Mission Impossible 7 twitter review: 61ನೇ ವಯಸ್ಸಿನಲ್ಲೂ ಅದ್ಭುತ ಸ್ಟಂಟ್.. ಬುಲೆಟ್‌ಗಿಂತ ಸ್ಪೀಡ್.. ಟಾಮ್ ಕ್ರೂಸ್!

'ಮಿಷನ್ ಇಂಪಾಸಿಬಲ್' ಈ ಮೆಗಾ ಸಿನಿಮಾಗಳ ಬಗ್ಗೆ ಹೇಳಬೇಕಿಲ್ಲ. ಸಿನಿಪ್ರಿಯರಿಗೆ, ಅದರಲ್ಲೂ ಆಕ್ಷನ್ ಪ್ರಿಯರಿಗೆ ಈ ಸೀರಿಸ್ ತುಂಬಾನೇ ಚಿರಪರಿಚಿತ. ಸಾಹಸಮಯ ದೃಶ್ಯಗಳಲ್ಲಿ ಟಾಮ್ ಕ್ರೂಸ್ ಪ್ರತಿಬಾರಿ ಮಿಂಚಿದ್ದಾರೆ. ತಮ್ಮ ಅಭಿಮಾನಿಗಳಿಗೆ ಮೋಸ ಮಾಡಿದ್ದೇ ಇಲ್ಲ. ಅಷ್ಟೇ ಅಲ್ಲದೆ ಬಾಕ್ಸಾಫೀಸ್‌ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿವೆ.

ಇದೇ ಉತ್ಸಾಹದಲ್ಲಿ 'ಮಿಷನ್ ಇಂಪಾಸಿಬಲ್ 7' ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ಟಾಪ್ ಕ್ಯೂಸ್ ಸ್ಟಂಟ್‌ಗೆ ಫಿದಾ ಆಗಿದ್ದಾರೆ. 61 ವರ್ಷದ ನಟನ ಸಾಹಸಮಯ ದೃಶ್ಯಗಳನ್ನು ಕಂಡು ಕಳೆದೇ ಹೋಗಿದ್ದಾರೆ.

Hollywood star Tom Cruise starrer Mission Impossible twitter review in Kannada

'ಮಿಷನ್ ಇಂಪಾಸಿಬಲ್: ಡೆಡ್ ರೆಕನಿಂಗ್' ಪಾರ್ಟ್ 1 ಅಥವಾ 'ಮಿಷನ್ ಇಂಪಾಸಿಬಲ್ 7' ಅಂತ ಕರೆಯುವ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಟಾಮ್ ಕ್ರೂಸ್, ಹೇಲಿ ಅಟ್ವೆಲ್, ವಿಂಗ್ ರೇಮ್ಸ್, ಸೈಮನ್ ಪೆಗ್ ಅಂತ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಟ್ವಿಟರ್‌ನಲ್ಲಿ ಏನಂತಿದ್ದಾರೆ? ತಿಳಿಯೋಕೆ ಮುಂದೆ ಓದಿ.

ಈ ವರ್ಷ ಅದ್ಭುತ ಸಿನಿಮಾ

'ಮಿಷನ್ ಇಂಪಾಸಿಬಲ್ 7' ಸಿನಿಮಾ ಈ ಸರಣಿಯ ಅದ್ಭುತ ಸಿನಿಮಾ. ಹಾಗೇ ಮಿಷನ್ ಇಂಪಾಸಿಬಲ್ ಸಿನಿಮಾ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಲೇ ಇದೆ. 'ಮಿಷನ್ ಇಂಪಾಸಿಬಲ್ 7' ಈ ವರ್ಷದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು." ಎಂದು ನೆಟ್ಟಿಗರೊಬ್ಬರು ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ.


ಅದ್ಭುತ ಮನರಂಜನೆಯ ಸಿನಿಮಾ

'ಮಿಷನ್ ಇಂಪಾಸಿಬಲ್ 7' ಅದ್ಭುತ ಮನರಂಜನೆ ನೀಡಿದೆ. ಸೆಕೆಂಡ್‌ ಹಾಫ್‌ನಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಈ ಫ್ರಾಂಚೈಸಿಗೆ ಯೋಗ್ಯವಾದ ಸಿನಿಮಾ. ಹಾಗೇ ಪಾರ್ಟ್ 2 ಕುತೂಹಲವನ್ನು ಹೆಚ್ಚಿಸುತ್ತದೆ. ಹೇಲಿ ಅಟ್ವೆಲ್ ಈ ತಂಡದ ಅದ್ಭುತ ಸೇರ್ಪಡೆ." ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.


