. ಮನರಂಜನಾ ವಿಭಾಗದಲ್ಲಿ ಸುಮಾರು 40 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಈಕೆ ಸುಮಾರು 25ಕ್ಕೂ ಅಧಿಕ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗೆ ಜ್ಯೂರಿಯಾಗಿ ಕೆಲಸ ಮಾಡಿದ್ದಾರೆ.

Cannes 2023

ಇಷ್ಟೇ ಅಲ್ಲ ಮೀನಾಕ್ಷಿ ಶೆಡ್ಡೆ ವಿಶ್ವದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಅವಾರ್ಡ್ ವೋಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ಪತ್ರಕರ್ತೆಯಾಗಿ ಸುಮಾರು 39 ವರ್ಷಗಳ ಪ್ರತಿಷ್ಠಿತ ಪಬ್ಲಿಕೇಷನ್‌ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಅಂತಾರಾಷ್ಟ್ರಿಯ ಮಟ್ಟದ ಪಬ್ಲಿಕೇಷನ್‌ಗಳಿಗೆ ಜ್ಯೂರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ರಚನೆ, ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿ ಸುಮಾರು 15 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಜ್ಯೂರಿಯಾಗಿದ್ದ ಭಾರತೀಯರು ಯಾರು?

ಕಾನ್ ಫೆಸ್ಟಿವಲ್‌ನಲ್ಲಿ ಜ್ಯೂರಿಯಾಗಿರೋ ಮೀನಾಕ್ಷಿ ಶೆಡ್ಡೆ ವಿಶ್ವದ ಗಮನ ಸೆಳೆದಿದ್ದಾರೆ. ಹಾಗಂತ ಈ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌fನಲ್ಲಿ ಜ್ಯೂರಿಯಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಈ ಜ್ಯೂರಿಯಾಗಿ ಗಮನ ಸೆಳೆದಿದ್ದಾರೆ. 1982ರಲ್ಲಿ ಮೃಣಾಲ್ ಸೇನ್ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಜ್ಯೂರಿಯಾಗಿದ್ದರು.

ಆ ಬಳಿಕ 1990ರಲ್ಲಿ ಮೀರಾ ನಾಯರ್, 2000ದಲ್ಲಿ ಅರುಂಧತಿ ರಾಯ್,2003ರಲ್ಲಿ ಐಶ್ವರ್ಯಾ ರೈ, 2005ರಲ್ಲಿ ನಂದಿತಾ ದಾಸ್, 2009ರಲ್ಲಿ ಶರ್ಮಿಳಾ ಠಾಗೋರ್, 2010ರಲ್ಲಿ ಶೇಖರ್ ಕಪೂರ್, 2013ರಲ್ಲಿ ವಿದ್ಯಾಬಾಲನ್, 2022ರಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿದ್ದರು.

More from Filmibeat

English summary
Cannes 2023: Filmmaker Meenakshi Shedde is the only Indian jury and list of served as juries earlier, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X