ತಗ್ಗದ ಕೊರೊನಾ ವೈರಸ್ ಸಂಕಷ್ಟ: ಕಾನ್ ಚಿತ್ರೋತ್ಸವ ಮತ್ತೆ ಮುಂದೂಡಿಕೆ
ಕೊರೊನಾ ವೈರಸ್ ಕಾರಣದಿಂದಾಗಿ ಕಾನ್ ಫಿಲಂ ಫೆಸ್ಟಿವಲ್ ಮತ್ತೆ ಪೋಸ್ಟ್ ಪೋನ್ ಮಾಡಲಾಗಿದೆ. ಈ ಹಿಂದೆ ನಿಗದಿಯಾದಂತೆ ಮೇ 12-23ರವರೆಗೆ ಕಾನ್ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ವರ್ಷ ಚಿತ್ರೋತ್ಸವ ನಡೆಯುವುದು ಅನುಮಾನ ಎನ್ನಲಾಗಿತ್ತು.
Recommended Video
ಸದ್ಯಕ್ಕೆ ಚಿತ್ರೋತ್ಸವವನ್ನು ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ನಡೆಸಲು ನಿಗದಿಗೊಳಿಸಲಾಗಿದೆ. 'ಈ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ 19ಕ್ಕೆ ಬಲಿಯಾದವರಿಗೆ ನಮ್ಮ ಸಂತಾಪ ಸಲ್ಲಿಸುತ್ತೇವೆ. ಈ ಮಾರಕ ಸೋಂಕಿನ ವಿರುದ್ಧ ಹೋರಾಡುತ್ತಿರುವವರ ಜತೆಗೆ ನಾವಿದ್ದೇವೆ' ಎಂಬ ಸಂದೇಶವನ್ನು ಚಿತ್ರೋತ್ಸವ ಮಂಡಳಿ ನೀಡಿದೆ.
'ನಾವು ಇಂದು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಕಾನ್ ಚಿತ್ರೋತ್ಸವವು ನಿಗದಿಯಾದಂತೆ ಮೇ 12-23ರವರೆಗೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಜೂನ್ ಅಂತ್ಯ ಹಾಗೂ ಜುಲೈ ಆರಂಭದವರೆಗೆ ಮುಂದೂಡಲಾಗಿದೆ' ಎಂದು ತಿಳಿಸಿದೆ.

'ಫ್ರಾನ್ಸ್‌ನಲ್ಲಿನ ಬೆಳವಣಿಗೆಗಳು ಮತ್ತು ಅಂತಾರಾಷ್ಟ್ರೀಯ ಆರೋಗ್ಯದ ಪರಿಸ್ಥಿತಿಯು ನಮಗೆ ಈ ವಿಚಾರದಲ್ಲಿ ಮುಂದುವರಿಯಲು ಅವಕಾಶ ನೀಡಿದ ಆದಷ್ಟು ಬೇಗನೆ ನಿಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಮಾಹಿತಿ ನೀಡಿದೆ.


Click it and Unblock the Notifications











