»   » ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ 'ಫಾಸ್ಟ್ ಅಂಡ್ ಫ್ಯೂರಿಯಸ್ 8'

ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ 'ಫಾಸ್ಟ್ ಅಂಡ್ ಫ್ಯೂರಿಯಸ್ 8'

Posted By:
Subscribe to Filmibeat Kannada

ಕರ್ನಾಟಕದಲ್ಲಿ ಅನ್ಯ ಭಾಷೆ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ಇದ್ದರೂ ಸಹ ಒಂದೊಂದೆ ಇಂಗ್ಲಿಷ್ ಚಿತ್ರಗಳು ಡಬ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿವೆ. ಇತ್ತೀಚೆಗಷ್ಟೆ ಹಾಲಿವುಡ್ ನ 'ಸ್ಪೈಡರ್ ಮ್ಯಾನ್' ಚಿತ್ರ ಕನ್ನಡಕ್ಕೆ ಡಬ್ ಆಗಿದೆ. ಅದರ ಹಿಂದೆಯೇ ಈಗ ಹಾಲಿವುಡ್ ನ ಆಕ್ಷನ್ ಚಿತ್ರ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಸಹ ಕನ್ನಡಕ್ಕೆ ಡಬ್ ಆಗಿದ್ದು, ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ಬಿಡುಗಡೆ ಆಗಿದೆ.[ಕನ್ನಡಕ್ಕೆ ಡಬ್ ಆಗಿ ಬಂದೇ ಬಿಡ್ತು 'ಸ್ಪೈಡರ್ ಮ್ಯಾನ್' ಟ್ರೈಲರ್]

ಹಾಲಿವುಡ್ ನ ಆಕ್ಷನ್ ಸಿನಿಮಾಗಳ ಖ್ಯಾತ ನಟರಾದ ವಿನ್ ಡಿಸೇಲ್, ಡ್ವೇನ್ ಜಾನ್ಸನ್ ಅಭಿನಯದ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಕನ್ನಡ ಡಬ್ ಚಿತ್ರಕ್ಕೆ 'ವೇಗ ಮತ್ತು ಉದ್ವೇಗ 8' ಎಂಬ ಟೈಟಲ್ ನೀಡಲಾಗಿದೆ.

Hollywood Cinema 'Fast And Furious 8' Dubbed to Kannada

'ಫಾಸ್ಟ್ ಅಂಡ್ ಫ್ಯೂರಿಯಸ್ 8' ಹಾಲಿವುಡ್ ಚಿತ್ರ ಮುಂಬೈನಲ್ಲಿ ಕನ್ನಡಕ್ಕೆ ಡಬ್ ಆಗಿದ್ದು, ಖ್ಯಾತ ಬರಹಗಾರರು ಮತ್ತು ಕಂಠದಾನ ಕಲಾವಿದರು ಆದ ಜಯಶೀಲ ಸುವರ್ಣ ಮತ್ತು ಅರುಷಾ ಎನ್.ಶೆಟ್ಟಿ ಎಂಬುವವರು ಡಬ್ಬಿಂಗ್ ಗೆ ನಿರ್ದೇಶನ ನೀಡಿ ವಾಯ್ಸ್ ನೀಡಿದ್ದಾರೆ.

ಏಪ್ರಿಲ್ 12 ರಂದೇ ಭಾರತದಲ್ಲಿ ರಿಲೀಸ್ ಆಗಿರುವ 'ಫಾಸ್ಟ್ ಅಂಡ್ ಫ್ಯೂರಿಯಸ್'(ಇಂಗ್ಲಿಷ್) ಮೂರು ದಿನಗಳ ಅಂತ್ಯಕ್ಕೆ 38.60 ಕೋಟಿ ಕಲೆಕ್ಷನ್ ಮಾಡಿತ್ತು.

English summary
Vin Diesel, Dwayne Johnson Starrer Hollywood Cinema 'Fast And Furious 8' Dubbed to Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada