»   » ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ 'ಫಾಸ್ಟ್ ಅಂಡ್ ಫ್ಯೂರಿಯಸ್ 8'

ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ 'ಫಾಸ್ಟ್ ಅಂಡ್ ಫ್ಯೂರಿಯಸ್ 8'

Posted By:
Subscribe to Filmibeat Kannada

ಏಪ್ರಿಲ್ 14 ರಂದು ತೆರೆಕಂಡ ಈ ವರ್ಷದ ಹಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಪ್ರಪಂಚದ ಚಿತ್ರರಂಗದ ಎಲ್ಲಾ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದೆ.[ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ 'ಫಾಸ್ಟ್ ಅಂಡ್ ಫ್ಯೂರಿಯಸ್ 8']

ವಿನ್ ಡೀಸೆಲ್, ಡ್ವೇನ್ ಜಾನ್ಸನ್, ಜಾಸನ್ ಸ್ತಾಥಮ್ ಮುಖ್ಯ ಭೂಮಿಕೆಯ ಎಫ್ ಗ್ಯಾರಿ ಗ್ರೇ ನಿರ್ದೇಶನದ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಮೊದಲ ವೀಕೆಂಡ್ ಗೆ 3,400 ಕೋಟಿ ರೂ ($532.5 ಮಿಲಿಯನ್) ಗಳಿಸಿದ್ದು ಗ್ಲೋಬಲ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ.

Fast and Furious 8 becomes biggest box office opener ever

ಈ ಹಿಂದೆ 'ಸ್ಟಾರ್ ವಾರ್ಸ್:ದಿ ಫೋರ್ಸ್ ಅವೇಕನ್ಸ್' ಮೊದಲ ವೀಕೆಂಡ್ ಗೆ $529 ಮಿಲಿಯನ್ ಗಳಿಸಿತ್ತು. ಆದರೆ ಈಗ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಸಿನಿಮಾ 'ಸ್ಟಾರ್ ವಾರ್ಸ್' ಗಿಂತ $3.5 ಮಿಲಿಯನ್ ಹೆಚ್ಚು ಗಳಿಸಿ ಜಾಗತಿಕವಾಗಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಅಲ್ಲದೇ ಭಾರತದಲ್ಲೂ ಮೊದಲ ವೀಕೆಂಡ್ ಗೆ 65 ಕೋಟಿ ರೂ ಗಳಿಸಿದೆ ಎಂದು ವರದಿಯಾಗಿದೆ.

English summary
Vin Diesel, Dwayne Johnson Starrer Hollywood Cinema 'Fast and Furious 8 becomes biggest box office opener ever, earns over $532 million; leaves ‘Star Wars: The Force Awakens’ behind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada