13 ವರ್ಷಗಳ ಬಳಿಕ ಹಾಲಿವುಡ್ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಟ ವಿನ್ ಡಿಸೇಲ್ ಪ್ರತಿಕ್ರಿಯೇನು?
ಹಾಲಿವುಡ್‌ನ ಜನಪ್ರಿಯ ನಟ ವಿನ್ ಡೀಸೆಲ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಗಳ ಮೂಲಕ ವಿನ್ ಡೀಸಲ್ ಜಗತ್ತಿನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. 'ದಿ ಕ್ರಾನಿಕಲ್ಸ್ ಆಫ್ ರಿಡ್ಡಿಕ್', XXX ಅಂತಹ ಸೀರಿಸ್‌ಗಳಲ್ಲಿ ನಟಿಸುವ ಮೂಲಕ ವಿನ್ ಡೀಸೆಲ್ ಹೆಸರು ಮಾಡಿದ್ದರು.
ಹಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಲಿವುಡ್ ನಟರಲ್ಲಿ ವಿನ್ ಡಿಸೇಲ್ ಕೂಡ ಒಬ್ಬರು. 56 ವರ್ಷದ ಈ ನಟನ ಮೇಲೆ ಮಾಜಿ ಸಹಾಯಕಿ ಅಸ್ಟಾ ಜಾನ್ಸನ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.

2010ರಲ್ಲಿ 'ಫಾಸ್ಟ್ ಅಂಡ್ ಫ್ಯೂರಿಯಸ್ 5' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ವಿನ್ ಡೀಸೆಲ್ ಕಂಪನಿ ಅಟ್ಲಾಂಟಗೆ ಪ್ರಯಣ ಬೆಳೆಸಿತ್ತು. ಇದೇ ವೇಳೆ ವಿನ್ ಡೀಸೆಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪ ಮಾಡಿದ್ದಾರೆ. ಹಾಗೇ ವಿನ್ ಡೀಸೆಲ್ ಸಹೋದರಿ ಹಾಗೂ ನಿರ್ಮಾಣ ಸಂಸ್ಥೆ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಕೋರ್ಟ್‌ಗೆ ಸಲ್ಲಿಸಿದ ದೂರಿನಲ್ಲಿ ಪಾಪರಾಜಿಗಳ ಕಣ್ಣಿಗೆ ಬೀಳುವುದಕ್ಕೂ ಮುನ್ನ ವಿನ್ ಡೀಸೆಲ್ ಅನ್ನು ಬೆಳ್ಳಂಬೆಳಗ್ಗೆ ಹೋಟೆಲ್‌ನಿಂದ ಹೊರಡುವುದಕ್ಕೆ ಸಹಾಯ ಮಾಡಬೇಕಿತ್ತು. " ಅವರ ಐಷಾರಾಮಿ ಹೋಟೆಲ್ ರೂಮ್‌ನಲ್ಲಿ ಒಬ್ಬರೇ ಇದ್ದರು. ಈ ವೇಳೆ ಅಸ್ಟ್ರಾ ಜಾನ್ಸನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎಷ್ಟೇ ವಿರೋಧ ವ್ಯಕ್ತಪಡಿಸಿದ್ರೂ, ಎದೆಯ ಭಾಗವನ್ನು ಮುಟ್ಟಿ, ಚುಂಬಿಸಿದ್ದಾರೆ. ಈ ವೇಳೆ ಅವರ ಒಳ ಉಡುಪನ್ನು ತೆಗೆಯುವುದಕ್ಕೆ ಯತ್ನಿಸಿದ್ದರು" ಎಂದು ಆರೋಪ ಮಾಡಿದ್ದಾರೆ.
ಮಾಜಿ ಸಹಾಯಕಿ ಮಾಡಿರುವ ಆರೋಪಕ್ಕೆ ಹಾಲಿವುಡ್ ನಟ ವಿನ್ ಡೀಸೆಲ್ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. " ವಿನ್ ಡಿಸೇಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. 9 ದಿನ ಕೆಲಸ ಮಾಡಿದ ಉದ್ಯೋಗಿಯ 13 ವರ್ಷಗಳ ಹಿಂದಿನ ಆರೋಪವನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದಾರೆ. ಈ ವಿಲಕ್ಷಣ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುವಂತಹ ಸ್ಪಷ್ಟ ಪುರಾವೆ ನಮ್ಮಲ್ಲಿದೆ." ಎಂದು ಗಂಭೀರ ಆರೋಪದ ಬಗ್ಗೆ ವಿನ್ ಡಿಸೇಲ್ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ.
ಅಸ್ಟಾ ಜಾನ್ಸನ್ ಇಷ್ಟು ವರ್ಷ ಸಿನಿಮಾ ಹಾಗೂ ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರು. ವಿರೋಧಿಸಿದರೆ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಸುಮ್ಮನಿದ್ದರು. ಆದರೆ, ಮೀಟು ಅಭಿಯಾನದ ಪ್ರೇರಣೆಯಿಂದ ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











