Cannes 2023: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್

'ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023' ಮೇ 16ರಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ವಿಶ್ವದ ಮೂಲೆ ಮೂಲೆಯಿಂದ ಸಿನಿಮಾ ತಾರೆಯರು ಆಗಮಿಸುತ್ತಿದ್ದಾರೆ. ಭಾರತದಿಂದಲೂ ನಟ, ನಟಿಯರಿಗೆ ಆಹ್ವಾನ ನೀಡಲಾಗಿದೆ. ಈ ಸಿನಿಮಾ ಹಬ್ಬಕ್ಕೆ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಪ್ರತಿನಿಧಿಸುತ್ತಿದ್ದಾರೆ.

2017ರಲ್ಲಿ ವಿಶ್ವ ಸುಂದರಿ ಕೀರಿಟವನ್ನು ಗೆದ್ದು ಭಾರತದ ಹೆಸರನ್ನು ವಿಶ್ವ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದವರು ಇದೇ ಮಾನುಷಿ ಚಿಲ್ಲರ್. ಇತ್ತೀಚೆಗೆ ಸಿನಿಮಾರಂಗದಲ್ಲೂ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

Former Miss World Manushi Chhillar happy that she representing India in Cannes Film Festival 2023

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಬಾರಿಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿರುವುದಕ್ಕೆ ಮಾನುಷಿ ಚಿಲ್ಲರ್ ಖುಷಿಯಾಗಿದ್ದಾರೆ.

ವಿಶ್ವದ ಮೂಲೆ ಮೂಲೆಯಿಂದ ಬರುವ ಸಿನಿಮಾ ಸೆಲೆಬ್ರೆಟಿಗಳಿಗೆ ಭಾರತೀಯ ಸಿನಿಮಾಗಳು ಹಾಗೂ ಕಲಾವಿದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹಿಂದೆ ಇಂತಹ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕೆಲವೇ ಕೆಲವು ಸೆಲೆಬ್ರೆಟಿಗಳು ಭಾಗವಹಿಸುತ್ತಿದ್ದರು ಎಂದು ಹೇಳಿದ್ದಾರೆ.

" ನೀವು ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತಾಡುವುದಾದರೆ, ಇದಕ್ಕೂ ಮುನ್ನ ಕೆಲವೇ ಕೆಲವು ಭಾರತೀಯ ನಟ, ನಟಿಯರು ಕೇನ್ಸ್ ಅಂತಹ ಫಿಲ್ಮ್ ಫೆಸ್ಟಿವಲ್‌ಗಳಿಗೆ ಹೋಗುತ್ತಿದ್ದರು. ಈಗ ಇಂತಹ ಫಿಲ್ಮ್ ಫೆಸ್ಟಿವಲ್‌ಗಳಿಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಖುಷಿ ಕೊಟ್ಟಿದೆ." ಎಂದು ಮಾನುಷಿ ಚಿಲ್ಲರ್ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Former Miss World Manushi Chhillar happy that she representing India in Cannes Film Festival 2023

ಮಾನುಷಿ ಚಿಲ್ಲರ್ ಇದೇ ಮೊದಲ ಬಾರಿಗೆ ಕೇನ್ಸ್ ಫಿಲ್ಮ್ಸ್ ಫೆಸ್ಟಿವಲ್‌ ಹೋಗುತ್ತಿದ್ದಾರೆ. ಈ ಕಾರಣಕ್ಕೆ ನಟಿ ಖುಷಿಯಾಗಿದ್ದು, ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿರುವವರಿಗೂ ಶುಭ ಕೋರಿದ್ದಾರೆ. ಮಾನುಷಿ ಚಿಲ್ಲರ್ ಇತ್ತೀಚೆಗೆ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇನ್ನು ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ಗೆ ಚಿತ್ರರಂಗದಲ್ಲಿ ಇನ್ನೂ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಆದರೆ, ಕೈಯಲ್ಲಿ ಎರಡು ಸಿನಿಮಾಗಳಿವೆ. ಜಾನ್ ಅಬ್ರಾಹಂ ನಟಿಸುತ್ತಿರುವ 'ಟೆಹ್ರಾನ್'ನಲ್ಲಿ ನಟಿಸಿದ್ದಾರೆ. ವರುಣ್ ತೇಜ್ ಸಿನಿಮಾ 'ಆಪರೇಷನ್ ವ್ಯಾಲೆಂಟೈನ್'ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Former Miss World Manushi Chhillar happy that she representing India in Cannes Film Festival 2023, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X