ಬುಲೆಟ್‌ಗಿಂತ ಸ್ಟೀಟ್.. ಟಾಮ್ ಕ್ರೂಸ್

"ಟಾಮ್ ಕ್ರೂಸ್ ಬುಲೆಟ್‌ಗಿಂತ ವೇಗವಾಗಿದ್ದಾರಾ ಎಂದು ಯಾರಾದರೂ ಗಡಿಯಾರ ಕಡೆ ಮುಖ ಮಾಡಿದ್ದಾರಾ ಇಲ್ವಾ ನನಗೆ ಗೊತ್ತಿಲ್ಲ. ಈತನ ಕಾಲುಗಳು ಮತ್ತು ಕರುಳು ಗಟ್ಟಿಯಾಗಿವೆ. ಟಾಮ್‌ ಕ್ರೂಸ್ ವೇಗದ ಓಟ ಆತನ ಸ್ಟಾರ್‌ಡಮ್‌ ಅನ್ನು ಉಳಿಸಿದೆ. ಈತನೇ ಏಕಮಾತ್ರ ಸೂಪರ್‌ ಪವರ್ ಆಗಿದ್ದಾನೆ." ಎಂದು ಇನ್ನೊಬ್ಬರು ನೆಟ್ಟಿಗರು ಹೇಳಿದ್ದಾರೆ.


ಮಿಷನ್ ಟಾಮ್ ಕ್ರೂಸ್

"ಮಿಷನ್: ಇಂಪಾಸಿಬಲ್ - ಡೆಡ್ ರೆಕನಿಂಗ್ ಪಾರ್ಟ್ 1 ನಿರೀಕ್ಷೆ ಮಾಡಿದಂತೆ ಇದೆ. ಸಿನಿಮಾ ಕಥೆ ಅದ್ಭುತ , ಟಾಮ್ ಕ್ರೂಸ್ ಪಾತ್ರ ನಂಬುವುದಕ್ಕೆ ಅಸಾಧ್ಯ, ಸೀಟಿನ ಅಂಚಿನಲ್ಲಿ ಕೂರಿಸುವ ಆಕ್ಷನ್, ಎಲ್ಲಕ್ಕಿಂತ ಮುಖ್ಯವಾಗಿ ಇದು ಮಿಷನ್ ಟಾಮ್ ಕ್ರೂಸ್.. ಒಟ್ಟಾರೆಯಾಗಿ ಹೇಳುವುದಾದರೆ ಈ ಸಿನಿಮಾ ಅದ್ಭುತ" ಎಂದಿದ್ದಾರೆ.


ಮಿಷನ್ ಇಂಪಾಸಿಬಲ್ ಥ್ರಿಲ್ಲಿಂಗ್

"ಟಾಮ್ ಕ್ರೂಸ್ ಅವರೆಲ್ಲರನ್ನೂ ರಕ್ಷಣೆ ಮಾಡಿದ್ದಾರೆ. ಈ ಹಿಂದಿನ ಸಿನಿಮಾಗಳಿಗೆಲ್ಲಕ್ಕಿಂತಲೂ ಅದ್ಭುತ ಸಿನಿಮಾ. 'ಮಿಷನ್: ಇಂಪಾಸಿಬಲ್ - ಡೆಡ್ ರೆಕನಿಂಗ್ ಭಾಗ 1' ಥ್ರಿಲ್ಲಿಂಗ್ ಆಗಿದೆ. ಹಾಗೆಯೇ ಮನರಂಜನೆಯಿದೆ. ಇದೊಂದು ಬ್ಲಾಕ್‌ಬಸ್ಟರ್ ಸಿನಿಮಾ" ಎಂದು ಟ್ವಿಟರ್‌ನಲ್ಲಿ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.


"ಈ ಸಿನಿಮಾ ನೋಡಲೇಬೇಕು"

"ಮಿಷನ್: ಇಂಪಾಸಿಬಲ್ - ಡೆಡ್ ರೆಕನಿಂಗ್ ಪಾರ್ಟ್ 1' ಮನಸ್ಸಿಗೆ ಮುದ ನೀಡುತ್ತದೆ. ಈ ಸಿನಿಮಾದಲ್ಲಿ ತಪ್ಪುಗಳಿಲ್ಲದೆ ಅತ್ಯುತ್ತಮವಾದ ಕಥೆಯೊಂದಿಗೆ ಮೂಡಿ ಬಂದಿದೆ. ಸಿನಿಮಾದ ಸ್ಟಾರ್ ಕಾಸ್ಟ್‌ ಕೂಡ ಅದ್ಭುತವಾಗಿದೆ. ಆಕ್ಷನ್ ದೃಶ್ಯಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಹಾಗೇ ಧ್ವನಿಯೂ ಕೂಡ ಅದ್ಭುತವಾಗಿದೆ. ಈ ಸಿನಿಮಾ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದುಕೊಂಡು ಹೋಗುತ್ತೆ" ಎಂದು ಹೇಳಿದ್ದಾರೆ.

More from Filmibeat

English summary
Hollywood star Tom Cruise starrer Mission Impossible twitter review in Kannada, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X