8 ವರ್ಷಗಳ ಬಳಿಕ ವಿಚ್ಛೇದನದ ಕದನ ಅಂತ್ಯಗೊಳಿದ ಏಂಜಲೀನಾ ಜೋಲಿ-ಬ್ರಾಡ್ ಪಿಟ್

ಹಾಲಿವುಡ್‌ನ ಪವರ್ ಕಪಲ್ ಅಂತ ಅನಿಸಿಕೊಂಡಿದ್ದವರು ನಟಿ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್. ಕಳೆದ ಎಂಟು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಈ ಜೋಡಿ ಕೊನೆಗೂ ಸೆಟೆಲ್ಮೆಂಟ್ ಮಾಡಿಕೊಂಡಿದ್ದಾರೆ. ಎಂಟು ವರ್ಷದ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.

ಡಿಸೆಂಬರ್ 30ರಂದು ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಇಬ್ಬರೂ ತಮ್ಮ ವಿಚ್ಚೇದನದ ಪೇಪರ್ ವರ್ಕ್ ಅನ್ನು ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಹಾಲಿವುಡ್ ನಟಿ ಏಂಜಲೀನಾ ಜೋಲಿ ಪರ ವಕೀಲರಾದ ಜೇಮ್ಸ್ ಸಿಮೊನ್ ಡೈಲಿ ಮೇಲ್‌ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟಿ ಏಂಜಲೀನಾ ಜೋಲಿ ಕಳೆದ ಕೆಲವು ವರ್ಷಗಳಿಂದ ಈ ಕಾನೂನು ಹೋರಾಟದಿಂದ ಸುಸ್ತಾಗಿದ್ದರು ಎಂದು ಹೇಳಿದ್ದಾರೆ.

Former Hollywood couple Angelina Jolie and Brad Pitt have finalized their divorce after eight years

"ಸುಮಾರು ಎಂಟು ವರ್ಷಗಳ ಹಿಂದೆ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಏಂಜಲೀನಾ ಜೋಲಿ ಅವರ ಮಕ್ಕಳೊಂದಿಗೆ ಬ್ರಾಡ್ ಪಿಟ್ ಜೊತೆ ಹಂಚಿಕೊಂಡಿದ್ದ ಆಸ್ತಿಯನ್ನೆಲ್ಲ ಬಿಟ್ಟು ತೊರೆದಿದ್ದರು. ಅಂದಿನಿಂದ ಕುಟುಂಬದಲ್ಲಿ ಶಾಂತಿಯನ್ನು ಕಾಪಾಡುವುದಕ್ಕೆ ಹೆಚ್ಚಾಗಿ ಶ್ರಮಿಸಿದ್ದಾರೆ." ಎಂದು ಏಂಜಲೀನಾ ಜೋಲಿ ಪರ ವಕೀಲರು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ.

ವಿಚ್ಚೇದನದ ಬಳಿಕ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಇಬ್ಬರೂ ಬೇರೆಯಾದರೂ, ಅವರ ಮಧ್ಯೆ ಪ್ರಾಪರ್ಟಿಯೊಂದರ ವಿಚಾರಕ್ಕೆ ವಿವಾದ ಶುರುವಾಗಿತ್ತು. ಹೀಗಾಗಿ ಇಬ್ಬರೂ ಕಾನೂನು ಹೋರಾಟ ನಡೆಸಿದ್ದರು. ಏಂಜಲೀನಾ ಜೋಲಿ ಹಾಗೂ ಬ್ರಾಡ್ ಇಬ್ಬರೂ ಜಂಟಿಯಾಗಿ ಫ್ರಾನ್ಸ್‌ನಲ್ಲಿರುವ ಚಟೌ ಮಿರಾವಲ್ ದ್ರಾಕ್ಷಿತೋಟವನ್ನು ಕೊಂಡುಕೊಂಡಿದ್ದರು. ಆದರೆ, ವಿಚ್ಚೇದನದ ಬಳಿಕ ಈ ಪ್ರಾಪರ್ಟಿ ವಿಚಾರವಾಗಿ ಇಬ್ಬರೂ ಒಮ್ಮತ ಬಾರದ ಕಾರಣ ಕಾನೂನು ಹೋರಾಟ ನಡೆಸಿದ್ದರು.

