ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್ 2' ಕಲೆಕ್ಷನ್ ₹6235 ಕೋಟಿ: ದಾಖಲೆಗಳೇನು?

ಹಾಲಿವುಡ್ ಸಿನಿಮಾಗಳ ಬಾಕ್ಸಾಫೀಸ್‌ ಕಲೆಕ್ಷನ್ ಮುಂದೆ ಯಾವುದೇ ಸಿನಿಮಾನೂ ಇಲ್ಲ. ಆದರೆ, ಕೋವಿಡ್ ಬಳಿಕ ಹಾಲಿವುಡ್ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಜಾದು ಮಾಡಿರಲಿಲ್ಲ. ಆದ್ರೀಗ 'ಡಾಕ್ಟರ್ ಸ್ಟ್ರೇಂಜ್ 2' ವರ್ಲ್ಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

'ಡಾಕ್ಟರ್ ಸ್ಟ್ರೇಂಜ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಮಾರ್ವೆಲ್ ಸಿನಿಮಾ ಮೂರು ವಾರದಲ್ಲಿಯೇ ಅಚ್ಚರಿಯ ಕಲೆಕ್ಷನ್ ಕಂಡು ಸಿನಿಮಾ ಮಂದಿಯನ್ನು ಹೌಹಾರುವಂತೆ ಮಾಡಿದೆ. ಇದೂವರೆಗೂ ಡಾಕ್ಟರ್ ಸ್ಟ್ರೇಂಜ್ ಸುಮಾರು 6235 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಹಾಲಿವುಡ್ ಸಿನಿಮಾ ವಿಶ್ವದಾದ್ಯಂತ ದಾಖಲೆ ಸೃಷ್ಟಿಸಿದೆ. ಅಷ್ಟಕ್ಕೂ ಹಾಲಿವುಡ್ ಸಿನಿಮಾ ಬರೆದ ದಾಖಲೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಡಾಕ್ಟರ್ ಸ್ಟ್ರೇಂಜ್ 2' ₹6235 ಕೋಟಿ ಗಳಿಸಿದ್ದೇಗೆ?

'ಡಾಕ್ಟರ್ ಸ್ಟ್ರೇಂಜ್ 2' ₹6235 ಕೋಟಿ ಗಳಿಸಿದ್ದೇಗೆ?

ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್: ಇನ್‌ ದಿ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್' ( ಡಾಕ್ಟರ್ ಸ್ಟ್ರೇಂಜ್ 2)ಗೆ ಸ್ಯಾಮ್ ರೈಮಿ ಆಕ್ಷನ್ ಕಟ್ ಹೇಳಿದ್ದರು. ಡಾಕ್ಟರ್ ಸ್ಟ್ರೇಂಜ್ ಪಾತ್ರದಲ್ಲಿ ಬೆನೆಡಿಕ್ಟ್ ಕಂಬರ್ಬ್ಯಾಚ್ ನಟಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಮೂರು ವಾರಗಳಲ್ಲಿ ಸುಮಾರು ₹6235 ಕೋಟಿ ($800 ಮಿಲಿಯನ್) ಲೂಟಿ ಮಾಡಿದೆ. ಕೇವಲ ಅಮೆರಿಕದಲ್ಲಿಯೇ ಸಿನಿಮಾ $342 ಮಿಲಿಯನ್ ಹಾಗೂ ವಿದೇಶದಿಂದ $461 ಮಿಲಿಯನ್ ಲೂಟಿ ಮಾಡಿದೆ.

ಭಾರತದ ಕಲೆಕ್ಷನ್ ಎಷ್ಟು?

ಭಾರತದ ಕಲೆಕ್ಷನ್ ಎಷ್ಟು?

ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್ 2' ಭಾರತದಲ್ಲೂ ಡಿಸೆಂಟ್ ಕಲೆಕ್ಷನ್ ಮಾಡಿದೆ. ಮೂರು ವಾರಗಳಲ್ಲಿ ಈ ಸಿನಿಮಾ ₹119.81 ಕೋಟಿ ಗಳಿಕೆ ಮಾಡಿದೆ. ಆದರೆ, ಹಾಲಿವುಡ್ ಸಿನಿಮಾ ಭಾರತದಲ್ಲಿ ಅಂದುಕೊಂಡಷ್ಟು ಗಳಿಕೆ ಕಾಣುವಲ್ಲಿ ಹಿಂದೆ ಬಿದ್ದಿದೆ. ಭಾರತದಲ್ಲಿ ಮಾರ್ವೆಲ್‌ನ 'ಡಾಕ್ಟರ್ ಸ್ಟ್ರೇಂಜ್ 2' ಸಿರೀಸ್ ಉಳಿದ ಸಿರೀಸ್‌ಗಿಂತ ಹೆಚ್ಚು ಫೇಮಸ್ ಆಗಿಲ್ಲ. ಈ ಕಾರಣಕ್ಕೆ ಡಾಕ್ಟರ್ ಸ್ಟ್ರೇಂಜ್ ಗಳಿಕೆ ಕಡಿಮೆ ಎನ್ನಲಾಗಿದೆ.

ಚೀನಾ ರಷ್ಯಾದಲ್ಲಿ ಸಿನಿಮಾ ರಿಲೀಸ್ ಇಲ್ಲ

ಚೀನಾ ರಷ್ಯಾದಲ್ಲಿ ಸಿನಿಮಾ ರಿಲೀಸ್ ಇಲ್ಲ

'ಡಾಕ್ಟರ್ ಸ್ಟ್ರೇಂಜ್ 2' ಸಿನಿಮಾ ಕೋವಿಡ್ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಆಗಿದೆ. ಆದರೆ, ಈ ಸಿನಿಮಾ ₹6235 ಕೋಟಿ ಗಳಿಸಿದ್ದರಲ್ಲಿ ವಿಶ್ವದ ಎರಡು ದೊಡ್ಡ ಸಿನಿಮಾ ಮಾರ್ಕೆಟ್ ಸೇರಿಲ್ಲ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಚೀನಾ ಹಾಗೂ ರಷ್ಯಾದಲ್ಲಿ 'ಡಾಕ್ಟರ್ ಸ್ಟ್ರೇಂಜ್ 2' ಸಿನಿಮಾ ರಿಲೀಸ್ ಮಾಡಿಲ್ಲ. ಒಂದು ವೇಳೆ ಈ ಎರಡೂ ದೇಶದಲ್ಲಿ ಸಿನಿಮಾ ರಿಲೀಸ್ ಆಗಿದ್ದರೆ, 'ಡಾಕ್ಟರ್ ಸ್ಟ್ರೇಂಜ್ 2' ವಿಶ್ವ ದಾಖಲೆಯನ್ನೇ ಸೃಷ್ಟಿಸುತ್ತಿತ್ತು. ಕಮ್ಮಿ ಅಂದರೂ, $950 ಮಿಲಿಯನ್ ಕಲೆ ಹಾಕುತ್ತಿತ್ತು ಎಂದು ಅಂದಾಜಿಸಲಾಗಿದೆ.

ಸೈಡರ್ ಮ್ಯಾನ್ ಹಿಂದಿಕ್ಕಲಿಲ್ಲ ಡಾಕ್ಟರ್

ಸೈಡರ್ ಮ್ಯಾನ್ ಹಿಂದಿಕ್ಕಲಿಲ್ಲ ಡಾಕ್ಟರ್

'ಡಾಕ್ಟರ್ ಸ್ಟ್ರೇಂಜ್ 2' ಸಿನಿಮಾ ವರ್ಲ್ಡ್ ಬಾಕ್ಸಾಫೀಸ್‌ನಲ್ಲಿ 6 ಸಾವಿರಕ್ಕೂ ಅಧಿಕ ಹಣವನ್ನು ಲೂಟಿ ಮಾಡಿದೆ. ಆದರೆ, ಅದಕ್ಕಿಂತ ಹೆಚ್ಚು ಹಣವನ್ನು ಈಗಾಗಲೇ 'ಸ್ಟೈಡರ್ ಮ್ಯಾನ್: ನೀ ವೇ ಹೋಮ್' ಗಳಿಸಿದೆ. ಈ ಸಿನಿಮಾ 54 ದಿನಗಳಲ್ಲಿ ₹10.154 ಕೋಟಿ ಹಣವನ್ನು ಲೂಟಿ ಮಾಡಿದೆ. ಭಾರತದಲ್ಲಿ ಸುಮಾರು ₹260 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ ಮೂಲಕ ಕೋವಿಡ್ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಇದಾಗಿದೆ.

More from Filmibeat

English summary
‘Doctor Strange:Multiverse of Madness worldwide Box Office Collection 6 thousand Crore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X