»   » ಮೈಸೂರಿನಲ್ಲಿ 'ಒಗ್ಗರಣೆ' ಹಾಕಲಿರುವ ಪ್ರಕಾಶ್ ರೈ

ಮೈಸೂರಿನಲ್ಲಿ 'ಒಗ್ಗರಣೆ' ಹಾಕಲಿರುವ ಪ್ರಕಾಶ್ ರೈ

Posted By:
Subscribe to Filmibeat Kannada

ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ ಬಾಲಿವುಡ್ ಚಿತ್ರರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕನ್ನಡದ ಹೆಮ್ಮೆಯ ನಟ ಪ್ರಕಾಶ್ ರೈ. ಈಗವರು ಕನ್ನಡದಲ್ಲಿ ಮತ್ತೊಂದು ಸಿನಿಮಾ ಮಾಡಲು ಸಿದ್ಧನಾಗಿದ್ದಾರೆ. ಚಿತ್ರದ ಹೆಸರು 'ಒಗ್ಗರಣೆ. ಸೆಪ್ಟಂಬರ್ ತಿಂಗಳ 26ನೇ ತಾರೀಖು ಮೈಸೂರಲ್ಲಿ ಚಿತ್ರೀಕರಣದ ಆರಂಭ.

ಪ್ರಕಾಶ್ ರೈ ಸ್ವತಃ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ಪ್ರಕಾಶ್ ರೈ, ಸ್ನೇಹಾ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಊರ್ವಶಿ, ಸಂಯುಕ್ತ ಬೆಳವಾಡಿ, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ.


ಇಳಯರಾಜ ಸಂಗೀತ, ಪ್ರೀತಾ ನಾಗರಾಜ್ ಛಾಯಾಗ್ರಹಣ, ಕದಿರ್ ಕಲಾನಿರ್ದೇಶನ ಇರುವ ಈ ಚಿತ್ರವು ಏಕಕಾಲದಲ್ಲಿ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಾ ಇದೆ. ಮಲಯಾಳಂನಲ್ಲಿ ನಿರ್ಮಿಸಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಸಾಲ್ಟ್ ಅಂಡ ಪೆಪ್ಪರ್' ಚಿತ್ರದ ರೀಮೇಕ್ 'ಒಗ್ಗರಣೆ'.

ಈ ಹಿಂದೆ ಪ್ರಕಾಶ್ ರೈ ಅವರು ನಾನು ನನ್ನ ಕನಸು ಎಂಬ ಚಿತ್ರವನ್ನು ಮಾಡಿದ್ದರು. ಇದು ತಮಿಳಿನ ಹಿಟ್ ಚಿತ್ರ ಅಭಿಯುಂ ನಾನುಂ ಚಿತ್ರದ ರೀಮೇಕ್. ಒಗ್ಗರಣೆ ಚಿತ್ರಕ್ಕೆ ಈ 'ಹುರುಳಿಕಾಯ್ ಬಿರಿಯಾನಿ' ಎಂದು ಹೆಸರಿಡಲಾಗಿತ್ತು. (ಒನ್ಇಂಡಿಯಾ ಕನ್ನಡ)

English summary
Actor Prakash Rai returns to Kannada cinema production again. The new film of Prakash Rai titles as Oggarane, is starting on September 26 in Mysore. Prakash Rai, Sneha, Urvashi, Dr SPB, Samyuktha Belawadi, Achyuth Kumar, Sihikahi Chandru and others are in the cast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada