Cannes 2023: ಜಾನಿ ಡೆಪ್ ಕಮ್ ಬ್ಯಾಕ್ ಸಿನಿಮಾಗೆ 7 ನಿಮಿಷ ಎದ್ದು ನಿಂತು ಗೌರವ.. ಭಾವುಕರಾದ ನಟ
ಪ್ರತಿಷ್ಠಿತ ಕಾನ್ ಚಲನ ಚಿತ್ರೋತ್ಸವದಲ್ಲಿ ಹಾಲಿವುಡ್ ನಟ ಜಾನಿ ಡೆಪ್ ಭಾಗವಹಿಸಿದ್ದಾರೆ. ಕೆಲವು ದಿನಗಳಿಂದ ಹಾಲಿವುಡ್ ಸೂಪರ್‌ಸ್ಟಾರ್ ಜಾನಿ ಡೆಪ್ ಲೈಮ್ ಲೈಟ್‌ನಿಂದ ದೂರ ಉಳಿದಿದ್ದರು. ಆದ್ರೀಗ ತಮ್ಮ ಸಿನಿಮಾ ಮೂಲಕ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.
ಜಾನಿ ಡೆಪ್ ಇತ್ತೀಚೆಗೆ ಮಾಜಿ ಪತ್ನಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕೇಸ್ ಗೆದ್ದ ಬಳಿಕ ಜಾನಿ ಡೆಪ್ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದು, ಹೊಸ ಸಿನಿಮಾ 'ಜೇನ್ ಡು ಬ್ಯಾರಿ' ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ.

ಜಾನಿ ಡೆಪ್ ಭಾವುಕ
'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಖ್ಯಾತಿಯ ಹಾಲಿವುಡ್ ನಟ ಜಾನಿ ಡೆಪ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಹಿಸಿದ್ದರು. ಮಾಜಿ ಪತ್ನಿ ವಿರುದ್ಧ ಕೋರ್ಟ್ ಸಮರದಲ್ಲಿ ಗೆದ್ದ ಬಳಿಕ ಜಾನಿ ಡೆಪ್ ಮತ್ತೆ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದಾರೆ. 59 ವರ್ಷದ ಈ ನಟ ಹೊಸ ಸಿನಿಮಾ 'ಜೇನ್ ಡು ಬ್ಯಾರಿ' ಸಿನಿಮಾ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಕಾನ್ ಫಿಲ್ಮ್ ಫೆಸ್ಟಿವಲ್‌ನ ಮೊದಲ ದಿನವೇ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ತನ್ನ ಸಿನಿಮಾ ತಂಡದೊಂದಿಗೆ ತೆರಳಿದ್ದ ಜಾನಿ ಡೆಪ್‌ಗೆ ಸಿನಿಮಾ ನೋಡಿದ ಬಳಿಕ ಎದ್ದು ನಿಂತು 7 ನಿಮಿಷಗಳ ಕಾಲ ಗೌರವ ಸೂಚಿಸಿದ್ದಾರೆ. ಈ ಪ್ರತಿಕ್ರಿಯೆಯನ್ನು ಕಂಡು ಜಾನಿ ಡೆಪ್ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಟೋಗ್ರಾಫ್‌ಗೆ ಮುಗಿದ್ದ ಪ್ರೇಕ್ಷಕರು
'ಜೇನ್ ಡು ಬ್ಯಾರಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿರೋ ಸಿನಿಮಾ. ಇದರ ನಿರ್ಮಾಣ ಹಾಗೂ ನಿರ್ದೇಶವನ್ನು ಮೈವೆನ್ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಜಾನಿ ಡೆಪ್ ಜೊತೆ ಮೈವೆನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಜಾನಿ ಡೆಪ್ ಕಿಂಗ್ ಲೂಯಿಸ್ 15 ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕಾನ್ ಫೆಸ್ಟಿವಲ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಷ್ಟೇ ಅಲ್ಲದೆ, ಜಾನಿ ಡೆಪ್ ಆಟೋಗ್ರಾಫ್‌ಗಾಗಿ ಮುಗಿಬಿದ್ದಿದ್ದರು.
ಜಾನಿ ಡೆಪ್ ಪ್ರಕರಣವೇನು?
ಜಾನಿ ಡೆಪ್ ಹಾಗೂ ಮಾಜಿ ಪತ್ನಿ ಅಂಬೆರ್ ಹರ್ಡ್ ನಡುವಿನ ಮಾನಿಹಾನಿ ಪ್ರಕರಣ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಅಂಬೆರ್ ಹರ್ಡ್ ದಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಬರೆದಿದ್ದ ಲೇಖನದ ವಿರುದ್ಧ ಜಾನಿ ಡೆಪ್ ಮಾನ ಹಾನಿ ಕೇಸ್ ದಾಖಲಿಸಿದ್ದರು. ಇಲ್ಲಿ ನೇರವಾಗಿ ಅವರ ಹೆಸರನ್ನು ಉಲ್ಲೇಖಿಸದೆ ಇದ್ದರೂ 'ಪೀಡಕ' ಎಂಬಂತೆ ಚಿತ್ರಿಸಲಾಗಿದ್ದು, 50 ಮಿಲಿಯನ್ ಡಾಲರ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಆರು ವಾರ ನಡೆದ ವಾದ ವಿವಾದದಲ್ಲಿ ಅಂಬೆರ್ ಹರ್ಡ್ 116 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ಪ್ರಕರಣ ನಡೆಯುವಾಗ ಹಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಜಾನಿ ಡೆಪ್‌ರನ್ನು ಸಿನಿಮಾದಿಂದ ಕೈ ಬಿಟ್ಟಿದ್ದವು. ಆ ವೇಳೆ ನಿರ್ಮಾಣಗೊಂಡಿದ್ದ ಸಿನಿಮಾವೇ 'ಜೇನ್ ಡು ಬ್ಯಾರಿ'. ಈಗ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











