For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ನ ಹಿರಿಯ ನಟಿ ಡೆಬಿ ಮಜರ್‌ಗೆ ಕೊರೊನಾ ವೈರಸ್ ಪಾಸಿಟಿವ್

  |

  ಹಾಲಿವುಡ್‌ನ ಹಿರಿಯ ನಟಿ ಡೆಬಿ ಮಜರ್ ಅವರು ತಮ್ಮಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.

  ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಜನರಿಗೆ ಪ್ರಮುಖ ಮಾಹಿತಿಯನ್ನು ಅವರು ತಿಳಿಸಿದ್ದಾರೆ. 'ಎಂಟರೇಜ್' ಖ್ಯಾತಿಯ ಡೆಬಿ ಮಜರ್, ತಮ್ಮ ಫೋಟೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಆರೋಗ್ಯ ಹಾಗೂ ಕೋವಿಡ್-19ರ ಕುರಿತು ವಿಸ್ತೃತವಾಗಿ ಮಾಹಿತಿಯನ್ನು ಬರೆದುಕೊಂಡಿದ್ದಾರೆ.

  ಸುಳ್ಳು ವಿಡಿಯೋದಿಂದ ಕಂಗಾಲಾಗಿ ಸ್ಪಷ್ಟೀಕರಣ ನೀಡಿದ ಹಾಲಿವುಡ್ ನಟಸುಳ್ಳು ವಿಡಿಯೋದಿಂದ ಕಂಗಾಲಾಗಿ ಸ್ಪಷ್ಟೀಕರಣ ನೀಡಿದ ಹಾಲಿವುಡ್ ನಟ

  'ನನ್ನಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ಈಗಷ್ಟೇ ಗೊತ್ತಾಗಿದೆ. ನಾನು ಹುಷಾರಾಗಿ ಇದ್ದೇನೆ. ಕಳೆದ ತಿಂಗಳು ನನ್ನ ಇಡೀ ಮನೆ (ಗಂಡ ಹಾಗೂ ಇಬ್ಬರು ಹೆಣ್ಣುಮಕ್ಕಳು) ತೀವ್ರ ಜ್ವರ, ತಲೆನೋವು, ಗಂಟಲು ನೋವು, ದೇಹದ ನೋವು, ಕಿವಿ ನೋವು ಹಾಗೂ ಒಣ ಕೆಮ್ಮಿನಿಂದ ಬಳಲಿತ್ತು' ಎಂದು ತಿಳಿಸಿದ್ದಾರೆ.

  'ಗೇಮ್‌ ಆಫ್ ಥ್ರೋನ್‌' ನ ಭಾರತೀಯ ಮೂಲದ ನಟಿಗೆ ಕೊರೊನಾ 'ಗೇಮ್‌ ಆಫ್ ಥ್ರೋನ್‌' ನ ಭಾರತೀಯ ಮೂಲದ ನಟಿಗೆ ಕೊರೊನಾ

  'ಅವರ ಆರೋಗ್ಯ ಬೇಗನೆ ಸುಧಾರಿಸಿಕೊಂಡಿತ್ತು. ಅದು ಈ ಅವಧಿಯಲ್ಲಿ ಸಾಮಾನ್ಯವಾಗಿ ಬರುವಂಥದ್ದು ಎಂದು ನಾನು ಯೋಚಿಸಿದ್ದೆ. ಎರಡು ವಾರಗಳ ಬಳಿಕ, ಮಾರ್ಚ್ 15ರಂದು ಏಳುವಾಗ ನನ್ನಲ್ಲಿ ಈ ಎಲ್ಲ ರೀತಿಯ ಲಕ್ಷಣಗಳು ಕಾಣಿಸಿಕೊಂಡಿತು. ಅದರಲ್ಲಿಯೂ ಅತೀವ ದೇಹದ ನೋವು ಇತ್ತು. 102.4 ಡಿಗ್ರಿ ಜ್ವರ ಇತ್ತು. ನನಗೆ ಫ್ಲೂ ಅಥವಾ ಕೊರೊನಾ ಬಂದಿರಬಹುದೇ ಎಂದು ಅನುಮಾನ ಮೂಡಿತು' ಎಂದಿರುವ ಅವರು, ತಾವೇ ತೆರಳಿ ಕೊರೊನಾ ವೈರಸ್ ತಪಾಸಣೆ ಒಳಪಟ್ಟಿದ್ದನ್ನು ಹೇಳಿಕೊಂಡಿದ್ದಾರೆ.

  English summary
  Hollywood star, Entourage fame actress Debi Mazar tested coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X