ಸ್ಟೀವನ್ ಸ್ಪೀಲ್ ಬರ್ಗ್ ಚಿತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ

By Rajendra

ಕನ್ನಡದ ಅಪ್ಪಟ ಪ್ರತಿಭೆ ಪ್ರಕಾಶ್ ರೈ ಈಗಾಗಲೆ ತಾವೇನು ಎಂಬುದನ್ನು ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ತೋರಿಸಿಯಾಗಿದೆ. ಈಗ ಹಾಲಿವುಡ್ ನತ್ತ ಅವರ ಚಿತ್ತ ಹರಿದಿದೆ. ಎರಡು ಹಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಒಂದು ಸುಪ್ರಸಿದ್ಧ ನಿರ್ದೇಶಕ ಸ್ಟೀವಲ್ ಸ್ಪೀಲ್ ಬರ್ಗ್ ಜೊತೆಗಿನದು.

ಸ್ಪೀಲ್ ಬರ್ಗ್ ಅವರ ಡ್ರೀಮ್ ವರ್ಕ್ಸ್ ಹಾಗೂ ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಕಾಶ್ ರೈ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಚಿತ್ರೀಕರಿಸುತ್ತಿರುವುದು ವಿಶೇಷ.

ಕೆಲ ತಿಂಗಳುಗಳ ಹಿಂದೆ ಸ್ಪೀಲ್ ಬರ್ಗ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಈ ಚಿತ್ರದ ಬಗ್ಗೆ ಮಾತನಾಡಿದ್ದರು. ಈಗ ಅದರ ಚಿತ್ರಕಥೆಯನ್ನು ಪ್ರಕಾಶ್ ರೈ ಅವರಿಗೆ ನೀಡಿದ್ದಾರೆ. ಆದರೆ ಪ್ರಕಾಶ್ ರೈ ಮಾತ್ರ ಈ ಬಗ್ಗೆ ಮಾಧ್ಯಮಗಳಿಗೆ ಸುಳಿವು ನೀಡದೆ ಕೇವಲ ತಮ್ಮ ಆಪ್ತವಲಯದಲ್ಲಿ ಮಾತ್ರ ಹೇಳಿಕೊಂಡಿದ್ದು, ಅದು ಹೀಗ ಬಹಿರಂಗವಾಗಿದೆ.

ಪ್ರಕಾಶ್ ರೈ ಅಭಿನಯಿಸಲಿರುವ ಇನ್ನೊಂದು ಹಾಲಿವುಡ್ ಚಿತ್ರದ ಹೆಸರು 'ಸಿಕ್ಸ್ ಸಸ್ಪಕ್ಟ್ಸ್'. ಈ ಚಿತ್ರ ವಿಕಾಸ್ ಸ್ವರೂಪ್ ಅವರ ಕಾದಂಬರಿ ಆಧರಿಸಿದ್ದು. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಅರ್ಜೆಂಟೀನಾದ ನಿರ್ದೇಶಕ ಪಾಬ್ಲೋ ಟ್ರಾಪೆರೋ. ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ವಿಕಾಸ್ ಸ್ವರೂಪ್ ಅವರು ಬರೆದಿದ್ದ 'Q & A' ಕಾದಂಬರಿ 'ಸ್ಲಂಡಾಗ್ ಮಿಲಿಯನೇರ್' ಆಗಿ ಆಸ್ಕರ್ ಗೆದ್ದಿದ್ದು ಗೊತ್ತೇ ಇದೆ.

ಪ್ರಕಾಶ್ ರೈ ಅವರ ಪ್ರಕಾರ, ಸ್ಪೀಲ್ ಬರ್ಗ್ ಜೊತೆಗಿನ ಚಿತ್ರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸದ್ಯಕ್ಕೆ ಚಿತ್ರಕಥೆ ಓದುತ್ತಿದ್ದೇನೆ ಎಂದು ಅವರು 'ಬೆಂಗಳೂರು ಮಿರರ್' ಪತ್ರಿಕೆ ಜೊತೆ ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರೈ ಅವರಿಗೆ ಈಗಾಗಲೆ ಹಿತೈಶಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಇತ್ತೀಚೆಗಷ್ಟೇ ಪ್ರಕಾಶ್ ರೈ ಅವರು ಕನ್ನಡದಲ್ಲಿ 'ಒಗ್ಗರಣೆ' ಚಿತ್ರ ಆರಂಭಿಸಿದ್ದರು. ಮಲಯಾಳಂನಲ್ಲಿ ನಿರ್ಮಾಣವಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಸಾಲ್ಟ್ ಅಂಡ ಪೆಪ್ಪರ್' ಚಿತ್ರದ ರೀಮೇಕ್ 'ಒಗ್ಗರಣೆ'. (ಏಜೆನ್ಸ್ಸೀಸ್)

More from Filmibeat

English summary
Kananda actor Prakash Raj is all set to sign two Hollywood projects, including one by the legendary Steven Spielberg. Prakash has been selected as one of the main actors in Six Suspects directing by Pablo Trapero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X