'ಅವತಾರ್ 2' ಬಾಕ್ಸಾಫೀಸ್ ಲೂಟಿ: ಈಗ 'ಅವತಾರ್ 3' ಮೇಲೆ ಕಣ್ಣು..ಯಾವಾಗ ರಿಲೀಸ್?
ಹಾಲಿವುಡ್ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲಿರೋ ಜನರಿಗೂ ಗೊತ್ತಿದೆ. ಜೇಮ್ಸ್ ಕೆಮರೂನ್ 'ಅವತಾರ್' ಕಲ್ಪನೆಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ 'ಅವತಾರ್ 2' ಕೂಡ ಬಾಕ್ಸಾಫೀಸ್ ಅನ್ನು ಲೂಟಿ ಮಾಡಿತ್ತು.
'ಅವತಾರ್ 2' ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ದಾಖಲಿಸಿದೆ. ವಿಶ್ವದಾದ್ಯಂತ ಈ ಸಿನಿಮಾ ಸುಮಾರು 3000 ರಿಂದ 3800 ಕೋಟಿ ರೂ. ಗಳಿಕೆ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಹೀಗಾಗಿ ಇದೇ ಜೋಷ್‌ನಲ್ಲಿ ಪಾರ್ಟ್ 3 ರಿಲೀಸ್ ಮಾಡುವುದಕ್ಕೆ ನಿರ್ದೇಶಕ ಜೇಮ್ಸ್ ಕೆಮರೂನ್ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ 'ಅವತಾರ್ 2' ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ಬೆನ್ನಲ್ಲೇ 'ಅವತಾರ್ 3' ರಿಲೀಸ್ ಆಗುವುದು ಯಾವಾಗ? ಸಿನಿಮಾದ ಕಥೆಯೇನು? 'ಅವತಾರ್ 3' ನಿರ್ದೇಶಕರು ಇಟ್ಟಿರೋ ಹೆಸರೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಅವತಾರ್ 3' ರಿಲೀಸ್ ಯಾವಾಗ?
'ಅವತಾರ್' ಸೀರಿಸ್ ಬಗ್ಗೆ ಕ್ರೇಜ್ ಕಮ್ಮಿಯೇನಿಲ್ಲ. ಜೇಮ್ಸ್ ಕೆಮರೂನ್ ಸೃಷ್ಟಿಸಿದ ಪ್ರಪಂಚದಲ್ಲಿ ಏನಾಗುತ್ತಿದೆ ಅಂತ ನೋಡುವುದಕ್ಕೆ ಸಿನಿಪ್ರಿಯರು ಕಾತುರರಾಗಿದ್ದಾರೆ. 'ಅವತಾರ್ 2' ಬಳಿಕ 'ಅವತಾರ್ 3' ಮೇಲೆ ಎಲ್ಲರ ಕಣ್ಣಿದೆ. ಮೂರನೇ ಸರಣಿಯನ್ನೂ ಜೇಮ್ಸ್ ಕೆಮರೂನ್ ನಿರ್ದೇಶನ ಮಾಡುತ್ತಿದ್ದಾರೆ.

ಬಹು ನಿರೀಕ್ಷೆಯ 'ಅವತಾರ್ 3' ಈ ವರ್ಷ ಬಿಡುಗಡೆಯಾಗುತ್ತಿಲ್ಲ. 2024, ಡಿಸೆಂಬರ್ 20ಕ್ಕೆ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ಟೀಮ್ ನಿರ್ಧರಿಸಿದೆ. 'ಅವತಾರ್ 4' 2026, ಡಿಸೆಂಬರ್, 'ಅವತಾರ್ 5' 2028, ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ.
'ಅವತಾರ್ 3'ಯಲ್ಲಿ ಏನು ನೋಡಬಹುದು?
'ಅವತಾರ್' ಸೀರಿಸ್‌ನ ಪ್ರಮುಖ ಪಾತ್ರದಲ್ಲಿ ಸ್ಯಾಮ್ ವರ್ಥಿಂಗ್ಟನ್, ಕರ್ನಲ್ ಸ್ಟೀಫನ್ ಲ್ಯಾಂಗ್, ಸಿಗೌರ್ನಿ ವೀವರ್ ಮತ್ತು ಜೊಯ್ ಸಲ್ಡಾನಾ ಸೇರಿದಂತೆ ಡೇವಿಡ್ ಥೆವ್ಲಿಸ್ ಮತ್ತು ಮಿಚೆಲ್ ಯೋಹ್ ಇಬ್ಬರು ಹೊಸ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಕಥೆ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.
ಪಂಡೋರಾದಲ್ಲಿ ನಾವಿ ಅನ್ನೋ ಹೊಸ ಗುಂಪನ್ನು ಪರಿಚಯ ಮಾಡಲಾಗುತ್ತಿದೆ ಎಂದು ಜೇಮ್ಸ್ ಕೆಮರೂನ್ ಹೇಳಿದ್ದಾರೆ. ಇವರನ್ನೂ 'ಬೂದಿ ಜನರು' ಎಂದು ಕರೆದಿದ್ದಾರೆ. ಇವರು ಬೆಂಕಿ ಜೊತೆ ಸಂಬಂಧವನ್ನು ಹೊಂದಿದ್ದಾರೆ. ಇವರಲ್ಲಿ ಒಳ್ಳೆಯವರು ಹಾಗೂ ಕೆಟ್ಟವರು ಇದ್ದು, 'ಅವತಾರ್ 3'ಯಲ್ಲಿ ಪರಿಚಯ ಮಾಡಲಾಗುತ್ತಿದೆ.
'ಅವತಾರ್ 3'ನಲ್ಲಿ ಹೊಸ ವಿಲನ್ಸ್
'ಅವತಾರ್ 3' ಸಾಕಷ್ಟು ಹೊಸ ಕ್ಯಾರೆಕ್ಟರ್‌ಗಳನ್ನು ಹೊತ್ತು ಬರುತ್ತಿದೆ. ಪಂಡೋರಾದಲ್ಲಿಯೇ ಹೊಸ ಪ್ರಪಂಚವೊಂದು ಸೃಷ್ಟಿಯಾಗಲಿದೆ. ಅಲ್ಲದೆ ಹೊಸ ವಿಲನ್‌ಗಳನ್ನು ಇಲ್ಲಿ ಪರಿಚಯ ಮಾಡಲಾಗುತ್ತಿದೆ. ಹಿಂದಿನ ಎರಡೂ ಸೀರಿಸ್‌ಗಳಿಗೆ ಹೋಲಿಸಿದರೆ ಹೊಸ ಅನುಭವ ನೀಡಲಿದೆ.
ಈಗಾಗಲೇ 'ಅವತಾರ್' ಸೀರಿಸ್‌ನ ಉಳಿದ ಮೂರು ಟೈಟಲ್‌ಗಳನ್ನೂ ರಿವೀಲ್ ಮಾಡಲಾಗಿದೆ. 'ಅವತಾರ್ 3'ಗೆ 'ಅವತಾರ್: ದಿ ಸೀಡ್ ಬೇರರ್' ಎಂದು ಇಡಲಾಗಿದೆ. 'ಅವತಾರ್ 4'ಗೆ 'ಅವತಾರ್:ತುಲ್ಕುನ್ ರೈಡರ್', 'ಅವತಾರ್ 5'ಗೆ 'ಅವತಾರ್: ಕ್ವೆಸ್ಟ್ ಫಾರ್ ಈವಾ' ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ 'ಅವತಾರ್ 3'ಯನ್ನು ಎದುರು ನೋಡುತ್ತಿದ್ದಾರೆ.


Click it and Unblock the Notifications











