ಹುಡ್ಕೊಂಡು ಬಂದ ಆಫರ್ 10 ನಿಮಿಷದಲ್ಲಿ ರಿಜೆಕ್ಟ್, ಒಪ್ಪಿದ್ದರೆ ₹1400 ಕೋಟಿ ಜೇಬಲ್ಲಿ ಇರ್ತಿತ್ತು: ಯಾರು ಆ ನಟ?

ಚಿತ್ರರಂಗನೇ ಹಾಗೆ, ಇಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ಆ ನಟನನ್ನು ಸ್ಟಾರ್ ಮಾಡಬಹುದು. ಅದೇ ನಿರ್ಧಾರ ಆತನನ್ನು ಪಾತಾಳಕ್ಕೂ ತಳ್ಳಬಹುದು. ಹೀಗೆ ತೆಗೆದುಕೊಂಡು ಒಂದು ನಿರ್ಧಾರದಿಂದ ಅದೆಷ್ಟೋ ಮಂದಿಯ ಬದುಕು ಬದಲಾಗಿದೆ. ಮತ್ತೆ ಕೆಲವರು ಇಂದಿಗೂ ಅವಕಾಶ ಮಿಸ್ ಮಾಡಿಕೊಂಡಿದ್ದಕ್ಕೆ ಇಂದಿಗೂ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಂತಹದ್ದೇ ಒಬ್ಬ ಸ್ಟಾರ್ ನಟನ ಕಥೆಯಿದು.

ಈ ನಟನಿಗೆ ವಿಶ್ವದ ಅತ್ಯುತ್ತಮ ನಿರ್ದೇಶಕನಿಂದ ಆಫರ್ ಬಂದಿತ್ತು. ಆತ ನಿರ್ದೇಶನ ಮಾಡುವುದಕ್ಕೆ ಹೊರಟಿದ್ದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದರು. ಸಿನಿಮಾ ಕಥೆ ಕೇಳಿ ಕೇವಲ 10 ನಿಮಿಷಗಳಲ್ಲಿಯೇ ಆ ಸ್ಟಾರ್ ನಟ ಬಿಗ್ ಆಫರ್‌ ಅನ್ನು ತಿರಸ್ಕರಿಸಿದ್ದರು. ಪರಿಣಾಮ ಅವರ ಪಾಲಿಗೆ ಬರುತ್ತಿದ್ದ 1400 ಕೋಟಿ ರೂಪಾಯಿ ಕಳೆದುಕೊಂಡಿದ್ದರು.

Hollywood actor Matt Damon rejected the James Cameron Avatar movie and lost huge remuneration

ಆತ ಬೇರೆ ಯಾರೂ ಅಲ್ಲ. ಹಾಲಿವುಡ್‌ನ ಜನಪ್ರಿಯ ನಟ ಮ್ಯಾಟ್ ಡ್ಯಾಮನ್. ಹಾಗೇ ಆಫರ್ ಕೊಟ್ಟ ವಿಶ್ವದ ಆ ಅತ್ಯುತ್ತಮ ನಿರ್ದೇಶಕ ಜೇಮ್ಸ್ ಕ್ಯಾಮರೂನ್. ಆ ಸಿನಿಮಾನೇ 'ಅವತಾರ್'. ಈ ವಿಷಯವನ್ನು ಸ್ವತ: ಹಾಲಿವುಡ್ ನಟ ಮ್ಯಾಟ್ ಡ್ಯಾಮನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಸಲಿಗೆ 'ಅವತಾರ್' ಅಂತಹ ಆಫರ್ ಕೈ ಬಿಟ್ಟಿದ್ಯಾಕೆ? ಅಂತಹದ್ದೇನಾಯ್ತು? ತಿಳಿಯಲು ಮುಂದೆ ಓದಿ.

