Cannes Film Festival 2024:ಇಲ್ಲಿ ಪ್ರದರ್ಶನ ಕಾಣಲಿರೋ ಈ 7 ಸಿನಿಮಾಗಳನ್ನು ನೋಡಿದ್ದೀರಾ?

ವಿಶ್ವದ ಪ್ರತಿಷ್ಠಿತ ಚಲನ ಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. 2024ರ 77ನೇ ಕಾನ್ ಫಿಲ್ಮ್ ವೆಸ್ಟಿವಲ್ ಮೇ 14 ರಿಂದ ಆರಂಭ ಆಗಿದೆ. ಈ ಚಿತ್ರೋತ್ಸವದಲ್ಲಿ ಭಾರತದ ಸಿನಿಮಾ ಪ್ರದರ್ಶನ ಕಾಣುವುದು ಪ್ರತಿಯೊಬ್ಬ ಫಿಲ್ಮ್ ಮೇಕರ್‌ಗಳಿಗೆ ಹೆಮ್ಮೆಯ ವಿಚಾರ. ಈ ಬಾರಿ ಕೂಡ ಹಲವು ಭಾರತದ ಕೆಲವು ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ.

ಭಾರತದ 7 ಸಿನಿಮಾಗಳು 77ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿವೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿಶ್ವದ ಪ್ರತಿಷ್ಠತಿ ಸಿನಿಮಾ ಮಂದಿ ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಾರೆ. ಸ್ಪರ್ಧಾತ್ಮಕ ವಿಭಾಗದಲ್ಲಿ ಸುಮಾರು 22 ಸಿನಿಮಾಗಳು ಪ್ರದರ್ಶನಗೊಳಲ್ಲಿವೆ ಎಂದು ಹೇಳಲಾಗುತ್ತಿದೆ.

Cannes Film Festival 2024 list of Indian Films To Be Screened in 77th edition

2024ರ ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಭಾರತದ ತಾರೆಯರು ಹೆಜ್ಜೆ ಹಾಕುತ್ತಾರೆ. ಎಂದಿನಂತೆ ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಶೋಭಿತಾ ಧೂಲಿಪಾಲ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಕೂಡ ಭಾರತದ ಪ್ರತಿಷ್ಠಿತ ಸಿನಿಮಾಗಳು ವಿಶೇಷ ಪ್ರದರ್ಶನ ಕಾಣುತ್ತಿವೆ. ಆ ಏಳು ಸಿನಿಮಾಗಳ ಪಟ್ಟಿ ಇಲ್ಲಿದೆ.

ಬಾಲಿವುಡ್‌ನ ಜನಪ್ರಿಯ ನಟಿ ರಾಧಿಕಾ ಆಪ್ಟೆ ನಟನೆಯ 'ಸಿಸ್ಟರ್ ಮಿಡ್‌ನೈಟ್' ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಚಿಕ್ಕ ಊರಿನಿಂದ ಮಹಾನಗರಕ್ಕೆ ಬಂದ ಹುಡುಗಿಯೊಬ್ಬಳ ವೈವಾಹಿಕ ಬದುಕಿನ ಬಗ್ಗೆ ಈ ಸಿನಿಮಾ ಹೇಳುತ್ತಿದೆ. ಇದು ಡೈರೆಕ್ಟರ್ಸ್ ಫೋರ್ಟ್‌ ನೈಟ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ.

ಬ್ರಿಟಿಷ್ ಇಂಡಿಯನ್ ಫಿಲ್ಮ್ ಮೇಕರ್ ಸಂಧ್ಯಾ ಸೂರಿ ನಿರ್ದೇಶನದ ಸಿನಿಮಾ 'ಸಂತೋಷ್' 2024ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೂಡ ವಿಶೇಷ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಸಹನಾ ಗೋಸ್ವಾಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿದವೆಯಾಗಿರೋ ಮಹಿಳೆ ತನ್ನ ಪತಿಯ ಕಾನ್‌ಸ್ಟೆಬಲ್ ಕೆಲಸವನ್ನು ಪಡೆದಾಗ ಏನೆಲ್ಲ ಆಗುತ್ತೆ ಅನ್ನೋದನ್ನು ಹೇಳಲಾಗಿದೆ.