ಫ್ರಾನ್ಸ್‌ನಲ್ಲಿರುವ ಚಟೌ ಮಿರಾವಲ್ ದ್ರಾಕ್ಷಿತೋಟದಲ್ಲಿರುವ ತನ್ನ ಭಾಗ ಶೇರ್ ಅನ್ನು ಏಂಜಲೀನಾ ಜೋಲಿ ತನ್ನ ಅನುಮತಿ ಇಲ್ಲದೆ ಮಾರಿದ್ದಾರೆಂದು ಬ್ರಾಡ್ ಪಿಟ್ ಆರೋಪಿಸಿದ್ದರು. ಈಗ ಎಂಟು ವರ್ಷಗಳ ಕಾನೂನು ಹೋರಾಟದ ಬಳಿಕ ಇಬ್ಬರೂ ಈ ಮ್ಯಾಟರ್ ಅನ್ನು ಇತ್ಯಾರ್ಥ ಮಾಡಿಕೊಳ್ಳುವುದಕ್ಕೆ ನಿರ್ಧಿಸಿದ್ದಾರೆಂದು ಡೈಲಿ ಮೇಲ್ ವರದಿ ಮಾಡಿದೆ.

"ಏಂಜಲೀನಾ ಜೋಲಿ ತಮ್ಮ ವಿಚ್ಚೇದನದ ಬಗ್ಗೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಎಲ್ಲೂ ಮಾತಾಡಿಲ್ಲ. ಈಗ ಆಕೆಯ ಮಕ್ಕಳು ಬೆಳೆದಿದ್ದಾರೆ. ಜನರಿಗೆ ಶಕ್ತಿ ಹಾಗೂ ಸವಲತ್ತು ಇವರುವುದರಿಂದ ಅವರ ಧ್ವನಿಗೆ ಯಾವುದೇ ಲೆಕ್ಕವಿಲ್ಲವೆಂದು ಮಕ್ಕಳು ನೋಡುತ್ತಾ ಬೆಳೆದಿದ್ದಾರೆ. ಅವರ ನೋವುಗಳು ಲೆಕ್ಕಕ್ಕೆ ಬರುವುದಿಲ್ಲ" ಎಂದು ಆಪ್ತರು ಹೇಳಿದ್ದಾಗಿ ವರದಿ ಮಾಡಿದ್ದಾರೆ. ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಇಬ್ಬರೂ ಮ್ಯಾಡಾಕ್ಸ್, ಪ್ಯಾಕ್ಸ್, ಜಹಾರಾ, ಶಿಲೋ, ವಿವಿಯೆನ್ ಮತ್ತು ನಾಕ್ಸ್ ಗೆ ಪೋಷಕರಾಗಿದ್ದರು. ಈಗ ಈ ಆರೂ ಮಕ್ಕಳೂ ಏಂಜಲೀನಾ ಜೋಲಿ ಜೊತೆ ಇದ್ದಾರೆ.

2014ರಲ್ಲಿ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ವಿವಾಹವಾಗಿದ್ದರು. ಕೇವಲ ಎರಡು ವರ್ಷಗಳ ಬಳಿಕ 2016ರಲ್ಲಿ ಏಂಜಲೀನಾ ಜೋಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಖಾಸಗಿ ಏರೋಪ್ಲೇನ್‌ನಲ್ಲಿ ಮಾಜಿ ಪತಿಸ ಬ್ರಾಡ್ ಪಿಟ್ ಅನುಚಿತವಾಗಿ ವರ್ತಿಸಿದ್ದಾಗಿ ಏಂಜಲೀನಾ ಜೋಲಿ ಆರೋಪ ಮಾಡಿದ್ದರು. ಜೋಲಿ ಹಾಗೂ ಬ್ರಾಡ್ ಪಿಟ್ ಇಬ್ಬರಿಗೂ 2019ರಂದು ಕೋರ್ಟ್ ವಿಚ್ಛೇದನವನ್ನು ನೀಡಿತ್ತು.

More from Filmibeat

English summary
Former Hollywood couple Angelina Jolie and Brad Pitt have finalized their divorce after eight years;
Read more about: angelina jolie hollywood divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X