Oppenheimer Box Office: ಭಾರತದಲ್ಲಿ ವಿವಾದದ ಸುಳಿಗೆ ಸಿಲುಕಿರೋ 'ಆಪನ್‌ಹೈಮರ್'.. 2ನೇ ದಿನ ಗಳಿಸಿದ್ದೆಷ್ಟು?

ಹಾಲಿವುಡ್ ಸಿನಿಮಾ 'ಆಪನ್‌ಹೈಮರ್' ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಅದರಂತೆಯೇ ಭಾರತದಲ್ಲಿಯೂ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ಜುಲೈ 21ರಂದು ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರತದ ಸಿನಿಮಾಗಳಿಗಿಂತ ಹೆಚ್ಚು ಗಳಿಕೆ ಮಾಡುತ್ತಿದೆ.

ಹಾಲಿವುಡ್‌ನ ಹೆಸರಾಂತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿತ್ತಿದೆ. ಇದರೊಂದಿಗೆ ಭಾರತದಲ್ಲಿ ಈ ಸಿನಿಮಾ ವಿವಾದಕ್ಕೂ ಸಿಲುಕಿದೆ. ಇದೆಲ್ಲದರ ಹೊರತಾಗಿಯೂ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆ ಕಾಣುತ್ತಲೇ ಇದೆ.

Christopher Nolan film Oppenheimer box office collection Day 2 is 31.5 Crore in India

'ಆಪನ್‌ಹೈಮರ್' ಸಿನಿಮಾ ಭಾರತದ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಎರಡು ದಿನಗಳ ಗಳಿಕೆ ನೋಡಿದರೆ, ಇನ್ನೊಂದು ವಾರದ ಅಂತರದಲ್ಲಿ ಕೇವಲ ಭಾರತದಲ್ಲಿಯೇ 100 ಕೋಟಿ ರೂ. ಕ್ಲಬ್ ಸೇರುವ ಎಲ್ಲಾ ಸಾಧ್ಯತೆಗಳೂ ಇವೆ. ಅಷ್ಟಕ್ಕೂ ಈ ಎರಡು ದಿನಗಳಲ್ಲಿ ಭಾರತದಲ್ಲಿ ಗಳಿಸಿದ ಗಳಿಕೆ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಆಪನ್‌ಹೈಮರ್' 2ನೇ ದಿನ ಗಳಿಸಿದ್ದೆಷ್ಟು?

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ಆಪನ್‌ಹೈಮರ್' ಸಿನಿಮಾಗೆ ಭಾರತದಲ್ಲಿ ದೊಡ್ಡ ಓಪನಿಂಗ್ ಸಿಕ್ಕಿದೆ. ಈ ವರ್ಷ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಸಿನಿಮಾ ಅನ್ನೋ ಪಟ್ಟ ಸಿಕ್ಕಿದೆ. ಮೊದಲ ದಿನ ಸಿಕ್ಕ ಸೂಪರ್ ಓಪನಿಂಗ್‌ನಿಂದಲೇ ಎರಡನೇ ದಿನವೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. 'ಆಪನ್‌ಹೈಮರ್' ಸಿನಿಮಾ ಎರಡನೇ ದಿನ ಭಾರತದಲ್ಲಿ ಸುಮಾರು 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಹುತೇಕ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ನಲ್ಲಿಯೇ ಹೆಚ್ಚಾಗಿ ರಿಲೀಸ್ ಆಗಿರೋ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೂರನೇ ದಿನವಾದ ಇಂದು (ಜುಲೈ 23) ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋ ಕುತೂಹಲವಿದೆ.

'ಆಪನ್‌ಹೈಮರ್' 2 ದಿನಗಳ ಕಲೆಕ್ಷನ್ ಎಷ್ಟು?

'ಆಪನ್‌ಹೈಮರ್' ಸಿನಿಮಾಗೆ ಮೊದಲ ದಿನ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಮೊದಲ ದಿನ ಈ ಸಿನಿಮಾ 14.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹಾಗೇ ಎರಡನೇ ದಿನ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ಈ ಎರಡೂ ದಿನಗಳ ಒಟ್ಟು ಗಳಿಕೆ ಬರೋಬ್ಬರಿ 31.50 ಕೋಟಿ ರೂ. ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ 'ಆಪನ್‌ಹೈಮರ್' ದೊಡ್ಡ ಮೊತ್ತವನ್ನೇ ಕಲೆ ಹಾಕುವ ಎಲ್ಲಾ ಲಕ್ಷಣಗಳೂ ಇವೆ.

Christopher Nolan film Oppenheimer box office collection Day 2 is 31.5 Crore in India

'ಆಪನ್‌ಹೈಮರ್'ಗೆ 'ಬಾರ್ಬಿ' ಕಾಂಪಿಟೇಷನ್

ಭಾರತದಲ್ಲಿ ಸದ್ದು ಮಾಡುತ್ತಿರುವ 'ಆಪನ್‌ಹೈಮರ್' ಸಿನಿಮಾಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಸಿನಿಮಾ 'ಬಾರ್ಬಿ' ಟಫ್ ಕಾಂಪಿಟೇಷನ್ ಕೊಡುತ್ತಿದೆ. ಎರಡೂ ಸಿನಿಮಾಗಳಿಗೂ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಭಾರತದಲ್ಲಿ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಬಾರ್ಬಿ' ಭಾರತದ ಬಾಕ್ಸಾಫೀಸ್‌ನಲ್ಲಿ 2 ದಿನಗಳಲ್ಲಿ ಕೇವಲ 11.50 ಕೋಟಿ ರೂ. ಗಳಿಕೆ ಕಂಡಿದೆ.

ಯಾಕಿಷ್ಟು ಸದ್ದು ಮಾಡುತ್ತಿದೆ ಸಿನಿಮಾ?

'ಆಪನ್‌ಹೈಮರ್' ಸಿನಿಮಾ ವಿಶ್ವದಾದ್ಯಂತ ಯಾಕಿಷ್ಟು ಸದ್ದು ಮಾಡುತ್ತಿದೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಈ ಸಿನಿಮಾ ಜನಪ್ರಿಯ ವಿಜ್ಞಾನಿ ಜೆ ರಾಬರ್ಟ್ ಆಪನ್‌ಹೈಮರ್ ಅವರ ಕುರಿತಾದ ಸಿನಿಮಾ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಲೆಫ್ಟಿನೆಂಟ್ ಜನರಲ್ ಲೆಸ್ಲಿ ಗ್ರೋವ್ಸ್ ಮ್ಯಾನ್‌ಹಟನ್ ಪ್ರಾಜೆಕ್ಟ್‌ಗಾಗಿ ಆಪನ್‌ಹೈಮರ್ ಅನ್ನು ಆಯ್ಕೆ ಮಾಡುತ್ತಾರೆ. ಆ ವೇಳೆ ಅಣುಬಾಂಬ್ ಕಂಡು ಹಿಡಿದ ವಿಜ್ಞಾನಿಗಳ ಗುಂಪಿನ ಮುಖಂಡರು ಇವರೇ ಆಗಿರುತ್ತಾರೆ.

More from Filmibeat

English summary
Christopher Nolan film Oppenheimer box office collection Day 2 in India:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X