Cannes Film Festival 2024 list of Indian Films To Be Screened in 77th edition

ಈ ಬಾರಿ ಖುಷಿ ವಿಷಯವೇನಂದ್ರೆ, ಕನ್ನಡದ ಕಿರುಚಿತ್ರ ಕೂಡ ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. 'ಸನ್‌ಫ್ಲವರ್ಸ್ ವೆರ್ ದಿ ಫಸ್ಟ್ ಒನ್ಸ್ ಟು ನೋ' ಅನ್ನುವ ಈ ಸಿನಿಮಾವನ್ನು FTII ವಿದ್ಯಾರ್ಥಿಯಾಗಿರುವ ಚಿದಾನಂದ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಈ ವಿಷಯ ಕನ್ನಡಿಗರಿಗೆ ಥ್ರಿಲ್ ಕೊಟ್ಟಿದೆ.

1976ರಲ್ಲಿ ತೆರೆಕಂಡಿದ್ದ 'ಮಂಥನ್' ಸಿನಿಮಾ ಕೂಡ ಪ್ರದರ್ಶನ ಕಾಣಲಿದೆ. ಸ್ಮಿತಾ ಪಾಟೀಲ್ ಹಾಗೂ ನಾಸೀರುದ್ಧಿನ್ ಶಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕಾನ್ ಫಿಲ್ಮ್ ಫೆಸ್ಟಿವಲ್‌ನ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ ಹಾಗೂ ಕುಲ್ಬುಷಣ್ ಖರಬಂಧ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಸೈಯ್ಯದ್ ಮೈಸಮ್ ಅಲಿ ಶಾ ನಿರ್ದೇಶನದ 'ಇನ್ ರಿಟ್ರಿಟ್' ಸಿನಿಮಾ ಸ್ವತಂತ್ರ ಸಿನಿಮಾ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಬಹಳ ದಿನಗಳ ಬಳಿಕ ವ್ಯಕ್ತಿಯೊಬ್ಬ ಹುಟ್ಟೂರಿಗೆ ಬಂದಾಗ ಏನೆಲ್ಲ ಆಗುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಬರ್ಗೇರಿಯಾದ ನಿರ್ದೇಶಕ ಕಾನ್ಸ್ಟಾಂಟಿನ್ ಬೊಜಾನೋವ್ ಆಕ್ಷನ್ ಕಟ್ ಹೇಳಿರುವ 'ಶೇಮ್‌ಲೆಸ್' ಸಿನಿಮಾ ಭಾರತದ ಕಥೆಯನ್ನು ಹೇಳುತ್ತಿದೆ. ಈ ಸಿನಿಮಾವನ್ನು ನೇಪಾಳ ಹಾಗೂ ಭಾರತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಭಾರತದಲ್ಲಿ ಸೆಕ್ಸ್ ವರ್ಕರ್ ಆಗಿರುವ ರಾಣಿಯನ್ನು ತೆರೆಮೇಲೆ ತರಲಾಗಿದೆ.

ಪಾಯಲ್ ಕಪಾಡಿಯಾ ನಿರ್ದೇಶನದ 'ಆಲ್ ವಿ ಇಮ್ಯಾಜಿನ್ ಯ್ಯಾಸ್ ಲೈಟ್' ಸಿನಿಮಾ ಕೂಡ ಪ್ರದರ್ಶನ ಕಾಣುತ್ತಿದೆ. ಈ ಎಲ್ಲಾ ಸಿನಿಮಾಗಳೂ ಈ ಬಾರಿಯ ಪ್ರತಿಷ್ಠಿತ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Cannes Film Festival 2024 Indian Movies list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X