ವಿಮಾನ ದುರ್ಘಟನೆಯಲ್ಲಿ ಹಾಲಿವುಡ್ ನಟ ನಿಧನ; ಕೆರಿಬಿಯನ್ ಸಮುದ್ರ ನಟನ ಜೊತೆ ಪುತ್ರಿಯರ ಶವ ಪತ್ತೆ!

ಜರ್ಮನ್ ಮೂಲದ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತೆ ಅವರ ಇಬ್ಬರು ಪುತ್ರಿಯರು ಪ್ರವಾಸದಲ್ಲಿದ್ದರು. ತಮ್ಮ ಕೆಲಸದಿಂದ ಬಿಡುವು ಪಡೆದುಕೊಂಡು ತಮ್ಮ ಪುತ್ರಿಯರೊಂದಿಗೆ ಪ್ರವಾಸ ಹೊರಟಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನ ಅಪಘಾತಕ್ಕೀಡಾಗಿದೆ.

ಶುಕ್ರವಾರ ಕೆರಿಬಿಯನ್ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, 51 ವರ್ಷದ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಸಾವನ್ನಪ್ಪಿದ್ದಾರೆ. ಇವರೊಂದಿಗೆ ಪುತ್ರಿಯರಾದ 10 ವರ್ಷದ ಮದಿತಾ ಹಾಗೂ 12 ವರ್ಷದ ಅನ್ನಿಕ್ ಕೂಡ ಸಾವನ್ನಪ್ಪಿದ್ದಾರೆ. ಹಾಗೇ ಮಿಮಾನ ಪೈಲೆಟ್ ರಾಬರ್ಟ್ ಸ್ಯಾಚ್ಸ್ ಕೂಡ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

Hollywood actor Christian Oliver and two daughters Died in plane crash

ಕ್ರಿಶ್ಚಿಯನ್ ಆಲಿವರ್ ಕುಟುಂಬ ಹೊಸ ವರ್ಷದ ಸಂಭ್ರಮದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿತ್ತು. ಪ್ರವಾಸಕ್ಕೆ ತೆರಳುವ ಮುನ್ನ ಕ್ರಿಶ್ಚಿಯನ್ ಆಲಿವರ್ "ಸ್ವರ್ಗದ ಯಾವುದೋ ಮೂಲೆಯಿಂದ ನಿಮಗೆ ಶುಭಾಶಯಗಳು" ಎಂದು ಹೊಸ ವರ್ಷಕ್ಕೆ ಸಂತಸ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಸ್ ಮಾಡಿದ್ದರು.

ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಒಂದು ಇಂಜಿನ್‌ನ ಪುಟ್ಟ ವಿಮಾನದಲ್ಲಿ ಸೇಂಟ್ ವಿನ್ಸೆಂಟ್ ಮತ್ತು ಕೆರಿಬಿಯನ್ ಗ್ರೆನಡೈನ್ಸ್ ದ್ವೀಪಗಳ ಭಾಗದ ಪ್ಯಾಗೆಟ್ ಫಾರ್ಮ್‌ನಿಂದ ಲಘು ವಿಮಾನದಲ್ಲಿ ನಿರ್ಗಮಿಸಿದ್ದರು. ಈ ವಿಮಾನ ಇನ್ನೊಂದು ದ್ವೀಪ ಸೆಂಟ್ ಲೂಸಿಯಾದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಶುರುವಾಗಿತ್ತು.

"ಲಘು ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಸಾಗಕ್ಕೆ ಧುಮುಕಿತ್ತು. ಕೋಸ್ಟಲ್ ಗಾರ್ಡ್ಸ್ ಮಾಹಿತಿ ರವಾನೆ ಮಾಡುತ್ತಿದ್ದಂತೆ ಪ್ಯಾಗೆಟ್ ಫಾರ್ಮ್‌ನ ಮೀನುಗಾರರು ಹಾಗೂ ಮುಳುಗು ತಜ್ಞರು ಕೂಡ ಸ್ಥಳಕ್ಕೆ ಧಾವಿಸಿ ಸಹಾಯಕ್ಕೆ ಮುಂದಾಗಿದ್ದರು." ಎಂದು ರಾಯಲ್ ಸೆಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೋಲೀಸ್ ಫೋರ್ಸ್ ಮಾಹಿತಿ ನೀಡಿದೆ.

Hollywood actor Christian Oliver and two daughters Died in plane crash

ಲಘು ವಿಮಾನ ದುರ್ಘಟನೆಯ ಬಳಿಕ 51 ವರ್ಷದ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್, ಅವರ ಪುತ್ರಿಯರಾದ ಮದಿತಾ, ಅನ್ನಿಕ್ ಹಾಗೂ ಪೈಲೆಟ್ ರಾಬರ್ಟ್ ಸ್ಯಾಚ್ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈ ಮೃತದೇಹಗಳನ್ನು ಸೆಂಟ್ ವಿನ್ಸೆಂಟ್‌ಗೆ ಪೋಸ್ಟ್ ಮಾರ್ಟಂ ಮಾಡುವುದಕ್ಕೆ ತೆಗೆದುಕೊಂಡು ಹೋಗಲಾಗಿದೆ.

ಜರ್ಮನಿ ಮೂಲದವರಾಗಿದ್ದ ಕ್ರಿಶ್ವಿಯನ್ ಆಲಿವರ್ ಹಾಲಿವುಡ್‌ನಲ್ಲಿ ಸೆಟಲ್ ಆಗಿದ್ದರು. ಇವರ ಮೂಲಕ ಹೆಸರು ಕ್ರಿಶ್ಚಿಯನ್ ಕ್ಲೆಪ್ಸರ್. ಸುಮಾರು 60 ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಮ್ ಕ್ರೂಸ್ ನಟಿಸಿದ್ದ 'ವಾಲ್ಕಿರೀ' ಅನ್ನೋ ಸಿನಿಮಾದಲ್ಲಿ ನಟಿಸಿ, ಜನಪ್ರಿಯರಾಗಿದ್ದರು. 'ಸೇವ್ಡ್ ಬೈ ದಿ ಬೆಲ್' ಹಾಗೂ 'ದಿ ಬೇಬಿ ಸಿಟ್ಟರ್ಸ್ ಕ್ಲಬ್' ಅನ್ನೋ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Hollywood actor Christian Oliver Killed in Plane crash:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X