'ಟೈಟಾನಿಕ್', 'ಟರ್ಮಿನೇಟರ್' ಅಂತಹ ವಿಶ್ವ ದಾಖಲೆ ಬರೆದ ಸಿನಿಮಾಗಳನ್ನು ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ್ದರು. ಸಿನಿ ಪ್ರಿಯರಿಗೆ ಹೊಸತನ್ನು ತೋರಿಸಬೇಕು ಅಂತ 'ಅವತಾರ್' ಕಥೆಯನ್ನು ಸಿದ್ಧ ಪಡಿಸಿದ್ದರು. ಇದು ಅವರ ಮಹತ್ವಕಾಂಕ್ಷೆಯ ಸಿನಿಮಾ ಆಗಿತ್ತು. ಈ ಕಾರಣಕ್ಕೆ 'ಅವತಾರ್' ಸಿನಿಮಾ ಲೀಡ್ ರೋಲ್‌ಗೆ ಮ್ಯಾಟ್ ಡ್ಯಾಮನ್ ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಆದರೆ, ಅದನ್ನು ಕೇವಲ ಹತ್ತು ನಿಮಿಷಗಳಲ್ಲಿ ತಿರಸ್ಕರಿಸಿದ್ದರು. ಈ ವಿಷಯವನ್ನು ಇತ್ತೀಚೆಗಿನ ಟಾಕ್ ಶೋನಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Hollywood actor Matt Damon rejected the James Cameron Avatar movie and lost huge remuneration

"ನನಗೆ ಸಣ್ಣ ಬಜೆಟ್ ಸಿನಿಮಾ ಅವತಾರ್‌ಗೆ ಆಫರ್ ಬಂದಿತ್ತು. ಆದರೆ, ನಾನು ತಿರಸ್ಕರಿಸಿದ್ದೆ. ಜೇಮ್ಸ್ ಕ್ಯಾಮರೂನ್ ನನಗೆ ಸಿನಿಮಾ ಗಳಿಕೆಯಲ್ಲಿ ಬರುವ ಶೇ.10ರಷ್ಟು ಹಣವನ್ನು ಸಂಭಾವನೆಯಾಗಿ ನೀಡುವುದಾಗಿ ಆಫರ್ ಕೊಟ್ಟಿದ್ದರು. ಇಷ್ಟು ದೊಡ್ಡ ಮೊತ್ತದ ಹಣವನ್ನು ತಿರಸ್ಕರಿಸಿದ ನನ್ನಂತಹ ಮತ್ತೊಬ್ಬ ನಟನನ್ನು ನೀವು ಎಂದಿಗೂ ಭೇಟಿಯಾಗುವುದಿಲ್ಲ" ಎಂದು ಆ ಟಾಕ್ ಶೋನಲ್ಲಿ ಹೇಳಿಕೊಂಡಿದ್ದರು.

'ಅವತಾರ್' ಬಿಡುಗಡೆ ಬಳಿಕ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿತ್ತು. 2009ರಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಗಳಿಸಿದ್ದು 2.7 ಬಿಲಿಯನ್ ಡಾಲರ್. ಇದರಲ್ಲಿ ಶೇ. 10 ರಷ್ಟು ಸಂಭಾವನೆ ಅಂದರೆ, 2009ರಲ್ಲೇ 1400 ಕೋಟಿ ರೂಪಾಯಿ ಎಂದು ಡಿಎನ್‌ಎ ವರದಿ ಮಾಡಿದೆ. ಆದರೆ, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿತ್ತು. ಆದರೆ, ಮ್ಯಾಟ್ ಡ್ಯಾಮನ್ ಕೇವಲ 10 ನಿಮಿಷದಲ್ಲಿ 'ಅವತಾರ್' ಸಿನಿಮಾವನ್ನು ತಿರಸ್ಕರಿಸಿದ್ದರು. ಬಳಿಕ ಆಸ್ಟ್ರೇಲಿಯಾದ ನಟ ಸ್ಯಾಮ್ ವರ್ಥಿಂಗ್‌ಟನ್‌ರನ್ನು ಆಯ್ಕೆ ಮಾಡಿಲಾಗಿತ್ತು. ಇವರು ಸಿನಿಮಾ ಗಳಿಸಿದ ಮೊತ್ತದಲ್ಲಿ ಶೇ.5ರಷ್ಟನ್ನು ಸಂಭಾವನೆ ರೂಪದಲ್ಲಿ ಪಡೆದಿದ್ದರು ಎನ್ನಲಾಗಿದೆ. ಅಂದರೆ, ಬರೋಬ್ಬರಿ 700 ಕೋಟಿ ರೂಪಾಯಿ.

More from Filmibeat

English summary
Matt Damon rejected James Cameron movie. After movie release he lost Rs.1440 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X