Golden Globes Awards 2024: ಈ ವರ್ಷದ ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡು ಸಿನಿಮಾಗಳು ಇವೇನೆ!
2024ನೇ ಸಾಲಿನ ವಿಶ್ವದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅನೌನ್ಸ್ ಆಗಿದೆ. ನಿರೀಕ್ಷೆಯಂತೆಯೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಹಾಲಿವುಡ್‌ನ ದುಬಾರಿ ಸಿನಿಮಾಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿವೆ.
ನಿರೀಕ್ಷೆಯಂತೆಯೇ 'ಓಪನ್‌ಹೈಮರ್', 'ಬಾರ್ಬಿ', 'ಪೂರ್ ಥಿಂಗ್ಸ್', 'ಅನಾಟಮಿ ಆಫ್ ಎ ಫಾಲ್', ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿಗಳು ಬಂದಿವೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 'ಓಪನ್‌ಹೈಮರ್' ಪ್ರಶಸ್ತಿ ಗೆದ್ದಿದೆ. ಇದೇ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಕ್ರಿಸ್ಟಫರ್ ನೋಲನ್‌ಗೆ ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಬಂದಿದೆ. 'ಪೂರ್ ಥಿಂಗ್ಸ್' ಮ್ಯೂಸಿಕಲ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ.

ಹಾಗೇ 'ಅನಾಟಮಿ ಆಫ್ ಎ ಫಾಲ್' ಸಿನಿಮಾ ಇಂಗ್ಲಿಷೇತರ ಭಾಷೆಯ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. 'ದಿ ಬಾಯ್ ಅಂಡ್ ದಿ ಹೆರಾನ್' ಅತ್ಯುತ್ತಮ ಅನಿಮೆಟೆಡ್ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಇದರೊಂದಿಗೆ 'ಸಕ್ಸೇಷನ್' ಸಿನಿಮಾ ಬೆಸ್ಟ್ ಡ್ರಾಮ ಸೀರಿಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಭಾಗದಲ್ಲಿ ಹೊಸ ಕೆಟಗರಿಯಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಸ್ಟ್ಯಾಂಡಪ್ ಕಾಮಿಡಿ, ಸಿನಿಮ್ಯಾಟಿಕ್ ಮತ್ತು ಬಾಕ್ಸಾಫೀಸ್ ಸಾಧನೆ ವಿಭಾಗ ಸೇರಿಕೊಂಡಿದೆ. ಈ ಬಾರಿ 'ಬಾರ್ಬಿ' ಸಿನಿಮ್ಯಾಟಿಕ್ ಮತ್ತು ಬಾಕ್ಸಾಫೀಸ್ ಅಚೀವ್‌ಮೆಂಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. 2024ನೇ ಸಾಲಿನಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದವರ ಪಟ್ಟಿ
ಓಪನ್‌ಹೈಮರ್ - ಅತ್ಯುತ್ತಮ ಮೋಷನ್ ಸಿನಿಮಾ
ಪೂರ್ ಥಿಂಗ್ಸ್ - ಅತ್ಯುತ್ತಮ ಮೋಷನ್ ಸಿನಿಮಾ (ಮ್ಯೂಸಿಕಲ್)
