ಕೊರೊನಾ ವೈರಸ್‌ಗೆ ಬಲಿಯಾದ ಜಪಾನ್ ಹಾಸ್ಯ ನಟ ಶಿಮುರಾ
ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಪಾನ್‌ನ ಖ್ಯಾತ ಹಾಸ್ಯ ನಟ ಕೆನ್ ಶಿಮುರಾ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೈರಸ್‌ಗೆ ಬಲಿಯಾದ ಜಪಾನ್‌ನ ಮೊದಲ ಸೆಲೆಬ್ರಿಟಿ ಎನಿಸಿದ್ದಾರೆ. ಭಾನುವಾರ ರಾತ್ರಿ ಅವರು ಮೃತಪಟ್ಟಿದ್ದು, ಅವರ ಸಾವಿಗೆ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
Recommended Video
K.G.F Kannada movie : ಕೆ.ಜಿ.ಎಫ್ ಸಿನಿಮಾದ ಮೂರನೇ ಡೈಲಾಗ್ ವೈರಲ್..! | Filmibeat Kannada
70 ವರ್ಷದ ಶಿಮುರಾ, ಜಪಾನ್‌ನ ಪ್ರಸಿದ್ಧ ಹಾಸ್ಯನಟರಲ್ಲಿ ಒಬ್ಬರು. 1970ರಲ್ಲಿ ನಟನೆಯ ವೃತ್ತಿ ಆರಂಭಿಸಿದ ಅವರು, 2016ರಲ್ಲಿ ಶ್ವಾಸಕೋಶದ ಶಸ್ತ್ರಚಿಕಿತ್ಸಗೆ ಒಳಗಾಗಿದ್ದರು. ಮಾರ್ಚ್ 19ರಂದು ಅವರಲ್ಲಿ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.

1970-1980ರ ದಶಕದಲ್ಲಿ ಟೆಲಿವಿಷನ್ ಹಾಸ್ಯ ಕಾರ್ಯಕ್ರಮಗಳಲ್ಲಿ ಶಿಮುರಾ ಇರಲೇಬೇಕು ಎನ್ನುವಷ್ಟು ಅವರು ಪ್ರಸಿದ್ಧರಾಗಿದ್ದರು. ಜಪಾನ್ ಸರ್ಕಾರ ಕೂಡ ಶಿಮುರಾ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.
English summary
Japanese comedian Ken Shimura (70) has died after hospitalised due to coronavirus.


Click it and Unblock the Notifications