ರಸ್ತೆ ಅಪಘಾತದಲ್ಲಿ ಹಾಸ್ಯನಟನಿಗೆ ಗಂಭೀರ ಗಾಯ
ಹಾಲಿವುಡ್ ಚಿತ್ರರಂಗದ ಹಾಸ್ಯ ನಟ ಕೇವಿನ್ ಹರ್ಟ್ ಪ್ರಯಾಣಿಸುತ್ತಿದ್ದ ಕಾರು ಲಾಸ್ ಏಂಜಲೀಸ್ ಸಮೀಪದಲ್ಲಿ ಅಪಘಾತಕ್ಕೆ ಒಳಗಾಗಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಕೇವಿನ್ ಹರ್ಟ್ ಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ಕೇವಿನ್ ಹರ್ಟ್ ಜೊತೆಯಲ್ಲಿ ಮತ್ತಿಬ್ಬರು ಕಾರಿನಲ್ಲಿ ಇದ್ದರು ಎಂದು ತಿಳಿದು ಬಂದಿದ್ದು, ಕೇವಿನ್ ಮತ್ತು ಆತನ ಡ್ರೈವರ್ ಗೆ ಬೆನ್ನಿಗೆ ಗಾಯವಾಗಿದೆಯಂತೆ. ಇನ್ನೊಬ್ಬರಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕ್ಯಾಲಿಫೋರ್ನಿಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 'Plymouth Barracuda' ಕಾರಿನಲ್ಲಿ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತಕ್ಕೆ ಸಂಭವಿಸಿದೆ. ಕಾರಿನಲ್ಲಿ ಮೂವರಿದ್ದರು. ಮೂವರಿಗೂ ಗಾಯವಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ'' ಎಂದು ಮಾಹಿತಿ ನೀಡಿದ್ದಾರೆ.
ದಿ ಸೀಕ್ರೆಟ್ ಲೈಪ್ ಆಫ್ ಪೆಟ್ಸ್ ಮತ್ತು ಜುಮಾಂಜಿ ಚಿತ್ರಗಳಲ್ಲಿ ನಟಿಸಿರುವ ಕೇವಿನ್ ತಮ್ಮ ನಟನೆ ಮೂಲಕ ಖ್ಯಾತಿ ಗಳಿಸಿಕೊಂಡಿದ್ದರು. 2019 ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