ದಿ ಬಾಯ್ ಅಂಡ್ ದಿ ಹೆರಾನ್ - ಅತ್ಯುತ್ತಮ ಮೋಷನ್ ಸಿನಿಮಾ (ಅನಿಮೆಟೆಡ್)
ಬಾರ್ಬಿ - ಸಿನಿಮ್ಯಾಟಿಕ್ ಅಂಡ್ ಬಾಕ್ಸಾಫೀಸ್ ಸಾಧನೆ
ಅನಾಟಮಿ ಆಫ್ ಎ ಫಾಲ್ - ಅತ್ಯುತ್ತಮ ಮೋಷನ್ ಸಿನಿಮಾ (ಇಂಗ್ಲಿಷೇತರ ಸಿನಿಮಾ)
ಸಿಲಿಯನ್ ಮರ್ಫಿ - ಅತ್ಯುತ್ತಮ ನಟ (ಡ್ರಾಮ, ಓಪನ್‌ಹೈಮರ್)
ಲಿಲಿ ಗ್ಲಾಡ್‌ಸ್ಟೋನ್ - ಅತ್ಯುತ್ತಮ ನಟಿ (ಡ್ರಾಮ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
ಎಮ್ಮಾ ಸ್ಟೋನ್ - ಅತ್ಯುತ್ತಮ ನಟಿ (ಮ್ಯೂಸಿಕಲ್, ಪೂರ್ ಥಿಂಗ್ಸ್)
ಪಾಲ್ ಗಿಯಾಮಟ್ಟಿ - ಅತ್ಯುತ್ತಮ ನಟ (ಮ್ಯೂಸಿಕಲ್/ಕಾಮಿಡಿ, ದಿ ಹೋಲ್ಡೋವೆರ್ಸ್)
ರಾಬರ್ಟ್ ಡೌನಿ ಜೂ. - ಅತ್ಯುತ್ತಮ ಪೋಷಕ ನಟ ( ಓಪನ್‌ಹೈಮರ್)
ಡೇವಿನ್ ಜಾಯ್ ರಾಂಡೋಲ್ಫ್ - ಅತ್ಯುತ್ತಮ ಪೋಷಕ ನಟಿ (ದಿ ಹೋಲ್ಡೋವರ್ಸ್)
ಕ್ರಿಸ್ಟೋಫರ್ ನೋಲನ್ - ಅತ್ಯುತ್ತಮ ನಿರ್ದೇಶಕ (ಓಪನ್‌ಹೈಮರ್)
ಜಸ್ಟಿನ್ ಟ್ರೈಟ್, ಆರ್ಥರ್ ಹರಾರಿ - ಅತ್ಯುತ್ತಮ ಚಿತ್ರಕತೆ (ಅನಾಟಮಿ ಆಫ್ ದಿ ಫಾಲ್)
ವಾಟ್ ವಾಸ್ ಐ ಮೇಡ್ ಫಾರ್ - ಬೆಸ್ಟ್ ಒರಿಜಿನಲ್ ಸಾಂಗ್ (ಬಾರ್ಬಿ)
ಲುಡ್ವಿಗ್ ಗೊರಾನ್ಸನ್ - ಬೆಸ್ಟ್ ಒರಿಜಿನಲ್ ಸ್ಕೋರ್ (ಓಪನ್‌ಹೈಮರ್)
ಸಕ್ಸೇಷನ್ - ಅತ್ಯುತ್ತಮ ಟಿವಿ ಸೀರಿಸ್ ( HBO/Max)
ದಿ ಬೇರ್ - ಅತ್ಯುತ್ತಮ ಟಿವಿ ಸೀರಿಸ್ (ಮ್ಯೂಸಿಕಲ್)
ಬೀಫ್ - ಅತ್ಯುತ್ತಮ ಟಿವಿ ಸೀರಿಸ್ (ಲಿಮಿಟೆಡ್ ಸೀರಿಸ್, ನೆಟ್‌ಫ್ಲಿಕ್ಸ್)
ಸಾರಾ ಸ್ನೋಕ್ - ಅತ್ಯುತ್ತಮ ನಟಿ (ಟಿವಿ ಸೀರಿಸ್, ಸಕ್ಸೇಷನ್)
ಕೀರನ್ ಕುಲ್ಕಿನ್ - ಅತ್ಯುತ್ತಮ ನಟ (ಟಿವಿ ಸೀರಿಸ್, ಸಕ್ಸೇಷನ್)
ಆಯೊ ಎಡೆಬಿರಿ - ಅತ್ಯುತ್ತಮ ನಟಿ (ಟಿವಿ ಸೀರಿಸ್, ಮ್ಯೂಸಿಕಲ್)
ಜೆರೆಮಿ ಅಲ್ಲೆನ್ ವೈಟ್ - ಅತ್ಯುತ್ತಮ ನಟ (ಟಿವಿ ಸೀರಿಸ್, ದಿ ಬೇರ್)
ಅಲಿ ವೊಂಗ್ - ಅತ್ಯುತ್ತಮ ನಟಿ (ಟಿವಿ ಲಿಮಿಟೆಡ್ ಸೀರಿಸ್, ಬೀಫ್)
ಸ್ಟೀವನ್ ಯೂನ್ - ಅತ್ಯುತ್ತಮ ನಟ (ಟಿವಿ ಲಿಮಿಟೆಡ್ ಸೀರಿಸ್, ಬೀಫ್)
ಎಲಿಜಬೆತ್ ಡೆಬಿಕಿ - ಅತ್ಯುತ್ತಮ ಪೋಷಕ ನಟಿ (ಟಿವಿ, ದಿ ಕ್ರೌನ್)
ಮ್ಯಾಥ್ಯೂ ಮ್ಯಾಕ್‌ಫಾಡೆನ್ - ಅತ್ಯುತ್ತಮ ಪೋಷಕ ನಟ (ಟಿವಿ, ಸಕ್ಸೆಷನ್)
ರಿಕಿ ಗೆರ್ವೈಸ್, ರಿಕಿ ಗೆರ್ವೈಸ್ - ಬೆಸ್ಟ್ ಸ್ಟ್ಯಾಂಡಪ್ ಕಾಮಿಡಿ (ಆರ್ಮಗೆಡಾನ್)


Click it and Unblock the Notifications











